ನಗರ ಹಾಗೂ ಗ್ರಾಮೀಣ ಭಾಗ ಎಂದು ಬೇರ್ಪಡಿಸುವಂತೆ ಆಗ್ರಹಿಸಿ ಮನವಿ

ವಿಜಯಪುರ, ಮಾ.25-ಜಿಲ್ಲಾ ಉಪ ನೊಂದಣಾಧಿಕಾರಿಗಳ ಕಾರ್ಯಾಲಯ ನಗರ ಹಾಗೂ ಗ್ರಾಮೀಣ ಭಾಗ ಎಂದು ಬೇರ್ಪಡಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾ ಯುವ ಪರಿಷತ್ ವತಿಯಿಂದ ಉಪ ನೊಂದಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪರಿಷತ್ ಅಧ್ಯಕ್ಷರಾದ ಶರಣು ಸಬರದ ಮಾತನಾಡಿ, É ಈ ರಾಜ್ಯದ ದಿನನಿತ್ಯದ ದಸ್ತಾವೇಜಿನ ಆದಾಯದಲ್ಲಿ ನಂಬರ-01 ಸ್ಥಾನದಲ್ಲಿರುವ ವಿಜಯಪುರ ನಗರ ಹಾಗೂ ವಿಜಯಪುರ ತಾಲೂಕು ದಾಖಲೆ ನಿರ್ಮಿಸಿದ್ದು, ಆದರೆ ಇಲ್ಲಿಗೆ ಬರುವ ರೈತರ, ಗ್ರಾಹಕರ ಗೋಳು ಹೇಳದಂತಾಗಿದೆ. ದಸ್ತಾವೇಜಿಗಾಗಲಿ ರೈತರು ತಮ್ಮ ಜಮೀನುಗಳ ಮೇಲೆ ಬೋಜಾ ಕೂಡಿಸುವದಾಗಲಿ, ಪೇಡಿ ಪತ್ರಗಳಾಗಲಿ, ಹರಸಾಹಸ ಪಡುವಂತಾಗಿದೆ ಮತ್ತು ರೈತರು ಗ್ರಾಹಕರು ನೇರವಾಗಿ ಕೆಲಸ ಆಗುವದಿಲ್ಲ. ಏನಿದ್ದರೂ ಏಜೆಂಟರ್ ಮುಖಾಂತರ ಹಾಗೂ ದಸ್ತಾವೇಜುದಾರರ ಮುಖಾಂತರ ತಮ್ಮ ಕೆಲಸ ಮಾಡಿಕೊಳ್ಳಬೇಕು. ಆದ್ದರಿಂದ ಪ್ರತಿಯೊಂದು ಕೆಲಸಕ್ಕೆ ಏಜೆಂಟರನ್ನು ಸಂಪರ್ಕಿಸುವುದರೊಂದಿಗೆ ರೈತರು ಹಾಗೂ ಗ್ರಾಹಕರ ದುಡ್ಡು ಹಾವಳಿ ಬಹಳಷ್ಟಾಗಿದ್ದು ಇದನ್ನು ತಡೆಯುವಂತೆ ಆಗ್ರಹಪಡಿಸಿದರು.
ಶಿವಾನಂದ ಭುಯ್ಯಾರ ಮಾತನಾಡಿ, ನಗರ ಹಾಗೂ ಗ್ರಾಮೀಣ ಮಟ್ಟದ ಜನರಿಗೆ ಈ ಕಚೇರಿ ಒಂದೇ ಆಗಿರುವದರಿಂದ ದಿನನಿತ್ಯ ತುಂಬಾ ತೊಂದರೆಗಳನ್ನು ಅನುಭವಿಸುತ್ತಿದ್ದು, ಇದರಿಂದ ಜನರಿಗೆ ಕೆಲಸ ಕಾರ್ಯಗಳನ್ನು 3-4 ದಿನಗಳ ಓಡಾಟ ತಪ್ಪುತ್ತಿಲ್ಲ. ಗ್ರಾಮೀಣ ಪ್ರದೇಶದಿಂದ ಬರುವ ರೈತರಿಗೆ, ವೃದ್ದರಿಗೆ, ಇದೊಂದು ನರಕ ಯಾತನೆ ಆಗಿದೆ. ಆದ್ದರಿಂದ ಇವರ ಹಾವಳಿ ತಪ್ಪಿಸುವಂತಾಗಬೇಕು ಎಂದು ತಿಳಿಸಿದರು.
ಆದಷ್ಟು ಬೇಗನೆ ನಗರ ಪ್ರದೇಶದ ಉಪ ನೊಂದಣಾಧಿಕಾರಿಗಳ ಕಚೇರಿ ಹಾಗೂ ವಿಜಯಪುರ ಗ್ರಾಮೀಣ ಪ್ರದೇಶದ ಉಪ ನೊಂದಣಾಧಿಕಾರಿಗಳ ಕಚೇರಿ ಬೇರೆ ಬೇರೆ ಮಾಡಿ ರೈತರಿಗೆ -ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಬದಲ್ಲಿ ಪಾಂಡು ಸಾಹುಕಾರ ದೊಡಮನಿ, ವಿನೋದ ಕುಮಾರ ಮಣೂರ, ಅನೀಲ ಉಪ್ಪಾರ, ಸಿದ್ದು ಸಾರವಾಡ ಇನ್ನಿತರರು ಉಪಸ್ಥಿತರಿದ್ದರು.