ನಗರ ಸಾರಿಗೆ ಬಸ್‍ಗಳ ಪ್ರಯಾಣ ದರದಲ್ಲಿ ಇಳಿಕೆ

ಕಲಬುರಗಿ,ನ.12:ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ವಿಭಾಗ-1ರ ವತಿಯಿಂದ ಕಲಬುರಗಿ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸುವ ನಗರ ಸಾರಿಗೆ ಬಸ್‍ಗಳ ಪ್ರಯಾಣ ದರವನ್ನು ಕಡಿಮೆ ಮಾಡಲಾಗಿದೆ. ಸಾರ್ವಜನಿಕ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ ವಿಭಾಗ-1ರ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ವಿ.ಹೆಚ್. ಸಂತೋಷಕುಮಾರ್ ಅವರು ತಿಳಿಸಿದ್ದಾರೆ.
ಹಂತ-1ಕ್ಕೆ 5 ರೂ., ಹಂತ-2ಕ್ಕೆ 8 ರೂ., ಹಂತ-3ಕ್ಕೆ 10 ರೂ., ಹಂತ-4ಕ್ಕೆ 12 ರೂ., ಹಂತ-5ಕ್ಕೆ 14 ರೂ., ಹಂತ-6ಕ್ಕೆ 15 ರೂ., ಹಂತ-7ಕ್ಕೆ 16 ರೂ. ಹಾಗೂ ಹಂತ 8ಕ್ಕೆ 17 ರೂ. ನಿಗದಿಪಡಿಸಲಾಗಿದೆ.