ನಗರ ಸಭೆ ಅಧ್ಯಕ್ಷರ ಹೇಳಿಕೆ ಹಾಸ್ಯಾಸ್ಪದ- ಎನ್.ಮಹಾವೀರ

ರಾಯಚೂರು, ಜೂ.೭- ನಗರದ ತೀನ್ ಖಂಡಿಲ್ ವೃತ್ತದಿಂದ ಅಶೋಕ ಡಿಪೋ ವೃತ್ತದವರೆಗೆ ೫೦ ಅಡಿ ರಸ್ತೆ ಅಗಲೀಕರಣ ಕಾರ್ಯ ಪೂರ್ಣ ಗೊಂಡಿದೆ ಎಂದು ನಗರ ಸಭೆ ಅಧ್ಯಕ್ಷರ ಹೇಳಿಕೆ ಹಾಸ್ಯಾಸ್ಪದ ಎಂದು ವಾರ್ಡ್ ೧೨ ನಿವಾಸಿ ಎನ್.ಮಹಾವೀರ ಹೇಳಿದರು.
ನೆನೆಗುದಿಗೆ ಬಿದ್ದಿರುವ ರಸ್ತೆ ಅಗಲೀಕರಣ ಕಾರ್ಯ ಪುನ ಪ್ರಾರಂಭವಾಗಿದ್ದು ೫೦ ಅಡಿ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಿದ್ದು.ಯಾರದೇ ಮುಲಾಜಿಲ್ಲದೆ ಯಾರಿಗೂ ಅನ್ಯಾಯವಾಗದಂತೆ ೫೦ ಅಡಿ ರಸ್ತೆ ಅಗಲೀಕರಣ ಕೆಲಸವಾಗಬೇಕು.ಹಾಗೂ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಬೇಕೆಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.