ನಗುವಿನಿಂದ ಆರೋಗ್ಯವೃದ್ಧಿ: ಡಾ.ಬಶೆಟ್ಟಿ

ಹುಬ್ಬಳ್ಳಿ,ಏ3: ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ನಗುವುದನ್ನು ರೂಢಿಸಿಕೊಳ್ಳುವುದರ ಮೂಲಕ ಆರೋಗ್ಯದಲ್ಲಿ ಚೈತನ್ಯವನ್ನು ತಂದುಕೊಳ್ಳಬೇಕೆಂದು ಧಾರವಾಡದ ವೈದ್ಯಾಧಿಕಾರಿ ಡಾ. ರಾಜಶೇಖರ ಬಶೆಟ್ಟಿ ಹೇಳಿದರು.
ನಗರದ ಗೋಕುಲ ರಸ್ತೆಯ ಶುಭೋದಯ ಹಾಲನಲ್ಲಿ ಹುಬ್ಬಳ್ಳಿ ನಗರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ವಿಶ್ವಮಾನ್ಯ ಪುರಸ್ಕತರಾದ ಸಂತೋಷ ಆರ್. ಶೆಟ್ಟಿ ದತ್ತಿ ಕಾರ್ಯಕ್ರಮದಲ್ಲಿ ನಿತ್ಯ ಜೀವನದಲ್ಲಿ ನಡೆಯುವ ಹಾಸ್ಯ ಪ್ರಸಂಗಗಳು ಕುರಿತು ಉಪನ್ಯಾಸ ನೀಡುತ್ತಾ, ನಿತ್ಯ ಜೀವನದಲ್ಲಿ ಹಾಸ್ಯವು ಒಳಗೊಂಡಿದ್ದು ಅದನ್ನು ರೂಢಿಸಿಕೊಳ್ಳಬೇಕು. ಪ್ರತಿಯೊಬ್ಬರು ಸ್ವಚ್ಛತೆಯನ್ನು ಮತ್ತು ಹಿರಿಯರ ಆದರ್ಶಗಳನ್ನು ಅಳವಡಿಸಿಕೊಂಡಾಗ ಹೃದಯ ಶ್ರೀಮಂತಿಕೆ ಹೆಚ್ಚುತ್ತದೆ ಎಂದರು.
ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರಗಳನ್ನು ಕಂಡುಕೊಳ್ಳಬೇಕು. ಅಂದರೆ ಪ್ರತಿಯೊಬ್ಬರು ಮೊಬೈಲಗೆ ಹೆಚ್ಚಿನ ಸಮಯ ನಿಯೋಗಿಸುತ್ತಿದ್ದು, ಅದನ್ನು ಬಿಟ್ಟು ಒಳ್ಳೆಯ ಪುಸ್ತಕ, ಹಾಡು, ಸಂಗೀತ ಕೇಳುವದನ್ನು ರೂಢಿಸಿಕೊಳ್ಳಬೇಕೆಂದರು. ಸರ್ವಜ್ಞನ ವಚನಗಳನ್ನು ಉಲ್ಲೇಖಿಸಿ ಮನೆ, ಆಸ್ಪತ್ರೆ, ಬಸ್ ಸ್ಟ್ಯಾಂಡ್, ಮದುವೆ ಕೊರೊನಾ (ಕೊವೀಡ್-19) ಮುಂತಾದ ಸಮಾರಂಭಗಳಲ್ಲಿ ಜರುಗುವ ಹಾಸ್ಯ ಪ್ರಸಂಗಗಳನ್ನು ಮತ್ತು ಸರ್ವಜ್ಞನ ತ್ರಿಪದಿಗಳನ್ನು ಹೇಳಿ ಸಭಿಕರಿಗೆ ಸಂತಸವನ್ನು ಹೆಚ್ಚಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಣಪತಿ ಗಂಗೋಳ್ಳಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ಸಾಹಿತಿಗಳಾದ ಡಾ. ಸಂಗಮೇಶ ಹಂಡಗಿ, ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅವರನ್ನು ಸನ್ಮಾನಿಸಲಾಯಿತು. ಕನಕದಾಸ ಶಿಕ್ಷಣ ಸುತಿಯ ಉಪಾಧ್ಯಕ್ಷರಾದ ಶಾಂತಣ್ಣ ಕಡಿವಾಳ ಮಾತನಾಡಿ, ಕಸಾಪ ದತ್ತಿಗಳು ಜನಸಾಮಾನ್ಯರ ಜ್ಞಾನವನ್ನು ಹೆಚ್ಚಿಸುತ್ತಿವೆ ಎಂದು ಸಂತಸ ವ್ಯಕ್ತ ಪಡಿಸಿದರು. ದತ್ತಿ ದಾನಿ ಸಂತೋಷ ಆರ್. ಶೆಟ್ಟಿ ಮಾತನಾಡುತ್ತಾ, ಪ್ರತಿಯೊಬ್ಬರು ಸಾತ್ಯಿಕ ಮತ್ತು ಸಾಂಸ್ಕತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಸಂತಸವನ್ನು ಹೆಚ್ಚಿಸಿಕೊಳ್ಳಬೇಕೆಂದರು. ಹಲವಾರು ಸಂಘ ಸಂಸ್ಥೆಗಳು, ಸ್ನೇತರು, ಅಭಿಮಾನಿಗಳು ಅವರನ್ನು 43ನೇ ಹುಟ್ಟುಹಬ್ಬದ ನಿಮಿತ್ಯ ಗೌರವಿಸಿ, ಸನ್ಮಾನಿಸಿದರು.
ಜಿಲ್ಲಾ ಕಸಾಪ ಕಾರ್ಯದರ್ಶಿ ಪೆÇ್ರ. ಕೆ.ಎಸ್. ಕೌಜಲಗಿ ಸ್ವಾಗತಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಲ್. ಆರ್. ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸ್ವಾಗತಿಸಿದರು, ಕು.ಗಾರ್ಗಿ ಮತ್ತು ಸಾದ್ವಿ ನೃತ್ಯದ ಮೂಲಕ ಪ್ರಾರ್ಥಿಸಿದರು, ಕಲಾವಿದ ಸಂಗಿತ ಕಲಾವಿದರಾದ ರಾಮದುರ್ಗಕರ ವಂದಿಸಿದರು. ಹುಬ್ಬಳ್ಳಿ ನಗರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಬಿ.ಎಸ್. ಮಾಳವಾಡ ಕಾರ್ಯಕ್ರಮ ನಿರೂಪಿಸಿದರು, ನಗರ ಗಣ್ಯರು, ವಾಣಿಜ್ಯೋದ್ಯಮಿಗಳು, ಕಲಾವಿದರು, ಸಂಗೀತಗಾರರು, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಗರದ ಕಲಾವಿದರು ಸುಮಧುರ ಸಂಗೀತವನ್ನು ನೀಡಿದರು.