ನಟಿ ತಾರಾ ಖಾತೆ ಹ್ಯಾಕ್

ಬೆಂಗಳೂರು,ಡಿ.೨೧-ಇತ್ತೀಚೆಗೆ ಖ್ಯಾತ ವ್ಯಕ್ತಿಗಳ ಅಕೌಂಟ್ ಹ್ಯಾಕ್ ಮಾಡಿ ಅವರ ಹೆಸರಿನಲ್ಲಿ ಇಲ್ಲಸಲ್ಲದ ವಿಚಾರಗಳನ್ನು ಪೋಸ್ಟ್ ಮಾಡುವುದು ಸಾಮಾನ್ಯವಾಗಿದೆ.
ಇದೀಗ ಕನ್ನಡ ಚಿತ್ರರಂಗದ ಹಿರಿಯ ನಟಿ ಹಾಗೂ ರಾಜಕಾರಣಿ ತಾರಾ ಅವರ ಫೇಸ್‌ಬುಕ್ ಖಾತೆಯನ್ನು ಸೈಬರ್ ವಂಚಕರು ಹ್ಯಾಕ್ ಮಾಡಿ ಅನಗತ್ಯ ವಿಷಯಗಳ ಪೋಸ್ಟ್‌ಗಳನ್ನು ಮಾಡಿದ್ದಾರೆ. ತನ್ನ ಫೇಸ್‌ಬುಕ್ ಐಡಿ ಮೂಲಕ ಸ್ನೇಹಿತರನ್ನು ಟ್ಯಾಗ್ ಮಾಡಿ ಅನಗತ್ಯ ಸಂದೇಶಗಳನ್ನು ಕಳುಹಿಸುತ್ತಿದ್ದ ಆರೋಪದ ಮೇಲೆ ತಾರಾ ದಕ್ಷಿಣ ವಿಭಾಗದ ಸೇನ್ ಠಾಣೆಗೆ ದೂರು ನೀಡಿದ್ದಾರೆ. ಘಟನೆಗೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಹಿರಿಯ ನಟಿ, ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ನಟಿ ತಾರಾಅನುರಾಧಾ ಮತ್ತು ತಾರಾಅನುರಾಧಾ ವೇಣು ಎಂಬ ಎರಡು ಖಾತೆಗಳನ್ನು ಬಳಸುತ್ತಿದ್ದಾರೆ. ಇತ್ತೀಚೆಗೆ ತಾರಾಅನುರಾಧಾ ವೇಣು ಖಾತೆಯನ್ನು ಹೆಚ್ಚಾಗಿ ಬಳಸುತ್ತಿದ್ದರು. ಅಷ್ಟರಲ್ಲಿ ಸ್ನೇಹಿತರೊಬ್ಬರು ತಾರಾಗೆ ಲಿಂಕ್ ಕಳುಹಿಸಿದರು. ಆಗ ವಿಷಯ ಬಹಿರಂಗವಾಗಿದೆ. ತಾರಾಅನುರಾಧ ಎಂಬ ಖಾತೆಯಲ್ಲಿ ಸಮಸ್ಯೆಯನ್ನು ಪೋಸ್ಟ್ ಮಾಡಲಾಗಿದೆ. ಆದರೆ ಅದು ನಾನು ಮಾಡಿದ ಪೋಸ್ಟ್ ಅಲ್ಲ. ನಾನು ನನ್ನ ಖಾತೆಯನ್ನು ತೆರೆದಾಗ ಆ ಪೋಸ್ಟ್ ಕಾಣಿಸುವುದಿಲ್ಲ. ಆದರೆ ನೀವು ಲಿಂಕ್ ತೆರೆದರೆ, ಆ ಪೋಸ್ಟ್ ಗೋಚರಿಸುತ್ತದೆ. ಹಾಗಾಗಿ ಆ ಪೋಸ್ಟ್ ಡಿಲೀಟ್ ಮಾಡುವಂತೆ ನಟಿ ತಾರಾ ದೂರು ನೀಡಿದ್ದಾರೆ ಎನ್ನಲಾಗಿದೆ.