
ಬಹು ದಿನಗಳ ನಂತರ ಹಾಸ್ಯ ನಟ ಕೋಮಲ್ ಕುಮಾರ್ ” ಉಂಡೆನಾಮ” ದ ಮೂಲಕ ನಾಯಕರಾಗಿ ಮತ್ತೆ ಕಮಾಲ್ ಮಾಡಲು ಮುಂದಾಗಿದ್ದಾರೆ.
ಡಾ.ಟಿ.ಆರ್.ಚಂದ್ರಶೇಖರ್ ಸಹಕಾರದೊಂದಿಗೆ ನಂದ ಕಿಶೋರ್ ನಿರ್ಮಾಣ ಮಾಡಿದ್ದಾರೆ.. ಕೆ.ಎಲ್ ರಾಜಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ವಾರ ರಾಜ್ಯಾದ್ಯಂತ ಚಿತ್ರ ತೆರೆಗೆ ಬಂದಿದೆ.
ನಗುವಿನ ಮೂಲಕ ಪ್ರೇಕ್ಷಕರನ್ನು ಮಂತ್ರ ಮುಗ್ದ ಮಾಡಿದ್ದ ಕೋಮಲ್ ಈಗ ಹೊಸ ಅವತಾರದಲ್ಲಿ ಪ್ರೇಕ್ಷಕರಿಗೆ ಕಚಗುಳಿ ಇಡಲು ಸಜ್ಜಾಗಿದ್ದಾರೆ. ಕೋವಿಡ್ ಲಾಕ್ ಡೌನ್ ಸಮಯದಲ್ಲಿ ನಡೆಯುವ ವಿಷಯವನ್ನು ಮುಂದಿಟ್ಟುಕೊಂಡು ರಾಜಶೇಖರ್ ಕಥೆ ಎಣೆದಿದ್ದು ಚಿತ್ರ ಪ್ರತಿಯೊಬ್ಬರನ್ನು ನಕ್ಕು ನಗಿಸಲಿದೆ ಎನ್ನುವುದು ಚಿತ್ರತಂಡದ ವಿಶ್ವಾಸ.
ಮನೆ ಮಂದಿಯಲ್ಲಿ ಕುಳಿತು ಯಾವುದೇ ಮುಜುಗರವಿಲ್ಲದೆ ನೋಡಬಹುದಾದ ಚಿತ್ರವನ್ನು ಡಾ.ಟಿ.ಆರ್ ಚಂದ್ರಶೇಖರ್ ಮತ್ತವರ ತಂಡ ಕಟ್ಟಿಕೊಟ್ಟಿದೆ. ಈ ಮೂಲಕ ಬಹುದಿನಗಳ ನಂತರ ಸಂಪೂರ್ಣ ಹಾಸ್ಯಭರಿತ ಚಿತ್ರವನ್ನು ಜನರ ಮುಂದೆ ಇಟ್ಟಿದ್ದಾರೆ ನಿರ್ಮಾಪಕ ನಂದ ಕಿಶೋರ್.
ಕೋಮಲ್ ಅವರಿಗಾಗಿಯೇ ಹೇಳಿ ಮಾಡಿಸಿದ ಕಥೆ, ಚಿತ್ರದ ಆರಂಭದಿಂದ ಅಂತ್ಯದ ವರೆಗೆ ನಗಿಸುವ ಕೆಲಸ ಮಾಡಿದ್ದಾರೆ. ಅದಕ್ಕೆ ಹರೀಶ್ ರಾಜ್, ತಬಲನಾಣಿ, ಸೇರಿದಂತೆ ಕಲಾವಿದರದ ದೊಡ್ಡ ಬಳಗ ಸಾಥ್ ನೀಡಿದೆ. ಚಿತ್ತದ ಮೂಲಕ ಹೊಸ ನಿರ್ದೇಶಕರನ್ನು ಪ್ರೋತ್ಸಾಹಿಸುವ ಕೆಲಸ ಮುಂದುವರಿಸಿದ್ದಾರೆ.
ಕೋಮಲ್ ಕುಮಾರ್ ಧನ್ಯ ಬಾಲಕೃಷ್ಣ, ಹರೀಶ್ ರಾಜ್, ತಬಲ ನಾಣಿ, ಕೆಜಿಎಫ್ ಸಂಪತ್, ತನಿಷಾ, ವೈಷ್ಣವಿ, ಅಪೂರ್ವ ಮುಂತಾದವರು “ಉಂಡೆನಾಮ” ಚಿತ್ರದ ತಾರಾಬಳಗದಲ್ಲಿದ್ದಾರೆ. ನವೀನ್ ಕುಮಾರ್ ಎಸ್ ಛಾಯಾ ಗ್ರಹಣ, ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಚಿತ್ರಕ್ಕಿದೆ.