ನಗುಮುಖದ ಒಡೆಯ ಡಾ. ಪುನೀತ್ ರಾಜಕುಮಾರ ನಮ್ಮನ್ನು ಬಿಟ್ಟು ಹೋಗಿಲ್ಲ: ವರದಸ್ವಾಮಿ ಹಿರೇಮಠ್

ಸೇಡಂ, ಅ,30: ಬಾಲದಿಂದಲೇ ತಂದೆಯ ಜೊತೆಗೆ ಸೇರಿ ತನ್ನ ಪ್ರತಿಭೆಯನ್ನು ಗುರುತಿಸುವಂತೆ ಮಾಡಿದ್ದು ಹಾಗೆ ಚಿಕ್ಕ ವಯಸ್ಸಿನಲ್ಲಿ ಬಾಲ ರಾಷ್ಟ್ರಪ್ರಶಸ್ತಿ ಪಡೆದ ಕೀರ್ತಿ ಕರ್ನಾಟಕದ ರತ್ನ ನಗುಮುಖದ ಒಡೆಯ ಡಾ.ಪುನೀತ್ ರಾಜಕುಮಾರ ಅವರಿಗೆ ಸಲ್ಲುತ್ತದೆ ಅವರು ನಮ್ಮನ್ನು ಬಿಟ್ಟು ಹೋಗಿಲ್ಲ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕ ಕಲಬುರಗಿ ಉಪಾಧ್ಯಕ್ಷ ವರದಾಸ್ವಾಮಿ.ಬಿ ಹಿರೇಮಠ ಹೇಳಿದರು.

ಪಟ್ಟಣದ ಊಡಗಿ ರಸ್ತೆಯಲ್ಲಿರುವ ಗಣೇಶನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರತ್ನ ದಿವಂಗತ ಡಾ”ಪುನೀತ್ ರಾಜಕುಮಾರರವರ ಪ್ರಥಮ ಪುಣ್ಯ ಸ್ಮರಣೆ ನಿಮಿತ್ತವಾಗಿ ಸಂಘಟನೆಯಿಂದ ಹಮ್ಮಿಕೊಂಡಿದ್ದ ಶಾಲೆಯಲ್ಲಿ ಸಸಿ ವಿತರಣೆ ಮತ್ತು ಮಕ್ಕಳಿಗೆ ಅನ್ನ ಸಮರ್ಪಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆಯ ಮುಖ್ಯಾಗುರುಳಾದ ಶ್ರೀಮತಿ ನಾಗವೇಣಿ ಮಾತನಾಡಿ ಕರ್ನಾಟಕದಲ್ಲಿ ಮೊಟ್ಟ ಮೊದಲು ಬಡ ಮಕ್ಕಳಿಗೆ ಶಿಕ್ಷಣ, ಅನಾಥ ನಿರ್ಗತಿಕರಿಗೆ ವೃದ್ರಾಶ್ರಮ, ಹತ್ತು ಹಲವು ಜನಪರವಾದ ಕೆಲಸಗಳನ್ನು ಮಾಡುವುದರ ಮೂಲಕ ತನ್ನ ಪ್ರತಿಭೆ ಜೊತೆಗೆ ಸಮಾಜದ ಒಳಿತಿಗಾಗಿ ಮೀಸಲಿಟ್ಟ ಏಕೈಕ ವ್ಯಕ್ತಿ ಅವರೇ ಕರ್ನಾಟಕದ ರತ್ನ ನಗುಮುಖದ ಒಡೆಯ ದಿವಂಗತ ಡಾ. ಪುನೀತ್ ರಾಜಕುಮಾರ್ ಅವರಿಗೆ ಸಲ್ಲುತ್ತದೆ ಎಂದರು.
ಈ ವೇಳೆಯಲ್ಲಿ ಶಾಲೆಯ ಮುಖ್ಯಾಗುರುಳಾದ ಶ್ರೀಮತಿ ನಾಗವೇಣಿ, ಜಗನಾಥ ಗೌಡ್ಸ್, ಕೊಟ್ರೇಶ್, ವಿಕಾಸ್ ಗಡಹಳ್ಳೆ, ಜಗನಾಥ ಬೀಜನಳಿಕರ್ ದೇವರಾಜ ಮೇಲಿಗೆರಿ, ಬಸವರಾಜ ನಾಟಿಕರ್, ಪತ್ರಿಕಾ ವರದಿಗಾರ ಬಿಜನಳ್ಳಿ ಸುರೇಶ್, ಶಾಲಾ ಶಿಕ್ಷಕರು ಮಕ್ಕಳು ಬಟಗೆರಾ ಕೆ ಗ್ರಾಮದ ಯುವಕರು ಇದ್ದರು.