`ಮಹಾನುಭಾವರು” ಚಿತ್ರದ ಮೂಲಕ ಖಡಕ್” ಬಣ್ಣದ ಜಗತ್ತಿಗೆ ಕಾಲಿರಿಸಿದ ನಟಿ ಅನೂಶಾ ರೈ, “ದಮಯಂತಿ” ಬರುತ್ತಿದ್ದಾಳೆ ಎಂದು ಸಾರಿಕೊಂಡು ಬೈಕ್ ಏರಿ “ ರೈಡರ್” ಮಾಡಿಕೊಂಡು “ಧೈಯಂ ಸರ್ವತ್ರ ಸಾಧನಂ” ಎನ್ನುತ್ತಲೇ ಬುಲೆಟ್ ಏರಿ “ಪೆಂಟಗಾನ್” ನಲ್ಲಿ ಸುತ್ತು ಹಾಕಿ ಬಂದವರು. ಅಷ್ಟೇ ಅಲ್ಲ ಹಿಮಾಚಲದ ಹುಡುಗಿಯಾಗಿ “ಸಹರಾ”ಳಾಗಿ ವೈದ್ಯಕೀಯ ಲೋಕದಲ್ಲಿ “ವೈರಸ್” ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಆಚಾರ್ಯ ಇನ್ಸಿಸ್ಟಿಟೂಟ್‍ನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾಗ ಕಾಲೇಜಿನಲ್ಲಿ ಗೂಗ್ಲಿ, ಐರಾವತ, ಮಾಸ್ಟರ್ ಪೀಸ್ ಚಿತ್ರದ ಚಿತ್ರೀಕರಣ ನೋಡಿಕೊಂಡಿದ್ದ ಹುಡುಗಿ ಅಚಾನಕ್ ಆಗಿ ಬಣ್ಣದ ಲೋಕ ಪ್ರವೇಶಿಸಿದ್ದಾರೆ ಅವರೇ ಅನುಶಾ ರೈ.
ಸಿನಿಮಾ ಜೊತೆ ಜೊತೆಯಲ್ಲಿಯೇ ಕಿರುತೆರೆ ಜೊತೆಗೆ ಪರಭಾಷೆಯ ಧಾರಾವಾಹಿಯಲ್ಲಿ ನಟಿಸಿ ಸಿನಿಮಾ ಸೀರಿಯಲ್ ಯಾವುದಾದರೂ ಸರಿ ಪಾತ್ರಕ್ಕೆ ನ್ಯಾಯ ಒದಗಿಸಿಕೊಡುವ ಉದ್ದೇಶ ಹೊಂದಿದ್ದಾರೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ಅನೂಶಾ ರೈ, “ಸಹರ” ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದೇನೆ ಮನಾಲಿ ಸೇರಿದಂತೆ ಹಿಮಾಚಲ ಪ್ರದೇಶದ ಹಲವು ಕಡೆ 20 ದಿನಗಳ ಕಾಲ ಚಿತ್ರೀಕರಣ ಮಾಡಿದೆವು. ಚಿತ್ರದಲ್ಲಿ ಹಿಮಾಚಲ ಪ್ರದೇಶದ ಹುಡುಗಿ ಓದಲು ಮೈಸೂರಿಗೆ ಬರುವ ಪಾತ್ರ. ಅಲ್ಲಿ ನಾಯಕ-ನಾಯಕಿಗೆ ಪ್ರೀತಿ ಆಗಿರುತ್ತದೆ ಅದನ್ನು ಹೇಳಿಕೊಳ್ಳಲು ಸಾಧ್ಯವಾಗಿರಲಿಲ್ಲ. ಓದು ಮುಗಿಸಿಕೊಂಡು ಹಿಮಾಚಲ ಪ್ರದೇಶಕ್ಕೆ ವಾಪಸ್ ಬರುತ್ತಾಳೆ, ತಾನು ಪ್ರೀತಿಸಿದ ಹುಡುಗಿಯನ್ನು ಹುಡುಕಿಕೊಂಡು ನಾಯಕ ಬರುವ ಪಾತ್ರ. ಚಿತ್ರದಲ್ಲಿ ನಾಯಕಿಯ ಹೆಸರು ಎಂದರು.
ಇನ್ನೂ ಹಿರಿಯ ನಟಿ ಪ್ರಿಯಾಂಕ ಉಪೇಂದ್ರ ಅವರ ಜೊತೆಗೆ ಪ್ರಮುಖ ಪಾತ್ರದಲ್ಲಿ “ವೈರಸ್” ಚಿತ್ರದಲ್ಲಿ ನಟಿಸುತ್ತಿದ್ದೇನೆ. ವೈದ್ಯಕೀಯ ಲೋಕದ ಒಳ ಹೊರಗನ್ನು ಅನಾವರಣ ಮಾಡುವ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಖಡಕ್ ಚಿತ್ರದ ಬಳಿಕ ಧರ್ಮ ಕೀರ್ತಿ ರಾಜ್ ಜೊತೆ ಎರಡನೇ ಬಾರಿಗೆ ನಾಯಕಿಯಾಗಿ ನಟಿಸಿದ್ದೇನೆ ಎಂದರು.
“ಧೈರ್ಯಂ ಸರ್ವತ್ರ ಸಾಧನಂ” ಬುಲೆಟ್ ಓಡಿಸುವುದು ಮತ್ತು ಚಿತ್ರಕ್ಕಾಗಿ ಬಂದೂಕಿನಲ್ಲಿ ಶೂಟ್ ಮಾಡುವುದನ್ನು ಕಲಿತಿದ್ದೇನೆ. ನಾಯಕಿ ಸ್ಟ್ರಾಂಗ್ ಎನ್ನುವುದನ್ನು ಚಿತ್ರದಲ್ಲಿ ತೋರಿಸಿದ್ದಾರೆ ಎನ್ನುವ ವಿವರ ನೀಡಿದರು.
ನೆಲೆ ಕಂಡುಕೊಳ್ಳುವ ತವಕ
ಕನ್ನಡದಕ್ಕೆ ಪ್ರತಿಭಾವಂತ ನಟಿಯರೇ ದಂಡೇ ಒಬ್ಬರ ಮೇಲೊಬ್ಬರು ಚಿತ್ರರಂಗಕ್ಕೆ ಬರುತ್ತಿದ್ದಾರೆ.ಅವರ ಸಾಲಿಗೆ ನಟಿ ಅನೂಷ ರೈ ಕೂಡ ಒಬ್ಬರು. ಸಿನಿಮಾ ಸೀರಿಯಲ್ ಮೂಲಕ ಚಿತ್ರರಂಗದಲ್ಲಿ ಗಮನ ಸೆಳೆದಿದ್ದಾರೆ.ಕೈ ತುಂಬಾ ಚಿತ್ರಗಳು ಕೈಯಲ್ಲಿವೆ. ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಉದ್ದೇಶ ಹೊಂದಿದ್ದಾರೆ.