ನಟಿ ಅನುಷ್ಕಾ ಡ್ರೆಸ್ ಹಿಡಿದು ರಣಬೀರ್ ಚೆಲ್ಲಾಟ


ಮುಂಬೈ.ಏ. ,೨೪- ಸಂದರ್ಶನ ನಡೆಯುತ್ತಿದ್ದ ಸಮಯದಲ್ಲಿ ನಟ ರಣಬೀರ್ ಕಪೂರ್ ಅವರು ನಟಿ ಅನುಷ್ಕಾ ಶರ್ಮಾ ಅವರ ಡ್ರೆಸ್ ಜೊತೆ ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎರಡು ಪ್ರತ್ಯೇಕ ಸಂದರ್ಶನದಲ್ಲಿ ನಟ ರಣಬೀರ್ ಕಪೂರ್ ಅವರು ಅನುಷ್ಕಾ ಶರ್ಮಾ ಬಟ್ಟೆ ಹಿಡಿದು ಆಟ ಆಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ವ್ಯಕ್ತವಾಗಿದೆ.
” ಏ ದಿಲ್ ಹೈ ಮುಷ್ಕಿಲ್” ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಅನುಷ್ಕಾ ಶರ್ಮ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಚಿತ್ರದ ಪತ್ರಿಕಾಗೋಷ್ಠಿ ಸಮಯದಲ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎರಡು ಬಾರಿಯ ಸಂದರ್ಶನದಲ್ಲಿ ನಟ ರಣಬೀರ್ ಕಪೂರ್ ಅವರು ಸಂದರ್ಶಕರ ಪ್ರಶ್ನೆಗೆ ಉತ್ತರ ನೀಡದೆ ನಟಿಯ ಲಂಗದಾವಣಿ ಹಿಡಿದುಕೊಂಡು ಚೆಲ್ಲಾಟದಲ್ಲಿ ನಿರತರಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದ್ದರೆ ಮತ್ತೆ ಕೆಲವು ಮಂದಿಯಿಂದ ಟೀಕೆಗೆ ಒಳಗಾಗಿದೆ.
ನಟ ರಣಬೀರ್ ಕಪೂರ್ ಅವರು ಮಾಡುವ ಕೆಲಸ ಬಿಟ್ಟು ಮತ್ತೇನು ಮಾಡುತ್ತಿದ್ದಾರೆ ಅವರು ಇಂತಹ ಸಂದರ್ಭಕ್ಕಾಗಿ ಸಂದರ್ಶನಕ್ಕೆ ಯಾಕೆ ಹಾಜರಾಗಬೇಕಾಗಿತ್ತು ಎನ್ನುವ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.
ಕೆಲವರು ಇದೊಂದು ಮುದ್ದಾದ ವಿಡಿಯೋ ಎಂದರೆ ಮತ್ತೆ ಕೆಲವರು ರಣಬೀರ್ ಕಪೂರ್ ಗೆ ಇದು ಬೇಕಾಗಿತ್ತಾ ಎನ್ನುವ ಕಾಮೆಂಟ್ ಗಳೂ ಬಂದಿವೆ.
೨೦೧೬ ರ ಈ ವಿಡಿಯೋ ಈಗ ವೈರಲ್ ಆಗಿದೆ.ಈ ಇಬ್ಬರು ” ಏ ದಿಲ್ ಹೈ ಮುಷ್ಕಿಲ್” ಚಿತ್ರದಲ್ಲಿ ನಾಯಕ ,ನಾಯಕಿಯರಾಗಿ ಕಾಣಿಸಿಕೊಂಡಿದ್ದರು