ನಟಿ ಐಶ್ವರ್ಯಾಗೆ ಐಟಿ ಶಾಕ್

ನಾಸಿಕ್, ಜ. ೧೭- ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಮಹಾರಾಷ್ಟ್ರದ ನಾಸಿಕ್ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸಿನ್ನಾರ್‌ನ ತಂಗಾವ್ ಬಳಿಯ ಅಡ್ವಾಡಿಯ ಗುಡ್ಡಗಾಡು ಪ್ರದೇಶದಲ್ಲಿ ೧ ಹೆಕ್ಟೇರ್‌ಗೂ ಹೆಚ್ಚು ಜಮೀನನ್ನು ಐಶ್ವರ್ಯಾ ರೈ ಅವರು ಹೊಂದಿದ್ದು, ಈ ಆಸ್ತಿಯ ತೆರಿಗೆ ಪಾವತಿಸದ ಹಿನ್ನಲೆಯಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ತೆರಿಗೆ ಕಟ್ಟುವಂತೆ ನೀಡಲಾಗಿದ್ದ ಗಡುವು ಮುಗಿದಿದ್ದರೂ ೨೨,೦೦೦ ರೂ. ಭೂ ಕಂದಾಯ ಪಾವತಿಸದೇ ವಂಚಿಸಿದ್ದಾರೆ, ಅಲ್ಲದೇ ನಟಿ ಐಶ್ವರ್ಯಾ ರೈನಾಸಿಕ್ ಜಿಲ್ಲಾಡಳಿತವು ಇದಕ್ಕೂ ಮುನ್ನ ಅವರಿಗೆ ತೆರಿಗೆ ಪಾವತಿ ಮಾಡುವಂತೆ ಹಲವು ಬಾರಿ ನೋಟಿಸ್ ನೀಡಿತ್ತು. ಆದರೂ, ಅವರು ತೆರಿಗೆ ಪಾವತಿಸಿಲ್ಲ ಎಂದು ಮೂಲಗಳು ಹೇಳಿವೆ.
ಮಾರ್ಚ್ ಅಂತ್ಯದೊಳಗೆ ತೆರಿಗೆ ಸಂಗ್ರಹದ ಶೇಕಡಾ ಪಾಲನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದು ಕಂದಾಯ ಇಲಾಖೆ ಈ ಕ್ರಮ ಕೈಗೊಂಡಿದೆ. ತೆರಿಗೆ ಪಾವತಿ ಮಾಡದಿರುವ ಸಂಬಂಧ ಐಶ್ವರ್ಯಾ ರೈ ಸೇರಿದಂತೆ ೧೨೦೦ ಇತರ ಆಸ್ತಿ ಮಾಲೀಕರಿಗೂ ಇಲಾಖೆ ನೋಟಿಸ್ ಕೊಟ್ಟಿದೆ. ನಾಸಿಕ್ ಜಿಲ್ಲಾಡಳಿತವು ಗುಡುವಿನೊಳಗೆ ಭೂ ತೆರಿಗೆದಾರರಿಂದ ವಾರ್ಷಿಕ ಒಟ್ಟು ೧.೧೧ ಕೋಟಿ ರೂ. ತೆರಿಗೆ ಸಂಗ್ರಹ ನಿರೀಕ್ಷೆ ಹೊಂದಿದೆ.
ಐಶ್ವರ್ಯಾ ರೈಗಮ್ ಪ್ರೈವೇಟ್ ಲಿಮಿಟೆಡ್, ಎಲ್.ಬಿ.ಕುಂಜಿರ್ ಇಂಜಿನಿಯರ್, ಐಟಿಸಿ ಮರಾಠಾ ಲಿಮಿಟೆಡ್, ಎಸ್.ಕೆ.ಶಿವರಾಜ್, ಹೋಟೆಲ್ ಲೀಲಾ ವೆಂಚರ್ ಲಿಮಿಟೆಡ್, ಕುಕ್ರೇಜಾ ಡೆವಲಪರ್ ಕಾರ್ಪೊರೇಷನ್, ರಾಮ ಹ್ಯಾಂಡಿಕ್ರಾಫ್ಟ್, ಒಪಿ ಎಂಟರ್‌ಪ್ರೈಸಸ್ ಕಂಪನಿ, ಬಿಂದು ವಾಯು ಉರ್ಜಾ ಲಿಮಿಟೆಡ್, ಏರ್ ಕಂಟ್ರೋಲ್ ಪ್ರೈವೇಟ್ ಇಂಡಿಯಾ ಲಿಮಿಟೆಡ್, ಚೋಟ್ಯಾಬ್ ಇಂಡಿಯಾ, ಮೆಟ್ ಜೇತಾಭಾಯಿ ಪಟೇಲ್ ಮತ್ತು ಕಂಪನಿ ಸೇರಿದಂತೆ ಒಟ್ಟು ೧೨೦೦ ಇತರ ಆಸ್ತಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇದರಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಕೂಡ ಸೇರಿದ್ದಾರೆ ಎಂದು ತಿಳಿದು ಬಂದಿದೆ.