ನಗರ ಸಾರಿಗೆ ಕಲ್ಪಿಸಲು ಮನವಿ

ಹಿರಿಯೂರು ಜು.17-ಕ್ಯಾಂಪಸ್ ಫ್ರಂಟ್‌ನ ನಿಯೋಗ  ವತಿಯಿಂದ ತಾಲೂಕು ಸಾರಿಗೆ  ಅಧಿಕಾರಿ  ಜತೆ, ಕಾಲೇಜಿಗೆ ಬಸ್ ಸೌಲಭ್ಯ ಕಲ್ಪಿಸುವ ಕುರಿತು ಚರ್ಚಿಸಿದರು.ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿರಿಯೂರಿನಿಂದ ಸುಮಾರು 6 ಕಿಮೀ ದೂರದಲ್ಲಿದೆ  ಮತ್ತು ವೇದಾವತಿ ಪ್ರಥಮ ದರ್ಜೆ ಕಾಲೇಜು ಹಿರಿಯೂರು ನಗರದಿಂದ ದೂರದಲ್ಲಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ನಗರ ಸಾರಿಗೆ ಸೌಲಭ್ಯ ಮಾಡಬೇಕು. ಆದಷ್ಟು ಬೇಗ ಈ ವಿದ್ಯಾರ್ಥಿಗಳ ಸಮಸ್ಯೆಗೆ ಕಡಿವಾಣ ಹಾಕುವಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಹಿರಿಯೂರು ತಾಲೂಕು ವತಿಯಿಂದ ಸಾರಿಗೆ  ಅಧಿಕಾರಿ ಯವರಿಗೆ ಮನವಿ ಸಲ್ಲಿಸಿದರು.ತಾಲೂಕು ಅಧ್ಯಕ್ಷರಾದ   ಇಮ್ರಾನ್ ಮತ್ತು ಅಬೂಬಕರ್ ಸಿದ್ದಿಕ್, ಅಬುಝರ್,ಅಬೂಬಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.