ನಗರ ಸಭೆ ಪೌರಾಯುಕ್ತ ಮಂಜುನಾಥ ವರ್ಗಾವಣೆ, ಶಾಸಕರಿಗೆ ಶಾಕ್

ಚಿದಾನಂದ ದೊರೆ
ಸಿಂಧನೂರು,ಜೂ.೩೦-
ನಗರ ಸಭೆಯ ಪೌರಾಯುಕ್ತರಾದ ಮಂಜುನಾಥ ಗುಂಡುರು ಇವರನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ವರ್ಗಾವಣೆ ಬಗ್ಗೆ ಶಾಸಕ ಹಂಪನಗೌಡ ಬಾದರ್ಲಿಯವರಿಗೆ ಗಮನಕ್ಕಿಲ್ಲದೆ ಇರುವದು ಅಚ್ಚರಿ ಮೂಡಿಸಿದೆ.
ತಾಲೂಕಿನಲ್ಲಿ ಯಾವ ಅಧಿಕಾರಿಗಳೂ ಇರಬೇಕು ಇರಬಾರದು ಎನ್ನುವದು ಸ್ಥಳೀಯ ಶಾಸಕರು ಸರ್ಕಾರಕ್ಕೆ ಪತ್ರ ಬರೆಯಬೇಕು ಆಗ ಸರ್ಕಾರ ಅಧಿಕಾರಿಗಳನ್ನು ನಿಯೋಜನೆ ಮಾಡಿ ವರ್ಗಾವಣೆ ಮಾಡಿ ಆದೇಶ ಮಾಡುತ್ತದೆ ಇದು ಎಲ್ಲರಿಗೂ ತಿಳಿದ ವಿಷಯ. ಆದರೆ ಮಂಜುನಾಥ ಗುಂಡುರ ವರ್ಗಾವಣೆ ಬಗ್ಗೆ ಶಾಸಕರ ಗಮನಕ್ಕೆ ಇಲ್ಲದೆ ಅದೇಗೆ ಯಾರು ತಮ್ಮ ಪ್ರಭಾವ ಬೀರಿ ವರ್ಗಾವಣೆ ಮಾಡಿಸಿದ್ದಾರೆ. ಎನ್ನುವದರ ಬಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡರು ತಲೆ ಕೆಡಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮಂಜುನಾಥ ಗುಂಡುರ ನಗರ ಸಭೆಯ ಪೌರಾಯುಕ್ತರಾಗಿ ಬಂದ ಮೇಲೆ ತುಕ್ಕು ಇಡಿದ ಆಡಳಿತ ವ್ಯವಸ್ಥೆಯನ್ನು ಬದಲಾವಣೆ ಮಾಡಿ ಜನರಿಗೆ ವಿಳಂಬ ವಾಗುವ ಕೆಲಸ ಕಾರ್ಯಗಳನ್ನು ತ್ವರಿತ ಗತಿಯಲ್ಲಿ ಮಾಡುವ ಮೂಲಕ ಜನರ ಮೆಚ್ಚಿಗೆ ಪಾತ್ರರಾಗಿದ್ದರು ಅಧಿಕಾರಿಗಳು ಸಿಬ್ಬಂದಿಗಳು ಸಹ ಮೈಗಳ್ಳತನ ಬಿಟ್ಟು ಹಗಲು ರಾತ್ರಿ ಜನರ ಕೆಲಸ ಮಾಡ ಬೇಕು ಯಾವುದೆ ರೀತಿಯ ಜನರಿಗೆ ತೊಂದರೆಯಾಗ ಬಾರದು ಎಂದು ಖಡಖ ಆದೇಶ ಮಾಡಿದ್ದರು.
ಮಂಜುನಾಥ ಗುಂಡುರು ವರ್ಗಾವಣೆ ಸುದ್ದಿ ಕೇಳಿ ಶಾಸಕರೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆನ್ನಲಾಗಿದೆ ಉತ್ತಮವಾಗಿ ಜನಪರ ಕೆಲಸ ಮಾಡುವ ಇಂಥ ಅಧಿಕಾರಿಯನ್ನು ವರ್ಗಾವಣೆ ಮಾಡದೆ ಇಲ್ಲೆ ಮುಂದುವರಿಸುವಂತೆ ಶಾಸಕರಲ್ಲಿ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
ಮಂಜುನಾಥ ಗುಂಡುರುರನ್ನು ವರ್ಗಾವಣೆ ಮಾಡಿ ಅವರ ಜಾಗಕ್ಕೆ ಬಳ್ಳಾರಿ ಮಹಾನಗರ ಪಾಲಿಕೆಯ ಮುಖ್ಯಾಧಿಕಾರಿ ಅಬ್ದುಲ್ ರಹೀಮಾನ ಸಾಬ ಇವರನ್ನು ವರ್ಗಾವಣೆ ಮಾಡಿ ೨೮.೬.೨೦೨೩ ರಂದು ಸರ್ಕಾರ ಆದೇಶ ಮಾಡಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರೋಬ್ಬರು ಪತ್ರಿಕೆಗೆ ಖಚಿತ ಪಡಿಸಿದ್ದಾರೆ ಮಂಜುನಾಥ ಗುಂಡುರ ಇವರನ್ನು ಇಲ್ಲೆ ಉಳಿಸಿಕೊಳ್ಳುತ್ತಾರೆ ಇಲ್ಲ ಈಗ ಬಂದಿರುವ ಅಧಿಕಾರಿಯನ್ನು ಮುಂದುವರಿಸಿಕೊಂಡು ಹೋಗುತ್ತಾರೊ ಎನ್ನುವದು ಶಾಸಕ ಹಂಪನಗೌಡ ಬಾದರ್ಲಿ ಮೇಲೆ ಇದೆ.
ನಗರದ ಸಭೆಯ ಪೌರಾಯುಕ್ತರಾದ ಮಂಜುನಾಥ ಗುಂಡುರ ಹಾಗೂ ತಹಸೀಲ್ದಾರ ಅರುಣ ಕುಮಾರ ದೇಸಾಯಿ ಸಿಂಧನೂರಿಗೆ ಬಂದಾಗಿನಿಂದಲು ಯಾವದೆ ಆರೋಪಗಳಿಲ್ಲದೆ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಇದು ಶಾಸಕರಿಗೂ ಗೊತ್ತು. ಶಾಸಕರ ಶಿಪ್ಪಾರಸ್ಸು ಪತ್ರ ಇಲ್ಲದೆ ಅದೇಗೆ ಇವರನ್ನು ವರ್ಗಾವಣೆ ಮಾಡಲಾಗಿದೆ ತಿಳಿಯದಾಗಿದೆ. ಶಾಸಕರ ಗಮನಕ್ಕೆ ಇಲ್ಲದೆ ಆರ್ ಹೆಚ್ ನಂ,೧ ಗ್ರಾಮ ಪಂಚಾಯ್ತಿ ಪಿಡಿಒ ಪೂರ್ಣಿಮ ಇವರನ್ನು ವರ್ಗಾವಣೆ ಮಾಡಲಾಗಿದೆ ಇದು ಎರಡನೆ ಪ್ರಕರಣವಾಗಿದೆ.
ಹಂಪನಗೌಡ ಬಾದರ್ಲಿ ಶಾಸಕರಾದ ಮೇಲೆ ಪೌರಾಯುಕ್ತರಾದ ಮಂಜುನಾಥ ಗುಂಡುರ, ತಹಸೀಲ್ದಾರ ಅರಣು ಕುಮಾರ ದೇಸಾಯಿ ಯುವಕರಿದ್ದು ಉತ್ಸಾಹದಿಂದ ಕೆಲಸ ಮಾಡುವ ಇವರನ್ನು ವರ್ಗಾವಣೆ ಮಾಡಬಾರದು ಎಂದು ಸ್ವತ ಶಾಸಕ ಹಂಪನಗೌಡರೆ ಸರ್ಕಾರಕ್ಕೆ ಪತ್ರ ನೀಡಿದ ಮೇಲೆ ಸಹ ಅವರ ಗಮನಕ್ಕೆ ಇಲ್ಲದೆ ಮಂಜುನಾಥ ಗುಂಡುರನ್ನು ವರ್ಗಾವಣೆ ಮಾಡಲಾಗಿದೆ ಎಂದರೆ ಶಾಸಕರನ್ನು ಮೀರಿಸುವ ಶಕ್ತಿ ಅದ್ಯಾವದು ಎಂಬುದು ಪತ್ತೆ ಹಚ್ಟಿ ಅದಕ್ಕೆ ಕಡಿವಾಣ ಹಾಕಿ ಇನ್ನೂ ಮುಂದೆ ಈ ರೀತಿ ಯಾಗದಂತೆ ಶಾಸಕರು ಎಚ್ಚರ ವಹಿಸಿಬೇಕಾಗಿದೆ.