ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಏಪ್ರೀಲ್ 27ರಂದು ನಡೆಯುವ ಮತದಾನಕ್ಕೆ ಜಿಲ್ಲಾಡಳಿತದಿಂದ ಅಗತ್ಯ ವ್ಯವಸ್ಥೆ

ಬೀದರ ಏ. 26 : ಅವಧಿ ಮುಕ್ತಾಯಗೊಂಡ ಬೀದರ ನಗರಸಭೆಯ 32 ವಾರ್ಡಗಳಿಗೆ ಮತ್ತು ಕಾರಣಾಂತರದಿAದ ತೆರವಾಗಿರುವ ಹಳ್ಳಿಖೇಡ ಬಿ ಪುರಸಭೆಯ 11ನೇ ವಾರ್ಡ ಉಪ ಚುನಾವಣೆಯ ಮತದಾನವು ಏಪ್ರೀಲ್ 27ರಂದು ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.
ಬೀದರ ನಗರಸಭೆಯ 26, 28 ಮತ್ತು 32 ವಾರ್ಡಗಳನ್ನು ಹೊರತುಪಡಿಸಿ ಇನ್ನುಳಿದ 32 ವಾರ್ಡಗಳಿಗೆ ಏಪ್ರೀಲ್ 27ರ ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, ಒಟ್ಟು 162 ಮತಗಟ್ಟೆಗಳಲ್ಲಿ ಅಂದಾಜು 200 ಮತಗಟ್ಟೆ ಅಧಿಕಾರಿಗಳು, ಅಂದಾಜು 200 ಸಹಾಯಕ ಮತಗಟ್ಟೆ ಅಧಿಕಾರಿಗಳು ಮತ್ತು 400 ಪೊಲೀಂಗ್ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.
ಅಂತಿಮ ಕಣದಲ್ಲಿ 157 ಅಭ್ಯರ್ಥಿಗಳು: ಬೀದರ ನಗರಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 176 ನಾಮಪತ್ರಗಳು ಸಲ್ಲಿಕೆಯಾಗಿ ಈ ಪೈಕಿ 7 ನಾಮಪತ್ರಗಳು ತಿರಸ್ಕೃತವಾಗಿದ್ದವು. ಬಳಿಕ 12 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದುಕೊAಡಿದ್ದರಿAದ ಅಂತಿಮವಾಗಿ ಒಟ್ಟು 157 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಹಳ್ಳಿಖೇಡ್ (ಬಿ) ಪುರಸಭೆ ಉಪ ಚುನಾವಣೆ: ಹಳ್ಳಿಖೇಡ್ (ಬಿ) ಪುರಸಭೆಯ ವಾರ್ಡ ನಂಬರ್ 11ಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಸಲ್ಲಿಕೆಯಾದ 5 ನಾಮಪತ್ರಗಳ ಪೈಕಿ ಇಬ್ಬರು ನಾಮಪತ್ರಗಳನ್ನು ಹಿಂಪಡೆದುಕೊAಡಿದ್ದು, 3 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ನೋಟಾ ಗು ಅವಕಾಶ: ಮತದಾರರು ತಮ್ಮ ಇಚ್ಚೆಯಂತೆ ಮತ ಚಲಾಯಿಸಲು ಅನುಕೂಲವಾಗುವಂತೆ ಮತಪತ್ರದಲ್ಲಿ, ಅಂಚೆ ಮತಪತ್ರದಲ್ಲಿ, ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರಿನ ಕೊನೆಯ ಸಾಲು ಅಥವಾ ಕೊನೆಯ ಫ್ಯಾನಲನಲ್ಲಿ ನನ್ ಆಫ್ ಧಿ ಅಬೋ ಮೇಲ್ಕಂಡ ಯಾರೂ ಅಲ್ಲ ಎಂದು ನೋಟಾಗೆ ಅವಕಾಶ ಕಲ್ಪಿಸಲಾಗಿದೆ.
ಮತದಾರರ ವಿವರ: ಬೀದರ ನಗರಸಭೆ ಚುನಾವಣೆಯಲ್ಲಿ ಗಂಡು 77609, ಹೆಣ್ಣು 75703 ಹಾಗೂ ಇತರೆ 13 ಸೇರಿ ಒಟ್ಟು 1,53,325 ಮತದಾರರು ತಮ್ಮ ಮತಹಕ್ಕನ್ನು ಚಲಾಯಿಸಲಿದ್ದಾರೆ. ಅದೇ ರೀತಿ ಹಳ್ಳಿಖೇಡ (ಬಿ) ಪುರಸಭೆಯಲ್ಲಿ 156 ಗಂಡು 140 ಹೆಣ್ಣು ಸೇರಿ ಒಟ್ಟು 296 ಮತದಾರರು ತಮ್ಮ ಮತ ಹಕ್ಕನ್ನು ಚಲಾಯಿಸಲಿದ್ದಾರೆ.
ಸೂಕ್ಷ್ಮ 49, ಅತೀ ಸೂಕ್ಷ್ಮ 19: ಸದರಿ ಈ ಚುನಾವಣೆಯಲ್ಲಿ 49 ಸೂಕ್ಷ್ಮ, 19 ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.
162 ಮತಗಟ್ಟೆಗಳು: ಬೀದರ ನಗರಸಭೆಯ ಚುನಾವಣೆಗೆ ಹೆಚ್ಚುವರಿ 4 ಮತ್ತು ಮೂಲ ಮತಗಟ್ಟೆಗಳು 158 ಸೇರಿ ಒಟ್ಟು 162 ಮತಗಟ್ಟೆಗಳಲ್ಲಿ ಏಪ್ರೀಲ್ 27ರಂದು ಚುನಾವಣೆ ನಡೆಯಲಿದೆ.
ವೀಕ್ಷಕರ ನೇಮಕ: ಏಪ್ರೀಲ್ 27ರಂದು ನಡೆಯುವ ಮತದಾನ ದಿನದ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನ, ಮೇಲ್ವಿಚಾರಣೆ ಮತ್ತು ನಿಯಂತ್ರಣದಡಿಯಲ್ಲಿ ಚುನಾವಣಾ ವಿಷಯಗಳ ಕುರಿತು ನಿಗಾ ವಹಿಸಲು ರಾಜ್ಯ ಚುನಾವಣಾ ಆಯೋಗವು ಬೀದರ ನಗರಸಭೆಗೆ ಪಿಡಬ್ಲುಡಿ ಎಂಜಿಯರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸಿ ಆದೇಶಿಸಿದೆ.
ಕೋವಿಡ್-19:ಆಯೋಗದ ಮಾರ್ಗಸೂಚಿ: ಏಪ್ರಿಲ್ 27ರಂದು ನಡೆಯುವ ನಗರ ಸ್ತಳೀಯ ಸಂಸ್ತೆಗಳ ಚುನಾವಣೆಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ರಾಜ್ಯ ಚುನಾವಣಾ ಆಯೋಗವು ಮಾರ್ಗಸೂಚಿ ಹೊರಡಿಸಿದ್ದು, ಮತದಾನ ದಿನದಂದು ಮತಗಟ್ಟೆ ಅಧಿಕಾರಿಗಳು ಕಡ್ಡಾಯ ಮಾಸ್ಕ ಧರಿಸಿರಬೇಕು. ಮತದಾರರು ಸರದಿ ಸಾಲಿನಲ್ಲಿ ನಿಂತು ಮಾಸ್ಕ ಧರಿಸಿ ಮತ ಚಲಾಯಿಸಬೇಕು. ಸೋಂಕಿತ ವ್ಯಕ್ತಿಗಳಿಗಳು ಕೂಡ ಮತ ಚಲಾಯಿಸಲು ಹಕ್ಕುಳ್ಳವರಾಗಿದ್ದು, ಮತದಾನ ಮುಕ್ತಾಯಕ್ಕೆ ಒಂದು ಗಂಟೆ ಮುಂಚಿತವಾಗಿ ಸೋಂಕಿತರು ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಮತದಾನ ಮಾಡಲು ಅವಕಾಶ ನೀಡಬೇಕು ಎಂದು ಆಯೋಗವು ತನ್ನ ಮಾರ್ಗಸೂಚಿಯಲ್ಲಿ ಹೇಳಿದೆ.
ಏಪ್ರೀಲ್ 30ರಂದು ಮತ ಎಣಿಕೆ: ಅವಧಿ ಮುಕ್ತಾಯವಾಗಿರುವ ರಾಜ್ಯದ 8 ಜಿಲ್ಲೆಗಳ 10 ನಗರ ಸ್ಥಳೀಯ ಸಂಸ್ತೆಗಳ ಜೊತೆಗೆ ಬೀದರ ನಗರಸಭೆಗೆ ಮತ್ತು ಸ್ಥಾನ ತೆರವಾಗಿರುವ ಹಳ್ಳಿಖೇಡ್ ಬಿ ಪುರಸಭೆಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಕಳೆದ ಮಾರ್ಚನಲ್ಲಿ ಚುನಾವಣಾ ವೇಳಾಪಟ್ಟಿ ಹೊರಡಿಸಿದಂತೆ ಏಪ್ರಿಲ್ 27ರಂದು ಮತದಾನವಾದ ಬಳಿಕ ಏಪ್ರೀಲ್ 30ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನವೇ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆ ಕೂಡ ಮುಕ್ತಾಯವಾಗಲಿದೆ.
ಎಲ್ಲಾ ಅಗತ್ಯ ವ್ಯವಸ್ಥೆ: ಬೀದರ ನಗರಸಭೆಗೆ ಮತ್ತು ಹಳ್ಳಿಖೇಡ್ ಬಿ ಪುರಸಭೆ ಉಪ ಚುನಾವಣೆಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟಿ ನಿಷ್ಪಕ್ಷಪಾತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಮತ್ತು ಯಾವುದೇ ರೀತಿ ನೀತಿ ಸಂಹಿತೆ ಉಲ್ಲಂಘನೆಯಾಗದAತೆ ಎಲ್ಲಾ ರೀತಿಯ ಕ್ರಮಗಳನ್ನು ವಹಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಕೋವಿಡ್ ಕಿಟ್ ನೀಡಲಾಗಿದೆ ಮತ್ತು ಎಲ್ಲಾ ಮತಗಟ್ಟೆಗಳಲ್ಲಿ ಥರ್ಮಲ್ ಸ್ಕಾö್ಯನಿಂಗ್ ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಪ್ರಚಾರವು ಮತದಾನ ಪ್ರಾರಂಭವಾಗುವ 48 ಗಂಟೆಗಳ ಮುಂಚೆಯೇ ಮುಕ್ತಾಯವಾಗಿದೆ. ಏಪ್ರೀಲ್ 25ರ ಬೆಳಗ್ಗೆ 7 ಗಂಟೆಯ ನಂತರ ಮತದಾರರಲ್ಲದ ಬೆಂಬಲಿಗರು, ರಾಜಕೀಯ ಪಕ್ಷಗಳ ಪದಾಧಿಕಾರಿಗಳು, ಮುಖಂಡರು, ಪಕ್ಷದ ಕಾರ್ಯಕರ್ತರು, ಪ್ರಚಾರ ಕಾರ್ಯ ನಿರ್ವಹಿಸುವವರು ನಗರ ಸ್ಥಳೀಯ ಸಂಸ್ಥೆಯ ವಾರ್ಡಗಳ ವ್ಯಾಪ್ತಿಯಿಂದ ಹೊರಗೆ ಕಳುಹಿಸುವ ಬಗ್ಗೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.
ಸೂಕ್ತ ಪೊಲೀಸ್ ಬಂದೋಬಸ್ತ್: ಬೀದರ ನಗರಸಭೆಗೆ ಮತ್ತು ಹಳ್ಳಿಖೇಡ್ (ಬಿ) ಪುರಸಭೆ ಉಪ ಚುನಾವಣೆಯ ಬಂದೋಬಸ್ತ ಕರ್ತವ್ಯಕ್ಕೆ ಅಗತ್ಯ ಪ್ರಮಾಣದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಜನರು ಒತ್ತಡ, ಭೀತಿ ಇಲ್ಲದೇ ನಿರ್ಭಯವಾಗಿ ಮತ ಚಲಾಯಿಸಲು ಸೂಕ್ತ ರಕ್ಷಣೆ ನೀಡಲಾಗುತ್ತಿದೆ. ಬೀದರ ನಗರಸಭೆ ಮತ್ತು ಹಳ್ಳಖೇಡ (ಬಿ) ಪುರಸಭೆ ಸೇರಿ ಚುನಾವಣೆಯ ಬಂದೋಬಸ್ತಗೆ ಒಬ್ಬರು ಡಿ.ಎಸ್.ಪಿ. 7 ಸಿಪಿಐ, 10 ಪಿ.ಎಸ್.ಐ. 31 ಎ.ಎಸ್.ಐ, 132 ಸಿ.ಹೆಚ್.ಸಿ, 169 ಸಿಪಿಸಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ 7 ಡಿಎಆರ್ ತುಕಡಿ ಮತ್ತು 2 ಕೆ.ಎಸ್.ಆರ್.ಪಿ, ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ, ನಾಗೇಶ ಡಿ.ಎಲ್. ಅವರು ತಿಳಿಸಿದ್ದಾರೆ.