ನಟಿ ಆಯೆಶಾ ಜುಲ್ಕಾ ಬಹಿರಂಗ ಪಡಿಸಿದ ಗುಟ್ಟು :ಬಿಕಿನಿ ಧರಿಸಬೇಕೆಂಬ ಕಾರಣದಿಂದ ’ಪ್ರೇಮ್ ಕೈದಿ’ ನಿರಾಕರಣೆ!

೯೦ರ ದಶಕದ ಬಹು ಚರ್ಚಿತ ನಟಿ ಆಯೇಶಾ ಜುಲ್ಕಾ ಖಿಲಾಡೀ, ಜೋ ಜೀತಾ ವಹೀ ಸಿಕಂದರ್ ,ವಕ್ತ್ ಹಮಾರಾ ಹೈ, ಚಾಚೀ ೪೨೦….ಇಂತಹ ಫಿಲ್ಮ್ ಗಳ ಕಾರಣ ಜನಪ್ರಿಯತೆಯನ್ನು ಪಡೆದಿದ್ದರು.


೨೦೧೦ರಲ್ಲಿ ಬಂದ ಫಿಲ್ಮ್ ’ ಆದಾ…ಎ ವೇ ಆಫ್ ಲೈಫ್’ ನಂತರ ದೀರ್ಘಕಾಲ ಫಿಲ್ಮ್ ನಿಂದ ದೂರವಿದ್ದರು. ಆಯೆಶಾ ಕೊನೆಯ ಬಾರಿಗೆ ಫಿಲ್ಮ್ ನಲ್ಲಿ ಕಂಡದ್ದು ’ಜೀನಿಯಸ್. ಇದು ೨೦೧೮ ರಲ್ಲಿ ಬಿಡುಗಡೆಗೊಂಡಿತ್ತು.
ಈಗ ಒಂದು ಸಂದರ್ಶನದಲ್ಲಿ ತನ್ನ ಫಿಲ್ಮಿ ಕೆರಿಯರ್ ಮತ್ತು ಬಾಲಿವುಡ್ ನಿಂದ ದೂರವಿದ್ದ ತೀರ್ಮಾನಗಳನ್ನು ಬಹಿರಂಗಪಡಿಸಿದ್ದಾರೆ.


ರಾಮಾನಾಯ್ಡು ಅವರ ಫಿಲ್ಮ್ ಪ್ರೇಮ್ ಕೈದಿ ಗೆ ಆವಾಗ ಆಫರ್ ಬಂದಿತ್ತಂತೆ. ಆದರೆ ಇಂಟ್ರೊಡಕ್ಷನ್ ದೃಶ್ಯದಲ್ಲಿ ಬಿಕಿನಿ ಧರಿಸಲು ಹೇಳಲಾಗಿತ್ತು.ಆ ಕಾರಣ ತಾನು ನಿರಾಕರಿಸಿದೆ ಎಂದಿದ್ದಾರೆ.


ವಿವಾಹದ ನಂತರ ಯಾಕೆ ಫಿಲ್ಮ್ ನಿಂದ ದೂರವಾದರು? ಆಯೆಶಾ ಹೇಳುವಂತೆ ಕಿರುವಯಸ್ಸಿನಲ್ಲೇ ಅವರು ಚಿತ್ರರಂಗಕ್ಕೆ ಬಂದಿದ್ದರು. ವಿವಾಹದ ನಂತರ ನಾರ್ಮಲ್ ಬದುಕಿನಲ್ಲಿ ತನ್ನ ಜೀವನವನ್ನು ಎಂಜಾಯ್ ಮಾಡಲು ನಿಶ್ಚಯಿಸಿದರು. ವಿವಾಹದ ನಂತರ ಬಾಲಿವುಡ್ ನಿಂದ ದೂರ ಇದ್ದ ತನ್ನ ತೀರ್ಮಾನ ಸರಿಯಾಗಿದೆ ಎಂಬ ವಿಶ್ವಾಸ ಅವರದ್ದು.


ಆದರೆ ವಿವಾಹದ ನಂತರ ದಾಂಪತ್ಯ ಬದುಕಿನಲ್ಲಿ ಇವರಿಗೆ ಮಕ್ಕಳಾಗಲಿಲ್ಲ. ತನಗೆ ಮಕ್ಕಳು ಬೇಡವೆಂದೆನಿಸಿತು. ತಾನು ಅನೇಕ ಸಾಮಾಜಿಕ ಕೆಲಸಗಳಲ್ಲಿ ನಿರತಳಾಗಿದ್ದೆ .ತನ್ನ ಪತಿ ಸಮೀರ್ ಕೂಡ ತನಗೆ ಯಾವುದೇ ಒತ್ತಡ ಹಾಕಲಿಲ್ಲ ಎನ್ನುತ್ತಾರೆ.


ಬಾಲಿವುಡ್ ನಿಂದ ದೂರವಾದರೂ ತಾನು ಜಾಕಿಶ್ರಾಫ್ ಜೊತೆ ಸಂಪರ್ಕದಲ್ಲಿದ್ದೇನೆ. ಯಾಕೆಂದರೆ ಅವರು ನನ್ನ ಹಾಗೆ ಸಾಮಾಜಿಕ ಕೆಲಸಗಳಲ್ಲಿ ನಿರತರಾಗಿದ್ದಾರೆ.
ತನಗೆ ಬಾಲಿವುಡ್ ಪಾರ್ಟಿಗಳಲ್ಲಿ ಭಾಗವಹಿಸುವ ಶೋಕಿ ಇಲ್ಲ ಎನ್ನುತ್ತಾರೆ. ಆಯೇಶಾ ಸಮೀರ್ ಜೊತೆ ೨೦೦೩ರಲ್ಲಿ ವಿವಾಹವಾಗಿದ್ದರು . ಪತಿ ಉದ್ಯಮಿ.

ನಟಿ ಜಿಯಾ ಖಾನ್ ಡಾಕ್ಯುಮೆಂಟರಿ ವಿವಾದ

ನಟಿ ಜಿಯಾಖಾನ್ ರ ವಿವಾದಿತ ಸಾವು ಕುರಿತು ಡಾಕ್ಯುಮೆಂಟರಿ ಡೆತ್ ಇನ್ ಬಾಲಿವುಡ್ ಮೊದಲ ಎಪಿಸೋಡ್ ಬಿಬಿಸಿ ೨ರಲ್ಲಿ ಪ್ರಸಾರವಾಗಿದೆ .
ಇದನ್ನು ನೋಡಿದ ನಂತರ ಪ್ರೇಕ್ಷಕರಿಗೆ ಸ್ವಲ್ಪ ಬೇಸರವಾಗಿದೆ .ಹೇಗೆ ಮುಂಬೈ ಪೊಲೀಸರು ಮುಖ್ಯ ಸಾಕ್ಷಿಗಳನ್ನು ಟ್ರ್ಯಾಕ್ ಮಾಡುವಲ್ಲಿ ವಿಫಲರಾಗಿದ್ದಾರೆ ಎನ್ನುವ ಕುರಿತು ತಮ್ಮ ಅಸಹನೆ ಸೋಶಲ್ ಮೀಡಿಯಾದಲ್ಲಿ ಹೊರ ಹಾಕಿದ್ದಾರೆ. ಜಿಯಾ ಖಾನ್ ರ ಸಾವಿನ ದಿನ ಧರಿಸಿದ ಟ್ರ್ಯಾಕ್ ಸೂಟ್ ಹೇಗೆ ನಾಪತ್ತೆಯಾಯಿತು ಎನ್ನುವುದಕ್ಕೆ ಪೊಲೀಸರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.


ಡೆತ್ ಇನ್ ಬಾಲಿವುಡ್ ನಲ್ಲಿ ಒಂದು ಗಂಟೆ ಮೊದಲು ಜಿಯಾ ತಾಯಿಯನ್ನು ನೋಡುತ್ತಾರೆ .ಆದರೆ ಸಾವಿನ ಯಾವುದೇ ನೋಟ್ ಬರೆದಿಟ್ಟಿಲ್ಲ. ಟ್ರ್ಯಾಕ್ ಸೂಟ್ ನಾಪತ್ತೆಯಾಗಿದೆ . ಆಕೆಯ ಕುತ್ತಿಗೆಯ ನಿಶಾನೆ ನಾಪತ್ತೆ.ಸಿಸಿಟಿವಿಯಲ್ಲಿ ಬಳಸಲಾಗುತ್ತಿದ್ದ ಫೋನ್ ಕೂಡ ನಾಶವಾಗಿದೆ. ಹೀಗಾಗಿ ಕುಟುಂಬಕ್ಕೆ ನ್ಯಾಯ ಸಿಗಬಹುದೇ?


ಡೆತ್ ಇನ್ ಬಾಲಿವುಡ್ ನೋಡಿದ ನಂತರ ಸುಶಾಂತ್ ಸಿಂಗ್ ರಾಜಪುತ್ ಕೇಸಿಗೆ ಹತ್ತಿರವಿದೆ ಎನ್ನುತ್ತಾರೆ ಯೂಸರ್ ಗಳು.

ಖುಷಿಯ ಸಂಗತಿ ಎಂದರೆ “ಇದನ್ನು ಬ್ರಿಟಿಷ್ ಟಿವಿಯಲ್ಲಿ ನೋಡುತ್ತಿದ್ದೇವೆ.
ಇದು ಬಾಲಿವುಡ್ ನ ಕರಾಳ ಸತ್ಯಗಳನ್ನು ಬಹಿರಂಗಪಡಿಸಲು ನೆರವಾಗಬಹುದು” ಎಂದು ನಂಬಿದ್ದಾರೆ .