ನಗರ ಶಾಸಕರ ಕಚೇರಿ ಆರಂಭ

(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ:ಅ,22- ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಇಂದು ಮಹಾ ನಗರ ಪಾಲಿಕೆಯ ಕಚೇರಿಯ ಕಟ್ಟಡದಲ್ಲಿ ಶಾಸಕರ ಕಚೇರಿಯನ್ನು ಆರಂಭಿಸಿದ್ದಾರೆ.ಸಾರ್ವಜನಿಕರು ತಮ್ಮ ಕುಂದು‌ಕೊರತೆಗಳ‌ ಬಗ್ಗೆ ಶಾಸಕರನ್ನು ಭೇಟಿ ಮಾಡಲು. ಇಲ್ಲ ಅವರಿಲ್ಲದಿದ್ದರೆ ಅವರ ಆಪ್ತ ಸಿಬ್ಬಂದಿಗೆ  ತಮ್ಮ ಅಹವಾಲುಗಳನ್ನು ಸಲ್ಲಿಸಲು ಅನುಕೂಲವಾಗಲಿದೆ ಈ ಕಚೇರಿ. ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರು, ಮೇಯರ್ ಮೊದಲಾದವರು ಇದ್ದರು.ಕಚೇರಿ ಆರಂಭಿಸಿದರಷ್ಟೇ ಸಾಲದು ಅದರಿಂದ ಜನರಿಗೆ ಉಪ ಯೋಗವಾಗ ಬೇಕು. ಪಕ್ಕದಲ್ಲೇ ಗ್ರಾಮೀಣ ಶಾಸಕರ ಕಚೇರಿ ಇದೆ. ಅಲ್ಲಿ ಶಾಸಕರು ಕೂತಿದ್ದೇ ಅಪರೂಪ, ನಾಮಕಾವಸ್ಥೆ ಕಚೇರಿಯಾಗಿದೆ. ಮೇಯರ್ ಚುನಾವಣೆ ದಿನ‌ಮಾತ್ರ ಈ ಕಚೇರಿ ಬಳಿಕೆಯಾಗಿತ್ತು. ಇದೇ ರೀತಿ ನಗರದಲ್ಲಿ ಎಂ.ಪಿ.ದೇವೇಂದ್ರಪ್ಪ, ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಅವರ ಕಚೇರಿಗಳ ಸದ್ಬಳಕೆ ಆಗುತ್ತಿಲ್ಲ ಎಂಬ ಆರೋಪ ಇದೆ.
One attachment • Scanned by Gmail