ನಗರ ಸಭೆ :ಬೀದಿಬದಿ ವ್ಯಾಪಾರಸ್ಥರಿಗೆ ಕೊರೊನ ಲಸಿಕೆ

ರಾಯಚೂರು.ಮೇ.೩೦-ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂದು ನಗರ ಸಭೆ ವತಿಯಿಂದ ಬೀದಿ ಬದಿ ವ್ಯಾಪಾರಸ್ಥರಿಗೆ ನಗರ ಸಭೆ ಅಧ್ಯಕ್ಷ ಈ .ವಿನಯಕುಮಾರ ಅಧ್ಯಕ್ಷತೆಯಲ್ಲಿ ಕೋವಿಡ್ ಲಸಿಕೆಯನ್ನು ಹಾಕಿಸಲಾಯಿತು.
ನಗರ ಸಭೆ ಸಭಾಂಗಣದಲ್ಲಿ ಲಸಿಕೆ ಹಾಕಿಸಿ ಅಧ್ಯಕ್ಷ ಈ.ವಿನಯಕುಮಾರ್ ಅವರು ಮಾತನಾಡುತ್ತ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಇಂದು ನಗರದ ಬೀದಿ ಬದಿಯ ೧೯೦೯ ಜನರಿಗೆ ಈಗಾಗಲೇ ಮಾಹಿತಿ ನೀಡಿದ್ದು ಎಲ್ಲರೂ ಕಡ್ಡಾಯವಾಗಿ ಕೊರೊನ ಲಸಿಕೆಯನ್ನು ಹಾಕಿಸಿಕೊಳ್ಳಬೇಕು.
ಈಗಾಗಲೇ ೧೦೦ ಜನರಿಗೆ ಲಸಿಕೆಯನ್ನು ಹಾಕಿಸಲಾಗಿದ್ದು ಎಲ್ಲರೂ ಕೊರೊನ ರೋಗಕ್ಕೆ ನಿರ್ಲಕ್ಷ್ಯ ಮಾಡಬೇಡಿ ಎಲ್ಲರೂ ಲಸಿಕೆಯನ್ನು ಪಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ವೆಂಕಟೇಶ್, ನಗರಸಭೆ ಸದಸ್ಯ ದರೂರ್ ಬಸವರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.