ನಟಪುನೀತ್ ನಿಜವಾದ ಜನನಾಯಕ ಆಗಿದ್ದರು; ಬಸವಪ್ರಭು ಶ್ರೀ

ದಾವಣಗೆರೆ.ನ.೧೪; ನಗರದ ಶಿವಯೋಗಿ ರಂಗಮಂದಿರದಲ್ಲಿ ಆಯೋಜಿಸಿದ್ದ ದಾವಣಗೆರೆ ಜಿಲ್ಲೆ ವಾದ್ಯಗೋಷ್ಠಿ ಕಲಾವಿದರ ಸಂಘದ ವತಿಯಿಂದ  ಅಪ್ಪು  ಗೀತ ನುಡಿನಮನ ಕಾರ್ಯಕ್ರಮದಲ್ಲಿ ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವಿರಕ್ತಮಠದ ಶ್ರೀ ಬಸವಪ್ರಭು ಮಹಾಸ್ವಾಮಿಜಿಗಳು ಚಾಲನೆ ನೀಡಿದರು ನಂತರ ಮಾತನಾಡುತ್ತಾ ಸಿನಿಮಾದಲ್ಲಿ ಬಣ್ಣ ಹಾಕಿಕೊಂಡು ನಾಯಕನಾಗುವುದು ಬಹಳ ಸುಲಭ ಆದರೆ ನಿಜವಾದ ಜನ ನಾಯಕನಾಗುವುದು ಕಷ್ಟ ಆದರೆ ಪುನೀತ್ ರಾಜಕುಮಾರ್ ನಿಜವಾದ ಜನನಾಯಕನಾಗಿ ಬೆಳೆದರು ಬಾಲ್ಯದಿಂದಲೇ ನಟನೆ ಮಾಡುತ್ತ ಹಲವಾರು ಚಿತ್ರಗಳ ಮಾಡುವ ಮೂಲಕ ನಾಡಿನ ಪ್ರಶಂಸೆಯನ್ನು ಪಡೆದಿದ್ದಾರೆ ಇದರ ಜೊತೆಗೆ ಸಮಾಜಮುಖಿ ಕೆಲಸಗಳು ಮಾಡುವ ಮೂಲಕ ಸಾರ್ಥಕತೆ ಬದುಕನ್ನು ಮಾಡಿ ಈಗ ನಮ್ಮೊಂದಿಗಿಲ್ಲ ಆದರೆ ಎಲ್ಲರ ಹೃದಯದಲ್ಲಿ ಪೂಜಿಸುತ್ತಿದ್ದಾರೆ  ಬದುಕಿದರೆ ಹೀಗೆ ಬದುಕಬೇಕೆಂದು ತೋರಿಸಿಕೊಟ್ಟಿದ್ದಾರೆ. ಕರವೇ ಜಿಲ್ಲಾಧ್ಯಕ್ಷರಾದ ಎಂಎಸ್ ರಾಮೇಗೌಡ ಮಾತನಾಡಿ  ಒಬ್ಬ ಕಲಾವಿದ ಹೇಗಿರಬೇಕೆಂದು ಅಪ್ಪು ತೋರಿಸಿಕೊಟ್ಟು ಹೋಗಿದ್ದಾರೆ ಅಪ್ಪು ಅವರು ಎಲ್ಲರನ್ನೂ ಅಪ್ಪಿಕೊಳ್ಳುವ ಮನಸ್ಸು ಮತ್ತು ಒಪ್ಪಿಕೊಳ್ಳುವ ಹೃದಯ ಶ್ರೀಮಂತಿಕೆ ಪುನೀತ್ ರಾಜಕುಮಾರ್ ಇದ್ದದ್ದು ಅವರು ಮಾಡಿದ ಸಾಧನೆ ದೇಶಕ್ಕೆ ಮಾದರಿಯಾಗಿದೆ ಈ ನಿಟ್ಟಿನಲ್ಲಿ ಎಲ್ಲ ರಾಜಕಾರಣಿಗಳು ಮಾಡಿದರೆ ಭಾರತದಲ್ಲಿ ಬಡತನ ನಿರ್ಮೂಲನೆ ಮಾಡಲು ಸಹಕಾರವಾಗುತ್ತದೆ  ಇಂದಿನ ಯುವಕರಿಗೆ ಮಾದರಿಯಾಗಿರುವ ಅಪ್ಪು ಅವರು ಇನ್ನೊಬ್ಬ ದುಃಖ ಬೇಕಾಗಿತ್ತು ಬಾಳಬೇಕಾಗಿತ್ತು ಸಾವಿರಾರು ಬದುಕುಗಳನ್ನು ಕಟ್ಟಿಕೊಟ್ಟ ಪುನೀತ್ ರಾಜಕುಮಾರ್  ಎಲ್ಲರಿಗೂ ಮಾರ್ಗದರ್ಶಿ ಯಾಗಿದ್ದಾರೆ ತಂದೆ ರಾಜಕುಮಾರ್ ಹೆಸರು ಮಾಡಿದರೆ ಮಗ ಮತ್ತೊಂದು ರೀತಿಯಲ್ಲಿ ಹೆಸರು ಮಾಡಿ ಕನ್ನಡದ ಕೀರ್ತಿಯನ್ನು ಬೆಳೆಸುವಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ ಆದರೆ  ಇಂದಿಗೆ ನಮ್ಮೊಂದಿಗಿಲ್ಲ ಎಂಬುದು ಬೇಸರದ ಸಂಗತಿ ಎಂದು ತಿಳಿಸಿದರು ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಲೇಡೀಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀಮತಿ ಅಮೀರ್ ಬಾನು,  ಕಲಾವಿದರ ಸಂಘದ ಅಧ್ಯಕ್ಷರಾದ ಸಹನಾ ಪರಮೇಶ್ ಹರೀಶ್ ಪರಮೇಶ್ ಮಂಜುನಾಥ್  ಮತ್ತಿತರರು ಉಪಸ್ಥಿತರಿದ್ದರು