ನಟಿ ಮಹಾಲಕ್ಷ್ಮಿ ರವೀಂದ್ರನ್ ವಿವಾಹ ಚರ್ಚೆಗೆ ಗ್ರಾಸ

ಹೈದರಾಬಾದ್, ಸೆ. ೩- ಟಿವಿ ಆಂಕರ್ ಮತ್ತು ನಟಿ ಮಹಾಲಕ್ಷ್ಮಿ ತನಗಿಂತ ವಯಸ್ಸಿನಲ್ಲಿ ದೊಡ್ಡವರಾದ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ವಿವಾಹವಾಗಿರುವ ಸುದ್ದಿ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ.ನಟಿ ಮಹಾಲಕ್ಷ್ಮಿ ಹಾಗೂ ಚಲನಚಿತ್ರ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ರವೀಂದ್ರನ್ ಜೊತೆ ವೈವಾಹಿಕ ಜೀವನ ಆರಂಭಿಸಲು ನಟಿ ತುಂಬಾ ಉತ್ಸುಕರಾಗಿದ್ದು, ಅವರಿಗೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಆದರೂ ಈ ಇಬ್ಬರನ್ನು ಒಟ್ಟಿಗೆ ನೋಡಿ ನೆಟ್ಟಿಗರು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದು ಉಂಟು.ಇವರಿಬ್ಬರನ್ನು ಒಟ್ಟಿಗೆ ನೋಡಿದ ಜನ ಆರಂಭದಲ್ಲಿ ಸಿನಿಮಾ ಶೂಟಿಂಗ್ ಎಂದು ಭಾವಿಸಿದ್ದರು. ಆದರೆ ನಂತರ ರವೀಂದ್ರನ್ ಮತ್ತು ಮಹಾಲಕ್ಷ್ಮಿ ಅವರೇ ಮದುವೆಯನ್ನು ಖಚಿತಪಡಿಸಿದ್ದಾರೆ. ಇಬ್ಬರ ಮದುವೆಯ ಫೋಟೋ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅವರಿಬ್ಬರೂ ತಿರುಪತಿಯಲ್ಲಿ ವಿವಾಹವಾದರು. ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ಸಹ ಮಾಡಿದರು. ಮದುವೆಯ ನಂತರ, ಈ ಮಧ್ಯೆ, ಟಿವಿ ಆಂಕರ್ ಮಹಾಲಕ್ಷ್ಮಿ ಮತ್ತು ರವೀಂದ್ರನ್ ಚಂದ್ರಶೇಖರನ್ ಅವರ ವಯಸ್ಸಿನ ಅಂತರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಮಹಾಲಕ್ಷ್ಮಿ ೨೧ ಮಾರ್ಚ್ ೧೯೯೦ ರಂದು ಜನಿಸಿದರು. ಅವರ ವಯಸ್ಸು ೩೨ ವರ್ಷಗಳು. ಆದರೆ ಅವರ ಎರಡನೇ ಪತಿ ರವೀಂದ್ರನ್ ಚಂದ್ರಶೇಖರನ್ ೧ ಜೂನ್ ೧೯೭೦ ರಂದು ಜನಿಸಿದರು. ಅವರಿಗೆ ೫೨ ವರ್ಷ. ಈ ರೀತಿಯಾಗಿ, ಇಬ್ಬರ ವಯಸ್ಸಿನಲ್ಲೂ ೨೦ ವರ್ಷಗಳ ವ್ಯತ್ಯಾಸವಿದೆ. ಮಹಾಲಕ್ಷ್ಮಿ ನಿರ್ಮಾಪಕ ರವೀದ್ರನ್ ಚಂದ್ರಶೇಖರನ್ ಅವರಿಗಿಂತ ೨೦ ವರ್ಷ ಚಿಕ್ಕವರು.
ಮಹಾಲಕ್ಷ್ಮಿ ಈಗಾಗಲೇ ಮದುವೆಯಾಗಿದ್ದಾರು. ಎಂಟು ವರ್ಷದ ಮಗನೂ ಇದ್ದಾನೆ. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಮಹಾಲಕ್ಷ್ಮಿ ಕೆಲ ಕಾಲ ಒಂಟಿ ಜೀವನ ನಡೆಸುತ್ತಿದ್ದರು. ಇದೀಗ ನಿರ್ಮಾಪಕ ರವೀಂದ್ರನ್ ಚಂದ್ರಶೇಖರನ್ ಅವರನ್ನು ವಿವಾಹವಾದ ಬಳಿಕ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ಅನಿಲ್ ಕುಮಾರ್ ಅವರನ್ನು ಈ ಹಿಂದೆ ಮದುವೆಯಾಗಿ ವಿಚ್ಚೇದನ ಪಡೆದಿದ್ದಾರೆ ಎನ್ನಲಾಗಿದೆ.