ನಗರ ಸಭೆಯಲ್ಲಿ ಶಂಕರಾಚಾರ್ಯ ಜಯಂತಿ

ಶಹಾಬಾದ:ಎ.26:ನಗರ ಸಭೆ ಕಚೇರಿಯಲ್ಲಿ ಜಗದ್ಗುರು ಶಂಕರಾಚಾರ್ಯರ 1235ನೇ ಜಯಂತೋತ್ಸವವನ್ನು ಮಂಗಳವಾರ ಬೆಳಗ್ಗೆ ಆಚರಿಸಲಾಯಿತು. ಬ್ರಾಹ್ಮಣ ಸಮಾಜದ ಅಧ್ಯಕ್ಷ ಶ್ರೀಧರ ಜೋಶಿ, ಪವನ ಕುಲಕರ್ಣಿ, ರಾಘವೇಂದ್ರ ಕರಗಲಿಕರ ಮಾಲಾರ್ಪಣೆ ಮಾಡಿದರು.
ಪತ್ರಕರ್ತ ಕೆ.ರಮೇಶ ಭಟ್ಟ ಮಾತನಾಡಿ ಜಗದ್ಗುರು ಶಂಕರಾಚಾರ್ಯರು ಸನಾತನ ಸಂಸ್ಕøತಿ, ಧರ್ಮ ಅವನತಿಯ ಸ್ಥಿತಿಯನ್ನು ತಲುಪಿದಾಗ, ಜನ್ಮತಾಳಿ, ಕೇವಲ ತಮ್ಮ 32 ವರ್ಷದ ಆಯುಷ್ಯದಲ್ಲಿ ಇಡಿ ದೇಶವನ್ನು ಕಾನ್ನಡಿಗೆಯಲ್ಲಿ ಸುತ್ತಿ, ಸನಾತನ ಧರ್ಮ ಸ್ಥಾಪನೆ ಮಾಡಿದ್ದಲ್ಲದೆ, ದೇಶದ ಶಕ್ತಿ ಪೀಠಗಳನ್ನು, ಜ್ಯೋತಿರ್ಲೀಂಗಳನ್ನು ಪುನುರುಜ್ಜೀವನಗೊಳಿಸಿದರು. ವೇದ, ಉಪನಿಷತ್ತುಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಿ, ಜೀವಾತ್ಮ, ಪರಮಾತ್ಮ ಒಂದೆ ಎಂಬ ತತ್ವವನ್ನು ಸಾರಿ ಅದೈತ್ ಸಿದ್ದಾಂತವನ್ನು ಭೋಧಿಸಿದರು, ಅವರಿಂದಲೇ ಜಗತ್ತಿನಲ್ಲಿ ಇಂದು ಹಿಂದೂ ಸನಾತನ ಧರ್ಮ ಉಳಿದು, ವಿಶ್ವಕ್ಕೆ ಮಾರ್ಗದರ್ಶನ ಮಾಡುತ್ತಿದೆ ಎಂದು ಹೇಳಿದರು. ನಗರ ಸಭೆ ಅಧಿಕಾರಿ ಶರಣಗೌಡ ಪಾಟೀಲ, ನಗರ ಸಭೆ ಮಾಜಿ ಸದಸ್ಯ ದುರ್ಗಪ್ಪ ಪವಾರ, ಸಮಾಜದ ಹಣಮೇಶ ಕುಲಕರ್ಣಿ, ಸಾಗರ ಕುಲಕರ್ಣಿ, ದಾಮೋಧರ ಭಟ್ಟ ನಗರ ಸಭೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.