ನಟರಾಜು ಗೆ ಪಿ.ಹೆಚ್.ಡಿ

ಹಿರಿಯೂರ 14 : ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಎನ್.ನಟರಾಜು ಇವರು ಕೊಯಮತ್ತೂರಿನ ಭಾರತೀಯಾರ್  ಯೂನಿವರ್ಸಿಟಿಯಲ್ಲಿ ಡಾ.ಕೆ.ಆರ್.ಮುಲ್ಲ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಯೂಸ್ ಅಂಡ್ ಯೂಸೇಜ್ ಪ್ರಯಾಟ್ರನ್ಸ್ ಆಫ್ ಸೋಶಿಯಲ್ ನೆಟ್ ವರ್ಕಿಂಗ್ ಸೈಟ್ಸ್ ಅಮಾಂಗ್ ದ ಲೈಬ್ರರಿ ಪ್ರೊಫೆಷನಲ್ಸ್ ಇನ್ ಗ್ರಾಜುಯೇಟ್ ಕಾಲೇಜಸ್ ಬ್ಯಾಂಗಳೂರ್ ಅರ್ಬನ್ ಡಿಸ್ಟಿçಕ್ಟ್ ಅಫಿಲಿಯೇಟೆಡ್ ಟು ಬ್ಯಾಂಗಳೂರ್ ಯೂನಿವರ್ಸಿಟಿ ಎ ಸ್ಟಡಿ ಎಂಬ  ಪ್ರಬಂಧಕ್ಕೆ ಪಿ.ಹೆಚ್.ಡಿ.ಪದವಿ ಪಡೆದಿರುತ್ತಾರೆ. ಇವರಿಗೆ ಹಿರಿಯೂರು  ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಪ್ರಾಧ್ಯಪಕ ವರ್ಗದವರು  ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.