ನಗರ ಸ್ವಚ್ಚತೆಗೆ ಮುಂದಾದ ಮೇಯರ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.18: ನಗರದ 34ನೇ ವಾರ್ಡಿನ ವಿದ್ಯಾನಗರದಲ್ಲಿ ಇಂದು  ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಸ್ವಚ್ಛ ಬಳ್ಳಾರಿ,  ಸುಂದರ ಬಳ್ಳಾರಿ ಅಡಿಯಲ್ಲಿ ಮೇಯರ್ ಎಂ. ರಾಜೇಶ್ವರಿ ಸುಬ್ಬರಾಯುಡು ಅವರ ನೇತೃತ್ವದಲ್ಲಿ ಸ್ವಚ್ಚತಾ  ಅಭಿಯಾನ ನಡೆಸಲಾಯಿತು.
ಸ್ವತಃ ಮಹಾಪೌರರು ರಸ್ತೆಗಿಳಿದು ಕಸುವನ್ನು ಎತ್ತಿ ಹಾಕಿ ಬೀದಿ ಬದಿ ವ್ಯಾಪಾರ ಮಾಡುವವರಿಗೆ ಸ್ವಚ್ಚತೆ ಬಗ್ಗೆ ತಿಳುವಳಿಕೆ ಕೊಟ್ಟು, ಮುಂಬರುವ ದಿನಗಳಲ್ಲಿ ಅವರು ಕಸ ರಸ್ತೆಯಲ್ಲಿ ಹಾಕಿ ಬೇಜವಾಬ್ದಾರಿ ಕಂಡುಬಂದಲ್ಲಿ ಅವರಿಗೆ ಶುಲ್ಕವನ್ನು ಹಾಕಲಾಗುವುದೆಂದು ಎಚ್ಚರಿಕೆ ಕೊಟ್ಟರು.
ಪಾಲಿಕೆಯ ಇತರೇ ಸದಸ್ಯರು, ಸಿಬ್ಬಂದಿ ಪಾಲ್ಗೊಂಡಿದ್ದರು.

Attachments area