ನಟಿ ಟಬುಗೆ ೫೦ರ ಸಂಭ್ರಮ

ಮುಂಬೈ, ನ. ೪- ಬಾಲಿವುಡ್ ನಟಿ ಟಬು ಅವರಿಗೆ ಇಂದು ೫೦ರ ಹುಟ್ಟುಹಬ್ಬದ ಸಂಭ್ರಮ.
ಈ ಹಿನ್ನೆಲೆಯಲ್ಲಿ ಬಾಲಿವುಡ್ ನ ನಟ, ನಟಿಯರು, ನಿರ್ದೇಶಕರು ಶುಭಹಾರೈಸಿದ್ದಾರೆ.
ನಟರಾದ ಶಾರುಕ್ ಖಾನ್, ಅಜಯ್ ದೇವಗನ್ ಸೇರಿದಂತೆ, ಅನೇಕ ನಟರ ಜೊತೆ ಹಲವು ಯಶಸ್ವಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಜಯ್ ದೇವಗನ್ ಸೇರಿದಂತೆ, ತಮ್ಮ ಓರಗೆಯ ನಟಿಗೆ ಶುಭ ಹಾರೈಸಿದ್ದಾರೆ.
೧೩- ೧೪ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಟಬು, ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿ, ಎಲ್ಲರ ಗಮನ ಸೆಳೆದಿದ್ದಾರೆ.