ನಟಿ ಮೇಘನಾ ರಾಜ್ ಪುತ್ರನ ತೊಟ್ಟಿಲು ಶಾಸ್ತ್ರ


ಬೆಂಗಳೂರು, ನ. ೧೨- ನಟಿ ಮೇಘನಾ ರಾಜ್ ಹಾಗೂ ದಿವಂಗತ ನಟ ಚಿರಂಜೀವಿ ಸರ್ಜಾ ಪುತ್ರನ ತೊಟ್ಟಿಲು ಶಾಸ್ತ್ರ ನಗರದಲ್ಲಿಂದು ನಡೆಯಿತು.
ಜೆಪಿ ನಗರದಲ್ಲಿರುವ ಹಿರಿಯ ಕಲಾವಿದ ಸುಂದರ್ ರಾಜ್ ಅವರ
ನಿವಾಸದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಚಿರಂಜೀವಿ ಸರ್ಜಾ ಕುಟುಂಬದ ಸದಸ್ಯರು ಹಾಗೂ ಮೇಘನಾ ಕುಟುಂಬದ ಸದಸ್ಯರು ಸಂತಸದಲ್ಲಿ ಪಾಲ್ಗೊಂಡರು. ಕಳೆದ ಜುಲೈನಲ್ಲಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ದು:ಖದಲ್ಲಿದ್ದ ಎರಡೂ ಕುಟುಂಬಗಳಿಗೆ ಪುತ್ರನ ಆಗಮನ ಖುಷಿ ತರಿಸಿದೆ.
ಕಣ್ಣೀರಿಟ್ಟ ಮೇಘನಾ
ಪುತ್ರನ ತೊಟ್ಟಿಲು ಶಾಸ್ತ್ರ ಸಮಾರಂಭದಲ್ಲಿ ಪುತ್ರನೇ ನನಗೆ ಶಕ್ತಿ, ಅವನ ಆಸೆಗಳನ್ನು ಈಡೇರಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.
ಪತಿ ಚಿರಂಜೀವಿ ಇದ್ದಿದ್ದರೆ, ಇನ್ನಷ್ಟು ಖುಷಿಪಡುತ್ತಿದ್ದರು ಎಂದು ಪತಿಯನ್ನು ನೆನೆದು ಮೇಘನಾ ಕಣ್ಣೀರಿಟ್ಟರು. ಮಗನ ಬಗ್ಗೆ ಚಿರು ಅಪಾರ ಕನಸು ಕಂಡಿದ್ದರು ಆ ಕನಸನ್ನು ತಾವು ನನಸು ಮಾಡುವ ಮೂಲಕ ಅವರ ಆಸೆಯನ್ನು ಈಡೇರಿಸುತ್ತೇನೆ ಎಂದರು.
ಚಿರು ಅಗಲಿಕೆ ನೋವಿನ ಸಂಗತಿ, ಅದನ್ನು ಎಂದಿಗೂ ಮರೆಯಲು ಆಗುವುದಿಲ್ಲ. ಆ ನೋವನ್ನು ಮಗನ ನಗುಮುಖ ನೋಡಿ ನೋವು ಮರೆಯುತ್ತೇನೆ ಎಂದರು.ಧ್ರುವ ಸರ್ಜಾ ಅವರು, ಮುದ್ದಾದ ತೊಟ್ಟಿಲನ್ನು ಮಗನಿಗೆ ನೀಡಿದ್ದಾರೆ.
ಇದು ಖುಷಿಯ ಸಂಗತಿ ಎಂದರು. ಕೆಲವು ಘಟನೆಗಳನ್ನು ಈಗಲೂ ನೆನೆಸಿಕೊಂಡರೆ ಕಣ್ಣೀರು ಬರುತ್ತದೆ ಎಂದರು.