ನಗರ ಶಾಸಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.10: ನಗರದ 23 ನೇ ವಾರ್ಡಿನ ಯುವ ಸಮೂಹ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿ. ನಗರದ ಅಭಿವೃದ್ಧಿಗಾಗಿ ಶಾಸಕ ಸೋಮಶೇಖರ ರೆಡ್ಡಿ ಸಮ್ಮುಖದಲ್ಲಿ ನಡುವೆ ನಿನ್ನೆ ಸಂಜೆ ಬಿಜೆಪಿ ಸೇರಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್ , ಜಿ. ಶ್ರೀನಿವಾಸ್  ಹಾಗೂ ಹನುಮಂತ್ ಗುಡಗಂಟಿ ಹಾಗೂ ಬಿಜೆಪಿಯ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.