ನಗಿಸುವ ಕೆಲಸ ಸುಲಭವಾದದ್ದಲ್ಲ

ಚಿತ್ರದುರ್ಗ.ಸೆ.೨೬: ನಗಿಸುವ ಕೆಲಸ ಸುಲಭವಾದದ್ದಲ್ಲ. ಸರ್ವರಲ್ಲೂ ಹಾಸ್ಯಪ್ರಜ್ಞೆ ಸದಾ ಜಾಗೃತವಾಗಿರಬೇಕು ಎಂದು ಕಸಾಪ ಮಾಜಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ ಅಭಿಪ್ರಾಯಪಟ್ಟರು.ಗೋನೂರು ಗ್ರಾಮದ ನಿರಾಶ್ರಿತರ ಪರಿಹಾರ ಕೇಂದ್ರದ ಆವರಣದಲ್ಲಿ ರಂಗಸೌರಭ ಕಲಾ ಸಂಘ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ 75ನೇ ಸ್ವಾತಂತ್ರö್ಯದ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ನೆಮ್ಮದಿ ಚಿಕಿತ್ಸಾ ರಂಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹಾಸ್ಯಕ್ಕೆ ಸಂಬಂಧಿಸಿದ ಅನೇಕ ನಾಟಕ ಕೃತಿಗಳು, ನಗೆಹನಿಗಳು, ಸಾಹಿತ್ಯ ಲೇಖನಗಳು ಮುದ್ರಣಗೊಂಡಿವೆ. ಅವುಗಳನ್ನು ಓದುವುದರಿಂದ, ರಂಗ ಪ್ರದರ್ಶನಗಳನ್ನು ನೋಡುವುದರಿಂದ ಆಯಸ್ಸು ಇಮ್ಮಡಿಯಾಗುತ್ತದೆ ಎಂದರು.ಹಾಸ್ಯ ಸಾಹಿತಿ ಹಾಗೂ ಪ್ರೌಢಶಾಲಾ ಶಿಕ್ಷಕ ಪರಮೇಶ್ವರಪ್ಪ ಕುದರಿ ಇವರು ಜೀವನದಲ್ಲಿ ಹಾಸ್ಯ ಕುರಿತ ಉಪನ್ಯಾಸ ನೀಡಿ ನಗುನಗುತ್ತಾ ಜೀವನ ಸಾಗಿಸಿದರೆ ನೆಮ್ಮದಿ, ಆರೋಗ್ಯ ವೃದ್ಧಿಸುತ್ತದೆ. ಹಾಸ್ಯ ಪ್ರವೃತ್ತಿಯು ಸಕಲ ನೋವು ನಲಿವುಗಳಿಗೆ ದಿವ್ಯ ಔಷಧವಾಗಿದೆ. ಮಾನವನಿಗೆ ಜೀವನದಲ್ಲಿ ಎಷ್ಟೇ ಸಂಕಷ್ಟಗಳು ಎದುರಾದರೂ ಅದು ಬಂದ ಹಾಗೇ ಸ್ವೀಕರಿಸಿ ಹಾಸ್ಯ ಎಂಬ ಮನೋಭಾವದಿಂದ ತೊಡೆದುಹಾಕುವ ಮನೋಧರ್ಮ ಹೆಚ್ಚಿಸಿಕೊಳ್ಳಬೇಕು. ಹೆಚ್ಚುಹೆಚ್ಚು ನಕ್ಕಷ್ಟು ದೀರ್ಘಕಾಲ ಬದುಕುವ ನಿದರ್ಶನಗಳನ್ನು ನೋಡಬಹುದು. ಹಾಸ್ಯವು ವೈಜ್ಞಾನಿಕವಾಗಿ ಆತ್ಮಸ್ಥೆöÊರ್ಯ ಉಂಟು ಮಾಡುವ ಶಕ್ತಿಯನ್ನು ಹೊಂದಿದೆ. ಹಾಸ್ಯಕ್ಕೆ ಎಲ್ಲಾ ವಯೋಮಾನದವರೂ ಮನಸೋಲುತ್ತಾರೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಜೀವನವನ್ನು ಸಂತೋಷವಾಗಿ ಕಳೆಯುವ ಹಾಸ್ಯ ಬದುಕಿಗೆ ಸುಲಭ ಮಾರ್ಗವಾಗಿದೆ ಎಂದರು.ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಎಂ.ಮಹದೇವಯ್ಯ ಅಧ್ಯಕ್ಷತೆ ವಹಿಸಿದ್ದರು. ರಂಗನಿರ್ದೇಶಕ ಕೆಪಿಎಂ.ಗಣೇಶಯ್ಯ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದರು. ರಂಗಸೌರಭ ಕಲಾವಿದರು ರಂಗಸAಗೀತ ನಡೆಸಿಕೊಟ್ಟರು.