ನಟಿ ಪ್ರಿಯಾಂಕಾ ಹುಟ್ಟುಹಬ್ಬ ಸಂಭ್ರಮ


ಬೆಂಗಳೂರು, ನ ೧೨- ಬೆಂಗಾಳಿ ಚೆಲುವೆ ಪ್ರಿಯಾಂಕಾ ಉಪೇಂದ್ರ ಗೆ ಇಂದು ೪೩ನೇ ಹುಟ್ಟುಹಬ್ಬದ ಸಂಭ್ರಮ.
ಪ್ರಿಯಾಂಕಾ ಹುಟ್ಟುಹಬ್ಬಕ್ಕೆ ವಿಶೇಷವಾಗಿ ನಿನ್ನೆ ಅವರ ಹೊಸ ಸಿನಿಮಾದ ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಪ್ರಿಯಾಂಕಾ ಅವರಿಗೆ ಸ್ನೇಹಿತರು, ಅಭಿಮಾನಿಗಳು ಹಾಗೂ ಸ್ಯಾಂಡಲ್ ವುಡ್ ಗಣ್ಯರು ಶುಭ ಕೋರಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ಬಂಗಾಳಿ ಕುಟುಂಬಕ್ಕೆ ಸೇರಿದ ಪ್ರಿಯಾಂಕ ಹುಟ್ಟಿದ್ದು ಕೊಲ್ಕತ್ತಾದಲ್ಲಿ ಆದರೂ ಅವರು ಬೆಳೆದದ್ದು ಹಾಗೂ ವಿದ್ಯಾಭ್ಯಾಸ ಮಾಡಿದ್ದು ಅಮೆರಿಕದಲ್ಲಿ.
ಕಾಲೇಜು ಬಳಿಕ ಜಾಹೀರಾತುಗಳಲ್ಲಿ ನಟಿಸಲು ಆರಂಭಿಸಿದ ಪ್ರಿಯಾಂಕಾ ’ಹೊಟತ್ ಬ್ರಿಸ್ಟಿ’ ಎಂಬ ಬೆಂಗಾಳಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ನಂತರ ಒಂದೆರಡು ಹಿಂದಿ, ಒಡಿಯಾ ಚಿತ್ರಗಳಲ್ಲಿ ನಟಿಸಿದ ಅವರು ’ರಾ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಬಂದರು. ಉಪೇಂದ್ರ ಜೊತೆ ’ರಾ’ ಚಿತ್ರದಲ್ಲಿ ನಟಿಸಿದ ಪ್ರಿಯಾಂಕಾ, ಡಾ. ವಿಷ್ಣುವರ್ಧನ್ ಜೊತೆ ’ಕೋಟಿಗೊಬ್ಬ ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು
ಸ್ಟಾರ್ ನಟಿಯಾದರೂ ಪ್ರಿಯಾಂಕ ಭಾರತೀಯ ಸಂಪ್ರದಾಯವನ್ನು ಮಾತ್ರ ಮರೆತಿಲ್ಲ. ತುಂಬು ಕುಟುಂಬದಲ್ಲಿ ಎಲ್ಲರನ್ನೂ ಗೌರವಿಸುತ್ತಾ ಅಪ್ಪಟ ಕರ್ನಾಟಕದ ಸೊಸೆಯಾಗಿ ಗಮನ ಸೆಳೆದಿದ್ದಾರೆ.