ನಟನೆ ಹೆಸರಲ್ಲಿ ವಂಚನೆಖದೀಮನ ಸೆರೆ

ಬೆಂಗಳೂರು,ಏ.೧- ಸಿನೆಮಾದಲ್ಲಿ ಅಭಿನಯಿಸಲು ಅವಕಾಶ ಕೊಡುವುದಾಗಿ ನಂಬಿಸಿ ವಂಚಿಸಿದ್ದ ಆರೋಪಿ ಧವನ್ ಸೋಹಾನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಧವನ್ ಸೋಹಾ ಬರೋಬ್ಬರಿ ಸಿನೆಮಾದಲ್ಲಿ ಅಭಿನಯಿಸಲು ಅವಕಾಶ ಕೊಡಿಸುವುದಾಗಿ ನಂಬಿಕೆ ಹುಟ್ಟಿಸಿ ೫೮ ಮಂದಿಗೆ ವಂಚನೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಪ್ರಖ್ಯಾತ ಸಿನಿಮಾ ನಟ-ನಟಿಯರ ಜೊತೆ ರೀಲ್ಸ್ ಮತ್ತೆ ಫೋಟೋ ತೆಗೆಸಿಕೊಳ್ಳುತ್ತಿದ್ದ ಆರೋಪಿಯು ಅವುಗಳನ್ನೇ ವಂಚನೆಗೆ ಬಂಡವಾಳ ಮಾಡಿಕೊಳ್ಳುತ್ತಿದ್ದ.
ಇದಲ್ಲದೇ ಅಭಿನಯ ತರಬೇತಿಗಾಗಿ ಪ್ಲೆಮಿಂಗೋ ಸೆಲೆಬ್ರಿಟೀಸ್ ವಲ್ಡ್ ಎಂಬ ಇನ್ಸ್ ಟಿಟ್ಯೂಟ್ ತೆರೆದು, ಸಿನಿಮಾದಲ್ಲಿ ನಟಿಸಬೇಕಂಬ ಹಂಬಲ ಇರುವವರನ್ನು ಗುರಿಯಾಗಿಸಿಕೊಂಡು ಪ್ರತಿಭಾವಂತ ಯುವಕ ಯುವತಿಯರನ್ನ ನಂಬಿಸಿ ವಂಚನೆ ಮಾಡುತ್ತಿದ್ದ.
ಈ ಇನ್ಸ್ ಟ್ಯೂಟ್ ನಟನೆ ಕಲಿಯಲು ಬರುವವರಿಗೆ ವಂಚನೆ ಮಾಡಿದ್ದ. ಹೀಗೆ ಒಬ್ಬೊಬ್ಬರ ಬಳಿ ೩೦ ರಿಂದ ೫೦ ಸಾವಿರ ಪಡೆದು ವಂಚಿಸುತ್ತಿದ್ದ. ಇದೇ ರೀತಿ ಹಲವರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಶಂಕೆ ವ್ಯಕ್ತವಾಗಿದೆ.
ವಂಚನೆಗೊಳಗಾದ ಯುವಕರೊಬ್ಬರು ನೀಡಿದ ದೂರು ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ರಾಜಾಜಿನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.