ನಟಿ ಅದಿತಿ ಪ್ರಭುದೇವ ಮದುವೆಗೆ ಕ್ಷಣಗಣನೆ

ಬೆಂಗಳೂರು, ನ ೪- ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಮದುವೆ ದಿನಾಂಕ ನಿಗದಿಯಾಗಿದ್ದು, ವೈವಾಹಿಕ ಜೀವನಕ್ಕೆ ಕಾಲಿಡಲು ಭಾರಿ ಸಿದ್ದತೆ ನಡೆಸಿದ್ದಾರೆ.

ಉದ್ಯಮಿ ಹಾಗೂ ಕಾಫಿ ಪ್ಲಾಂಟರ್ ಆಗಿರುವ ಯಶಸ್ವಿ ಜೊತೆ ಅದಿತಿ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದು, ಗುರು ಹಿರಿಯರು ಸೇರಿ ಮದುವೆ ನಿಶ್ಚಯ ಮಾಡಿದ್ದಾರೆ. ಕೆಲ ದಿನಗಳ ಕಾಲ ನಟನೆಯಿಂದ ಬ್ರೇಕ್ ಪಡೆದು ಮದುವೆ ಕೆಲಸಗಳಲ್ಲಿ ಅದಿತಿ ತೊಡಗಿಸಿಕೊಳ್ಳಲಿದ್ದಾರೆ. ನವೆಂಬರ್ ೨೭ರಂದು ಈ ಜೋಡಿ ಹೊಸಬಾಳಿಗೆ ಕಾಲಿಡುತ್ತಿದ್ದು, ಇವರಿಬ್ಬರು ಮದುವೆ ಆಮಂತ್ರಣ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಆಗಿದೆ.

ಕಳೆದ ವರ್ಷ ಅದಿತಿ ಉದ್ಯಮಿ ಯಶಸ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಹುಡುಗನನ್ನು ಪರಿಚಯಿಸಿದ್ದರು.

ಇದೇ ತಿಂಗಳು ನವಂಬರ್ ೨೭ ಕ್ಕೆ ಅದಿತಿ ಪ್ರಭುದೇವ-ಯಶಸ್ ಮದುವೆಯಾಗುತ್ತಿದ್ದಾರೆ. ಅಂತೂ ಕನ್ನಡದ ಅಪ್ಪಟ ಪ್ರತಿಭಾವಂತ ನಟಿ ಈಗ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡಲು ತೀರ್ಮಾನಿಸಿದ್ದಾರೆ.

೨೦೧೭ರಲ್ಲಿ ಬಂದ ’ಧೈರ್ಯಂ’ ಚಿತ್ರದ ಮೂಲಕ ಅದಿತಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಧನ್ವೀರ್ ಗೌಡ ನಟನೆಯ ’ಬಜಾರ್’ ಚಿತ್ರದಲ್ಲೂ ನಟಿಸಿ ಗೆದ್ದರು. ಚಿರಂಜೀವಿ ಸರ್ಜಾ ನಟನೆಯ ’ಸಿಂಗ’ ಚಿತ್ರದಲ್ಲೂ ನಾಯಕಿಯಾಗಿ ಮಿಂಚಿದ್ದರು. ಚಿತ್ರದಲ್ಲಿ ’ಶ್ಯಾನೆ ಟಾಪಾಗವ್ಳೆ’ ಸಾಂಗ್ ಸೂಪರ್ ಹಿಟ್ ಆಗಿತ್ತು. ಅಂದಿನಿಂದ ಅಭಿಮಾನಿಗಳು ನೆಚ್ಚಿನ ನಟಿಯನ್ನು ಶ್ಯಾನೆ ಟಾಪ್ ಬೆಡಗಿ ಎಂದೇ ಕರೆಯುತ್ತಿದ್ದಾರೆ