ನಟಿ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಅವರ ವಿವಾಹದ ವಿಧಿಗಳು ಪ್ರಾರಂಭವಾದವು, ಅಂಕಿತಾ ವಿಕ್ಕಿ ಕೆಲವು ಫೋಟೋಗಳನ್ನು ಸೋಶಲ್ ಮೀಡಿಯಾದಲ್ಲಿ ಶೇರ್ ಮಾಡಿದರು

ಕಿರುತೆರೆ ಹಾಗೂ ಬಾಲಿವುಡ್ ನಟಿ ಅಂಕಿತಾ ಲೋಖಂಡೆ ತನ್ನ ಗೆಳೆಯ ವಿಕ್ಕಿ ಜೈನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಜೋಡಿ ಡಿಸೆಂಬರ್ ೧೪ ರಂದು ವಿವಾಹವಾಗಲಿದ್ದಾರೆ.
ಈಗ ಉಭಯರ ಮನೆಗಳಲ್ಲೂ ಮದುವೆ ಶಾಸ್ತ್ರಗಳು ಶುರುವಾಗಿವೆ. ಇದರ ಝಲಕ್ ಅನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಅವರ ಈ ಆಚರಣೆಗಳು ಮರಾಠಿ ಶೈಲಿಯಲ್ಲಿ ನಡೆಯುತ್ತಿರುವುದನ್ನು ಫೋಟೋಗಳಲ್ಲಿ ಕಾಣಬಹುದು.
ಹಣೆಯ ಮೇಲೆ ಕುಂಕುಮ ತಿಲಕ ಮತ್ತು ಹಸಿರು ಸೀರೆಯನ್ನು ಧರಿಸಿರುವ ಅಂಕಿತಾ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಅವರು ವಿಕ್ಕಿಯೊಂದಿಗೆ ಸಾಂಪ್ರದಾಯಿಕ ಆಚರಣೆ ಗಳನ್ನು ಕೈಗೊಂಡು ಆನಂದಿಸುತ್ತಿದ್ದಾರೆ. ಈ ಖುಷಿಯನ್ನು ಅವರು ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರ ಈ ಫೋಟೋಗಳು ಹೆಚ್ಚು ವೈರಲ್ ಆಗುತ್ತಿವೆ.


ವಿವಾಹ ಪೂರ್ವ ಸಮಾರಂಭದಲ್ಲಿ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಸಾಂಪ್ರದಾಯಿಕ ಉಡುಗೆಯಲ್ಲಿರುವುದು ಕಾಣಬಹುದು. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿ, ಅಂಕಿತಾ ಬರೆದಿದ್ದಾರೆ-“ಪವಿತ್ರ.” ಇದರೊಂದಿಗೆ ಹೃದಯದ ಎಮೋಜಿಯನ್ನೂ ಕಾಣಿಸಿದ್ದಾರೆ.
ಅದೇ ಸಮಯದಲ್ಲಿ, ವಿಕ್ಕಿ ಕೆಲವು ಫೋಟೋಗಳನ್ನು ತಾವೂ ಸಹ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಮದುವೆಗೆ #ಂಟಿಗಿiಏiಏಚಿhಚಿಟಿi ಎಂಬ ಹ್ಯಾಶ್‌ಟ್ಯಾಗ್ ನೊಂದಿಗೆ ಮರಾಠಿಯಲ್ಲಿ ಟಿಪ್ಪಣಿ ಬರೆದಿದ್ದಾರೆ. “ಮಿ ಆಮ್ಚಿವರ್ ಪ್ರೇಮ್ ಕರ್ತೋ”
“ಫೋಟೋ ಚೆನ್ನಾಗಿದೆ” ಎಂಬ ಶೀರ್ಷಿಕೆ ಇದೆ.
“ನಾನು ನಿಮ್ಮನ್ನು ಪ್ರೀತಿಸುತ್ತೇನೆ, ಆದರೆ ಒರಿಜಿನಲ್ ದೃಶ್ಯ ಇನ್ನಷ್ಟೇ ಬರಬೇಕಾಗಿದೆ ನನ್ನ ಸ್ನೇಹಿತರೆ.”
ಈ ಫೋಟೋಗಳಲ್ಲಿ ಇಬ್ಬರೂ ಮರಾಠಿ ವಧು-ವರರ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋಗಳಲ್ಲಿ, ಅಂಕಿತಾ ಗುಲಾಬಿ ಮತ್ತು ಗೋಲ್ಡನ್ ಬಾರ್ಡರ್ ನೊಂದಿಗೆ ಸರಳವಾದ ಹಸಿರು ಸೀರೆಯನ್ನು ಧರಿಸಿದ್ದಾರೆ. ಮತ್ತೊಂದೆಡೆ, ವಿಕ್ಕಿ ಸರಳ ಕುರ್ತಾ ಧರಿಸಿದ್ದಾರೆ. ಫೋಟೋಗಳಲ್ಲಿ, ಅಂಕಿತಾ ಲೋಖಂಡೆ ಸಾಂಪ್ರದಾಯಿಕ ಅವತಾರದಲ್ಲಿ ಬೆರಗುಗೊಳಿಸುತ್ತಾರೆ. ಮದುವೆಯ ಸಂತೋಷ ಅವರ ಮುಖದಲ್ಲಿ ಸ್ಪಷ್ಟವಾಗಿಗೋಚರಿಸುತ್ತದೆ. ಅಂಕಿತಾರ ಮುಖ ಹೊಳೆಯುತ್ತಿದೆ.
ವಿಕ್ಕಿ ಮತ್ತು ಅಂಕಿತಾ ಅವರ ಈ ಫೋಟೋಗಳಿಗೆ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ನಿರಂತರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಇಬ್ಬರ ವಿವಾಹ ಕಾರ್ಯಕ್ರಮಗಳು ಡಿಸೆಂಬರ್ ೧೨ ರಿಂದ ಡಿಸೆಂಬರ್ ೧೪ ರವರೆಗೆ ನಡೆಯಲಿವೆ.
ಮೆಹೆಂದಿಗಾಗಿ, ಅವರು ಪ್ರಕಾಶಮಾನವಾದ ಮತ್ತು ರೋಮಾಂಚಕ ಬಟ್ಟೆಗಳನ್ನು ಧರಿಸಲಿದ್ದಾರೆ. ನಿಶ್ಚಿತಾರ್ಥ ತುಂಬಾ ಗ್ಲಾಮರಸ್ ಆಗಿ ನಡೆಯಲಿದೆ. ಹಲ್ದಿ ಸಮಾರಂಭವು ಉಪ ಹಳದಿ ಬಣ್ಣದ ಥೀಮ್ ಅನ್ನು ಹೊಂದಿರುತ್ತದೆ ಮತ್ತು ಸಂಗೀತವು ಇಂಡೋ ವೆಸ್ಟರ್ನ್ ಆಗಿರುತ್ತದೆ. ಮುಂಬೈನ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ಇಬ್ಬರ ವಿವಾಹವಾಗಲಿದ್ದು, ಅತಿಥಿಗಳಿಗಾಗಿ ಕೆಲವು ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅಂಕಿತಾ ಮತ್ತು ವಿಕ್ಕಿ ಜೈನ್ ಅವರ ವಿವಾಹವು ಸಂಪೂರ್ಣ ವಿಧಿವಿಧಾನಗಳೊಂದಿಗೆ ನಡೆಯಲಿದ್ದು, ಅದಕ್ಕಾಗಿ ವಿಶೇಷ ಸಿದ್ಧತೆಗಳನ್ನು ಮಾಡಲಾಗಿದೆ.
ಪ್ರಕಾಶಮಾನವಾದ ಪಾಪ್ ಮತ್ತು ರೋಮಾಂಚಕ ಉಡುಪಿನ ಥೀಮ್ ಅನ್ನು ಮೆಹಂದಿಗಾಗಿ ಇರಿಸಲಾಗಿದೆ. ಹಲ್ದಿ ಸಮಾರಂಭದ ಥೀಮ್ ಅನ್ನು ಹಳದಿ ಬಣ್ಣದಲ್ಲಿ ಇರಿಸಲಾಗಿದೆ. ವಧು-ವರರು ಸೇರಿದಂತೆ ಈ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಅತಿಥಿಗಳು ಹಳದಿ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂಕಿತಾ ಮತ್ತು ವಿಕ್ಕಿ ಜೈನ್ ದೀರ್ಘಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು, ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಅಂಕಿತಾ ಆಗಾಗ್ಗೆ ವಿಕ್ಕಿ ಜೊತೆಗಿನ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ, ಇದನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ.

’ಬಾಬ್ ಬಿಸ್ವಾಸ್’ಗಾಗಿ ಅಭಿಷೇಕ್ ತಮ್ಮ ತೂಕವನ್ನು ೧೦೫ ಕೆಜಿ ಗೆ ಹೆಚ್ಚಿಸಿಕೊಂಡಿದ್ದಾರೆ

“ಹಿಂತಿರುಗಿ ನೋಡುವುದರಲ್ಲಿ ನನಗೆ ನಂಬಿಕೆ ಇಲ್ಲ” ಎಂದ ಅಭಿಷೇಕ್

ಬಾಲಿವುಡ್ ಇಂಡಸ್ಟ್ರಿಗೆ ಬಂದು ಅಭಿಷೇಕ್ ಬಚ್ಚನ್ ಇಪ್ಪತ್ತು ವರ್ಷಗಳಾಗಿವೆ. ಈ ಎರಡು ದಶಕಗಳಲ್ಲಿ ಅವರು ಅನೇಕ ವೈವಿಧ್ಯಮಯ ಪಾತ್ರಗಳನ್ನು ಮಾಡಿದ್ದಾರೆ. ಕೊರೋನಾ ಅವಧಿಯಲ್ಲಿ ಅವರು ಮತ್ತು ಅವರ ಕುಟುಂಬವು ಸೋಂಕಿಗೆ ಒಳಗಾಗಿದ್ದರೂ, ’ದಿ ಬಿಗ್ ಬುಲ್’ ಮತ್ತು ’ಬ್ರೀತ್ ೨’ ನಲ್ಲಿ ಅವರ ಕೆಲಸವು ಮೆಚ್ಚುಗೆ ಪಡೆದಿದೆ. ಈ ದಿನಗಳಲ್ಲಿ ಅವರು ತಮ್ಮ ಹೊಸ ಚಿತ್ರ ’ಬಾಬ್ ಬಿಸ್ವಾಸ್’ನ ಚರ್ಚೆಯಲ್ಲಿದ್ದಾರೆ. ಇತ್ತೀಚೆಗೆ ಅವರು ತಮ್ಮ ಫಿಲ್ಮ್ ,ಮೆಗಾಸ್ಟಾರ್ ಅಮಿತಾಭ್ ಬಚ್ಚನ್, ಮಗಳು ಆರಾಧ್ಯ, ಕೊರೋನಾ ಅವಧಿ, ರಂಗಭೂಮಿ ……ಇತ್ಯಾದಿಗಳ ಬಗ್ಗೆ ಪತ್ರಕರ್ತರಲ್ಲಿ ಮಾತನಾಡಿದರು.
“ನೀವು ಇತ್ತೀಚೆಗೆ ಉದ್ಯಮದಲ್ಲಿ ಇಪ್ಪತ್ತು ವರ್ಷಗಳನ್ನು ಪೂರೈಸಿದ್ದೀರಿ. ಇಂದು ಹಿಂತಿರುಗಿ ನೋಡಿದಾಗ ನಿಮಗೆ ಏನನಿಸುತ್ತದೆ?” ಎಂದು ಕೇಳಿದರೆ-
ಅದಕ್ಕೆ ಅಭೀಷೇಕ್ ಹೇಳುತ್ತಾರೆ- “ಹಿಂತಿರುಗಿ ನೋಡುವುದರಲ್ಲಿ ನನಗೆ ನಂಬಿಕೆ ಇಲ್ಲ. ನಾನು ಮುಂದೆ ಯೋಚಿಸುತ್ತೇನೆ. ಮುಂದಿನ ಪ್ರಯಾಣವನ್ನು ಸರಿಯಾಗಿ ನಿರ್ಧರಿಸಿದರೆ ಸಾಕು ಎಂದು ನಾನು ಭಾವಿಸುತ್ತೇನೆ. ನೀವು ಹಿಂತಿರುಗಿ ನೋಡುತ್ತಿದ್ದರೆ, ನೀವು ಹಿಂದೆ ಉಳಿಯುತ್ತೀರಿ. ಮುಂದೆ ನೋಡು, ಮುಂದೆ ಹೋಗು ಎನ್ನುವುದು ನನ್ನ ಪಾಲಿಸಿ”.


ಮತ್ತೊಂದು ಪ್ರಶ್ನೆ-
“ಶತಮಾನದ ಸೂಪರ್ ಹೀರೋ ಎಂದು ಕರೆಸಿಕೊಳ್ಳುವ ನಿಮ್ಮ ತಂದೆ ಅಮಿತಾಭ್ ಬಚ್ಚನ್ ಅವರು ನಿಮ್ಮ ’ಬಾಬ್ ಬಿಸ್ವಾಸ್’ ಫಿಲ್ಮ್ ನ್ನು ನೋಡಿದ ನಂತರ ನಿಮ್ಮ ಕೆಲಸವನ್ನು ಶ್ಲಾಘಿಸಿ ಪೋಸ್ಟ್ ಬರೆದಾಗ ಏನನ್ನಿಸಿತು?”
ಅದಕ್ಕೆ ಅಭಿಷೇಕ್,- “ನಾನು ಅವರ ಮಗ ಮಾತ್ರವಲ್ಲ, ಅವರ ದೊಡ್ಡ ಅಭಿಮಾನಿಯೂ ಎಂದು ನಾನು ಯಾವಾಗಲೂ ಹೇಳುತ್ತೇನೆ. ಅವರು ಫಿಲ್ಮ್ ನ್ನು ನೋಡಿ ಮೆಚ್ಚಿಕೊಳ್ಳುವುದೇ ಒಂದು ಅದ್ಭುತ. ಒಬ್ಬ ವ್ಯಕ್ತಿಗೆ ಇದಕ್ಕಿಂತ ಇನ್ನೇನು ಬೇಕು? ನಾನು ನನ್ನ ಕುಟುಂಬಕ್ಕಾಗಿ ಕೆಲಸ ಮಾಡುತ್ತೇನೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ಅಪ್ಪ ಬರೆದದ್ದು ಆಶ್ಚರ್ಯಕರ ಆಗಿತ್ತು. ಧನ್ಯವಾದವಲ್ಲದೆ ಇನ್ನೇನು ಹೇಳಲಿ? ಆದರೆ ಅವರು ಟ್ರೇಲರ್ ಅನ್ನು ಇಷ್ಟಪಟ್ಟಿದ್ದಾರೆ ಎಂದು ತೋರುತ್ತಿದೆ, ಆದರೆ ಟ್ರೇಲರ್ ನಂತರ ಅವರಿಗೂ ಫಿಲ್ಮ್ ಇಷ್ಟವಾಗಬೇಕು ಎಂಬ ಒತ್ತಡವೂ ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಜನರು ನನ್ನ ಪಾತ್ರದ ಮೇಲೆ ಸಾಕಷ್ಟು ಪ್ರೀತಿಯನ್ನು ತೋರಿಸುತ್ತಿದ್ದಾರೆ, ಆದರೆ ಇದು ಕೇವಲ ಟ್ರೇಲರ್ ಆಗಿದೆ. ( ಡಿ.೩ ರಂದು ಝೀ೫ ರಲ್ಲಿ ಫಿಲ್ಮ್ ಬಿಡುಗಡೆ ಆಗಿದೆ). ಆ ಬಳಿಕ ತಿಳಿಯಲಿದೆ ಚಿತ್ರದ ಬಗ್ಗೆ ಅವರ ಅಭಿಪ್ರಾಯವೇನು? ಎಂದು”.
ಇಲ್ಲಿ ಬಾಬ್ ಬಿಸ್ವಾಸ್’ ನಂತಹ ಕೊಲೆಗಾರ ಪಾತ್ರದ ಆತ್ಮವನ್ನು ಪ್ರವೇಶಿಸುತ್ತಾರೆ ಅಭಿಷೇಕ್. ಇದು ಕ್ರೈಮ್ ಥ್ರಿಲ್ಲರ್ ಫಿಲ್ಮ್.
ಬಾಬ್ ಬಿಸ್ವಾಸ್ ಅವರ ವಿಶೇಷತೆ ಎಂದರೆ ಅವರು ತುಂಬಾ ಸರಳ ವ್ಯಕ್ತಿ. ಅವರು ತುಂಬಾ ಸಿಹಿ ಮತ್ತು ಮೇಣದಬತ್ತಿಯಂತಹ ಮನುಷ್ಯ, ಆದರೆ ಅವರು ಮಾಡಬೇಕಾದ ಕೆಲಸ ಅವರ ಸ್ವಭಾವಕ್ಕೆ ವಿರುದ್ಧವಾಗಿರುತ್ತದೆ. ಈ ಪಾತ್ರದ ಕಾಂಟ್ರಾಸ್ಟ್ ನನಗೆ ತುಂಬಾ ಇಷ್ಟವಾಯಿತು ಎನ್ನುತ್ತಾರೆ ಅಭಿಷೇಕ್.
“ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದೀರಾ?” ಎಂದು ಕೇಳಿದರೆ –
ಈ ಪಾತ್ರಕ್ಕಾಗಿ ನಾನು ೧೦೨ ಕೆಜಿಯಿಂದ ೧೦೫ ಕೆಜಿ ತನಕ ತೂಕ ಹೆಚ್ಚಿಸಿಕೊಂಡಿದ್ದೇನೆ. ಬಾಬ್ ಹೇಗೆ ಕಾಣಿಸಬೇಕೆಂದು ನಾವು ಮೂಲತಃ ನಿರ್ಧರಿಸಿದ್ದೆವು. ನೀವು ತೂಕವನ್ನು ಹೆಚ್ಚಿಸಿದಾಗ, ಅದು ನಿಮ್ಮ ದೇಹ ಭಾಷೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಂತರ ಕಾರ್ಯಕ್ಷಮತೆ ವಿಭಿನ್ನವಾಗಿ ಕಾಣುತ್ತದೆ. ನೀವು ಅದರ ಪ್ರೋಮೋ ಮತ್ತು ಟ್ರೈಲರ್ ಅನ್ನು ನೋಡಿದ್ದರೆ, ಅವರ ದುಂಡು ಮುಖದ ಕೆನ್ನೆ ಮತ್ತು ಚಾಚಿಕೊಂಡಿರುವ ಹೊಟ್ಟೆಯಿಂದ ಎಲ್ಲವೂ ಬದಲಾಗಿದೆ ಎಂದು ನೀವು ಕಂಡುಕೊಂಡಿರಬೇಕು. ಪಾತ್ರ ನಂಬಲರ್ಹವಾಗಿರಬೇಕು ಎಂದುಕೊಂಡು ಅದಕ್ಕಾಗಿ ತೂಕ ಹೆಚ್ಚಿಸಿಕೊಂಡೆ. ತೂಕ ಹೆಚ್ಚಿಸಿಕೊಳ್ಳಲು ಸಾಕಷ್ಟು ತಿಂದೆ. ಸುಜೋಯ್ ಘೋಷ್ ಜೊತೆಗೆ ಕೋಲ್ಕತ್ತಾದ ಚಳಿಯಲ್ಲಿ, ಅಲ್ಲಿ ಸಾಕಷ್ಟು ಬೀದಿ ಬದಿಯ ಆಹಾರವನ್ನೂ ಸೇವಿಸಿದ್ದೆವು.” ಎಂದು ನೆನಪು ಮಾಡುತ್ತಾರೆ.
“ಓಟಿಟಿ ಇಂದು ಸಿನಿಮಾದ ಹೊಸ ಪ್ರಕಾರವಾಗಿ ಹೊರಹೊಮ್ಮಿದೆ. ಆದರೆ ಓಟಿಟಿಯ ಬದಲು ನಿಮ್ಮ ಫಿಲ್ಮ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆ ನಿಮ್ಮ ಹೃದಯದಲ್ಲಿತ್ತೇ?” ಎಂದರೆ-
“ನಮ್ಮ ಪ್ರೇಕ್ಷಕರು ಫಿಲ್ಮ್ ನೋಡುವವರೆಗೆ, ಅದು ಓಟಿಟಿ ಅಥವಾ ಥಿಯೇಟರ್‌ನಲ್ಲಿ ಬರಲಿ ನನಗೆ ಅಭ್ಯಂತರವಿಲ್ಲ. ಅವರ ವೇದಿಕೆಯಲ್ಲಿ ನಮ್ಮ ಚಲನಚಿತ್ರವನ್ನು ಪ್ರೀಮಿಯಮ್ ಮಾಡಲು ನಮಗೆ ಅವಕಾಶವನ್ನು ನೀಡಿದ ಜೀ ೫ ಗೆ ನಾನು ಕೃತಜ್ಞನಾಗಿದ್ದೇನೆ. ’ಬಾಬ್ ಬಿಸ್ವಾಸ್’ ಅಂತಹ ಒಂದು ಚಲನಚಿತ್ರವಾಗಿದೆ, ಇದನ್ನು ಟಾಕೀಸ್ ಗಳಲ್ಲಿ ಮತ್ತು ಓಟಿಟಿ ನಲ್ಲೂ ನೋಡಬಹುದು. ಕೊನೆಗೂ ಈ ಫಿಲ್ಮ್ ನ್ನು ಜನರು ನೋಡಬಹುದು ಎಂಬುದು ನನಗೆ ಅತ್ಯಂತ ಖುಷಿ ತಂದಿದೆ.” ಎನ್ನುತ್ತಾರೆ ಅಭಿಷೇಕ್. ಈ ಫಿಲ್ಮ್ ದಿಯಾ ಅನ್ನಪೂರ್ಣ ಘೋಷ್ ನಿರ್ದೇಶಿಸಿದ್ದಾರೆ.