ನಟಿ ರಕುಲ್ ಪ್ರೀತ್ ಹೊಸ ಹಾಟ್‌ಫೋಟೋ ವೈರಲ್

ಮುಂಬೈ, ಜು ೨೫- ಬಹುಭಾಷಾ ನಟಿ ರಕುಲ್ ಪ್ರೀತ್ ಹೊಸ ಹಾಟ್ ಫೋಟೋಶೂಟ್‌ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್‌ಎಬ್ಬಿಸಿದೆ.

ನಟಿ ರಕುಲ್ ಪ್ರೀತ್ ಸಿಂಗ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಕನ್ನಡ ಚಿತ್ರರಂಗದಿಂದಾದರೂ, ಹೆಸರು, ಕೀರ್ತಿ ಸಂಪಾದಿಸಿದ್ದು ತೆಲುಗು ಚಿತ್ರರಂಗದ ಮೂಲಕ. ಆನಂತರ ಅವರು ಹಿಂದಿ, ತಮಿಳಿಗೂ ಕಾಲಿಟ್ಟು ಯಶಸ್ಸು ಪಡೆದುಕೊಂಡು ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.

ಕನ್ನಡ ಗಿಲ್ಲಿ ಸಿನಿಮಾದ ನಟಿ ರಕುಲ್ ಪ್ರೀತ್ ಸಿಂಗ್ ಬಗ್ಗೆ ಯಾರಿಗೆ ಗೊತ್ತಿಲ್ಲ. ಒಂದು ಟೈಮ್ನಲ್ಲಿ ಎಲ್ಲಾ ಭಾಷೆಗಳಲ್ಲೂ ಇವರದ್ದೇ ಹವಾ. ಆದರೆ ಈಗ ಅವಕಾಶಗಳ ಕೊರತೆಯಿಂದ ಬಳಲುತ್ತಿದ್ದಾರಂತೆ. ಆದರೂ ಅವರ ಮಾದಕತೆಗೆ ಯಾವುದೇ ಕೊರತೆ ಇಲ್ಲ ಎನ್ನಬಹುದು.

ಹೌದು, ಏಕೆಂದರೆ ರಕುಲ್ ಸಖತ್ ಫೋಟೋಶೂಟ್ ಮಾಡಿಸುತ್ತಿದ್ದು, ಆಗ್ಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮಹೊಸ ಹೊಸ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ವೈಟ್ ಡ್ರೆಸ್ ನಲ್ಲಿ ಹಂಚಿಕೊಂಡಿರುವ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ಈ ಪೋಟೋಗೆ ಫ್ಯಾನ್ಸ್ ಫಿದಾ ಆಗಿದ್ದು, ರಕುಲ್ ಲುಕ್ಗೆ ನೆಟ್ಟಿಗರು ಮನಸೋತಿದ್ದಾರೆ.

ಪ್ರಸ್ತುತ ಅಜಯ್ ದೇವಗನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಥ್ಯಾಂಕ್ ಗಾಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಂದಿನ ದೀಪಾವಳಿಗೆ ಬಿಡುಗಡೆಯಾಗಲಿದೆ. ರಕುಲ್ ಉದ್ಯಮಿ ಒಬ್ಬರ ಜೊತೆ ವಿವಾಹವಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೇ ಇತ್ತೀಚೆಗೆ ಇಬ್ಬರೂ ತಾಜ್ಮಹಲ್ಗೆ ಭೇಟಿ ಕೊಟ್ಟಿದ್ದರು. ಈ ಜೋಡಿಯು ೨೦೨೨ ರಲ್ಲಿ ಮದುವೆಯಾಗುವ ನಿರೀಕ್ಷೆಯಿದೆ.