ನಟಿ ಮೆರೀನ್ ಇಸ್ಲಾಂಗೆ ಮತಾಂತರ

ನವದೆಹಲಿ, ನ ೯- ಫ್ರೆಂಚ್ ನ ಕಿರುತೆರೆ ಲೋಕದ ಜನಪ್ರಿಯ ನಟಿ ಕಮ್ ಮಾಡೆಲ್ ಮೆರಿನ್ ಅಲ್ ಹೈಮರ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ,
ಈ ಕ್ಷಣಗಳು ತನ್ನ ಜೀವನದ “ಸಂತೋಷದ ದಿನ” ಎಂದು ಹೇಳಿಕೊಂಡಿದ್ದಾರೆ. ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಘೋಷಿಸಿದ ಎರಡು ದಿನಗಳ ನಂತರ ಹಿಮರ್ ಮೆಕ್ಕಾದಲ್ಲಿ ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಕಾಬಾ ಬಳಿ ಹಿಜಾಬ್‌ಧಾರಿಯಾಗಿ ತನ್ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ
ಈ ಕ್ಷಣದಲ್ಲಿ ಅನುಭವಿಸುವ ಸಂತೋಷ ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಯಾವುದೇ ಪದಗಳಿಲ್ಲ. ಆಧ್ಯಾತ್ಮಿಕ ಪ್ರಯಾಣವು ನನ್ನನ್ನು ಮೇಲಕ್ಕೆತ್ತಲು ಮತ್ತು ಮಾರ್ಗದರ್ಶನ ಮಾಡಲು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು “ಆತ್ಮ, ಹೃದಯದ ಆಯ್ಕೆ” ಎಂದು ಅವರು ಹೇಳಿದರು.ಫ್ರಾನ್ಸ್‌ನ ರಿಯಾಲಿಟಿ ಟೆಲಿವಿಷನ್ ಶೋನಲ್ಲಿ ಹಿಮರ್ ಕಾಣಿಸಿಕೊಂಡಿದ್ದಾರೆ.
ಫ್ರೆಂಚ್‌ಕಿರುತೆರೆ ಲೋಕದ ಜನಪ್ರಿಯ ನಟಿ ಕಮ್ ಮಾಡೆಲ್ ಮೆರಿನ್ ಅಲ್ ಹೈಮರ್ ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಇನ್‌ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ.
ಕಾಬಾದಲ್ಲಿ ಸ್ನೇಹಿತೆ ಜೊತೆ ಕುಳಿತುಕೊಂಡು ಮೆರಿನ್ ಅಲ್ ಹೈಮರ್ ಶಹಾದತ್ ಉಚ್ಛಾರಣೆ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
೧.೫ ಮಿಲಿಯನ್ ಫಾಲೋವರ್ಸ್‌ಹೊಂದಿರುವ ಮೆರಿನ್ ಅಲ್ ಹೈಮರ್ ಮತಾಂತಗೊಂಡಿರುವುದಕ್ಕೆ ಕಾರಣ ತಿಳಿಸಿದ್ದಾರೆ. ನನ್ನ ಮನಸ್ಸು, ಹೃದಯ ಮತ್ತು ಆತ್ಮವನ್ನು ಸಮನ್ವಯಗೊಳಿಸಿದ ಪರಿಣಾಮವಾಗಿ ಇಸ್ಲಾಂ ಆಯ್ಕೆ ಮಾಡಿಕೊಂಡೆ.
ದಕ್ಷಿಣ ಫ್ರಾನ್ಸ್‌ನ ಬೋರ್ಡೆಕ್ಸ್‌ನಲ್ಲಿ ಜುಲೈ ೧೯೯೩ರಲ್ಲಿ ಜನಿಸಿದ ಮರೀನ್ ಎಲ್ ಹಿಮರ್ ಮೂಲತಃ ಮೊರೊಕನ್- ಈಜಿಪ್ಟ್‌ನವರು. ಮರೀನ್‌ಗೆ ಓಸಿಯಾನ್ ಎಲ್ ಹಿಮರ್ ಎಂಬ ಅವಳಿ ಸಹೋದರಿ ಇದ್ದಾರೆ. ತಮ್ಮ ತಂದೆಯ ಜೊತೆ ಮಾತನಾಡುವಾಗ ಮರಿನ್ ಇಸ್ಲಾಂ ಧರ್ಮಕ್ಕೆ ಆಕರ್ಷಿತಳಾಗಿದ್ದಾರೆ. ಮತಾಂತರಗೊಂಡು ಒಂದು ತಿಂಗಳು ಕಳೆದಿದೆ ಈಗ ತಿಳಿಸುತ್ತಿದ್ದಾರೆ ಎಂದು ಫ್ರೆಂಚ್‌ಮಾಧ್ಯಮವೊಂದರಲ್ಲಿ ವರದಿ ಮಾಡಿದ್ದಾರೆ.