ನಗರ ಹಾಗೂ ಚೆಕ್ಕಪೋಸ್ಟ್‍ಗಳಲ್ಲಿ ಬಾರಿ ಬಂದೋಬಸ್ತ್ ಪೊಲೀಸರಿಂದ ಬೆಳ್ಳಂಬೆಳಿಗ್ಗೆ ಆರಂಭವಾದ ಕಾರ್ಯಾಚರಣೆ, ದಂಡ.

ಹೊಸಪೇಟೆ ಮೇ18: ಬೆಳ್ಳಂಬೆಳಿಗ್ಗೆನೇ ವಾಹನ ತಪಾಸಣೆ, ಸಂಚಾರಕ್ಕೆ ಕಾರಣ ಕೇಳುವ ಮೂಲಕ ಅನಗತ್ಯ ಸಂಚಾರದ ಕಡಿವಾಣಕ್ಕೆ ಹೊಸಪೇಟೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು.
ಅನಗತ್ಯ ಸಂಚಾರ, ಅನುಮತಿ ಇಲ್ಲದೆ ತಿರುಗಾಡುವುದು ಸೇರಿದಂತೆ ಸಮಯವಾಗುತ್ತಿದ್ದಂತೆಯೇ ಗಂಟುಮೂಟ್ಟೆಕಟ್ಟಲು ಸಹ ತಿಳಿಸುವ ಮೂಲಕ ಕರೋನಾ ವಾರಿಯರ್ರ್ಸ್ ಕೆಲಸ ಆರಂಭಿಸಿದ್ದರು, ಇನ್ನು ಅನುಮತಿ ಇಲ್ಲದಿದ್ದರೂ ಅಂಗಡಿ ತೆಗೆದು ವ್ಯಾಪಾರ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಡ್ಯಾಂ ರಸ್ತೆಯ ನಾಗರಕಟ್ಟಿ ಬಳಿ ವಿಜಯನಗರ ಎಂಟರ್‍ಪ್ರೈಜೆಸ್ಸ್ ಸೇರಿದಂತೆ ಒಟ್ಟು 10 ಪ್ರಕರಣಗಳನ್ನು ದಾಖಲಿಸುವ ಮೂಲಕ ಕರೋನಾ ನಿಯಮ ಉಲ್ಲಂಘನೆಯ ಪ್ರಕರಣಗಳನ್ನು ವಿವಿಧ ಠಾಣಾ ವ್ಯಾಪ್ತಿಯಲ್ಲಿ ದಾಖಲಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಹೊಸಪೇಟೆ ಉಪವಿಭಾಗದ ಡಿವೈಎಸ್‍ಪಿ ವಿ.ರಘುಕುಮಾರ ಸೋಮವಾರ ಹೊಸಪೇಟೆನಗರದ ಬಡಾವಣಾ ಠಾಣಾ ವ್ಯಾಪ್ತಿಯಲ್ಲಿ 5 ಹಾಗೂ ಗ್ರಾಮೀಣಠಾಣಾ ವ್ಯಾಪ್ತಿಯಲ್ಲಿ 4 ಹಾಗೂ ಇಂದು ಬೆಳಿಗ್ಗೆ ಗ್ರಾಮೀಣಠಾಣಾ ವ್ಯಾಪ್ತಿಯಲ್ಲಿಯೇ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.