ನಗರ ಶಾಸಕರ ಸಮ್ಮುಖದಲ್ಲಿ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆ ವಿವಿಧ ಮೋರ್ಚಾಗಳಿಗೆ ಜಿಲಾನ್ ಭಾಷ್, ಫಕೃದ್ಧೀನ್, ಸೀತಾರಾಮ್ ನೇಮಕ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.02: ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ನೇತೃತ್ವದಲ್ಲಿ ಇಂದು ವಾಲ್ಮೀಕಿ ಸರ್ಕಲ್ ನಲ್ಲಿರುವ ನಗರ ಬಿಜೆಪಿ ಕಛೇರಿಯಲ್ಲಿ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಯಾದರೆ, ಇನ್ನು ಹಲವರನ್ನು ಬಿಜೆಪಿ ಮೋರ್ಚಾಗಳಿಗೆ ನೇಮಕ ಮಾಡಿ ಆದೇಶಿಸಲಾಗಿದೆ.
ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಉಪಾಧ್ಯಕ್ಷರನ್ನಾಗಿ ಕಣೇಕಲ್ ಜಿಲಾನ್ ಭಾಷ್, ಜಿಲ್ಲಾ ಕಾರ್ಯದರ್ಶಿಯಾಗಿ ಫಕೃದ್ಧೀನ್, ಹಿಂದುಳಿದ ವರ್ಗಗಳ ಮೋರ್ಚಾದ ನಗರ ಕಾರ್ಯದರ್ಶಿಯನ್ನಾಗಿ ಸೀತಾರಾಮ್ ಅವರನ್ನು ನೇಮಕ ಮಾಡಲಾಗಿದೆ. ಇವರಿಗೆ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ, ಪಾಲಿಕೆಯ ಮಾಜಿ ಮೇಯರ್, ಸದಸ್ಯ, ಸಿ.ಇಬ್ರಾಹಿಂ ಬಾಬು ಅವರು ನೇಮಕಾತಿ ಆದೇಶ ಪತ್ರವನ್ನು ವಿತರಿಸಿದರು.
ನಂತರ ಮಾತನಾಡಿದ ಶಾಸಕರು ಮತ್ತು ಇಬ್ರಾಹಿಂ ಬಾಬು ಅವರು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರವನ್ನು ಹೊಂದಿರುವ ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಎಲ್ಲಾ ಸಮುದಾಯಗಳ ಹಿತಚಿಂತನೆಯಿಂದ ಹಲವಾರು ಯೋಜನೆಗಳನ್ನು ಈವರೆಗೆ ಕೈಗೊಂಡಿದೆ. ಬರುವ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಬೆಂಬಲಿಸಿ ಆಯ್ಕೆ ಮಾಡುವ ಮೂಲಕ ನಗರ, ರಾಜ್ಯ, ದೇಶದ ಅಭಿವೃದ್ಧಿಗೆ ಎಲ್ಲರು ಬಿಜೆಪಿಗೆ ಮತ ನೀಡಬೇಕು ಎಂದರು.