ನಗರ ಶಾಸಕರಿಂದ ವಿಶ್ವ  ರಕ್ತದಾನಿಗಳ ದಿನಾಚರಣೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಜೂ.14: ತಮ್ಮ ಆಯ್ಕೆ ಜೊತೆಗೆ  ರಾಜ್ಯದಲ್ಲಿ  ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಸಂಕಲ್ಪದಂತೆ ಇಂದು ನಗರದ ಸಂಗನಕಲ್ಲು ರಸ್ತೆಯ ನಳಂದ ಶಾಲೆಯ ಮೈದಾನದಲ್ಲಿ ರಕ್ತ ದಾನಿಗಳ ದಿನಾಚರಣೆಯ ದಿನವಾದ ಇಂದು ರಕ್ತದಾನದ ಬೃಹತ್ ಶಿಬಿರ ಹಮ್ಮಿಕೊಂಡಿದ್ದರು. 
ಶಿಬಿರದಲ್ಲಿ 999 ಜನರಿಂದ ರಕ್ತದಾನ ಮಾಡುವ ಗುರಿ ಹೊಂದಿದೆ. ಆದರೆ ಮಧ್ಯಾಹ್ನದ ವೇಳೆಗೆ 650 ಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದರು.  
ಈ  ವಿಶ್ವ ರಕ್ತ ದಾನಿಗಳ ದಿನಾಚರಣೆಯನ್ನು 117 ಬಾರಿ ರಕ್ತದಾನ ಮಾಡಿ ಗಿನ್ನೀಸ್ ದಾಖಲೆ ಮಾಡಿರುವ ಮಧುರಾ ಅಶೋಕ್ ಕುಮಾರ್. ರಕ್ತದಾನ ಇತರೇ ದಾನಗಳಂತೆ ಶ್ರೇಷ್ಟವಾದುದು. ಜೀವರಕ್ಷಣೆಗೆ ಇದು ಅವಶ್ಯ‌. ರಕ್ತದಾನ ಮಾಡುವುದರಿಂದ  ಸಶಕ್ತರಾಗಿದ್ದ ನಮ್ಮ ಆರೋಗ್ಯಕ್ಕೆ ಸಮಸ್ಯೆ ಇಲ್ಲ. ಯುವ ಜನತೆ ರಕ್ತದಾನ ಮಾಡಲು ಸದಾ ಸಿದ್ದರಾಗಿರಬೇಕು ಎಂದು. ಈ ನಿಟ್ಟಿನಲ್ಲಿ ಶಾಸಕರ ಕಾರ್ಯ ಶ್ಲಾಘನೀಯ ಎಂದರು.  
ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಭರತ್ ರೆಡ್ಡಿ,  ದೇವರ ಹರಕೆ ತಿರಿಸೋದು ಸಾಮಾನ್ಯ,  ಆದ್ರೇ ನಮ್ಮನ್ನು ಆಯ್ಕೆ ಮಾಡಿದ ಜನರ ಪ್ರಾಣ ರಕ್ಷಣೆ ಹೊಣೆ ನಮ್ಮದು. ಈ ಹಿನ್ಬಲೆಯಲ್ಲಿ ಪ್ರತಿ ವರ್ಷ ಇದೇ ರೀತಿ ರಕ್ತದಾನದ ಶಿಬಿರವನ್ನು ತಮ್ಮ ಟಚ್ ಪರ್ ಲೈಪ್ ಫೌಂಡೇಷನ್ ನಿಂದ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

Show quoted text