
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.07: ಡಿಜಟಲ್ ಸ್ವರೂಪದ ಮೂಲಕ ಸಿದ್ದಪಡಿಸಿರುವ ಬಿಜೆಪಿ ಪಕ್ಷದ ನಗರ ಅಭ್ಯರ್ಥಿ ಸೋಮಶೇಖರ ರೆಡ್ಡಿ ಪರ ಮತಯಾಚನೆ ಮಾಡುವ ವಾಹನಕ್ಕೆ ನಿನ್ನೆ ಸಂಜೆ ಚಾಲನೆ ನೀಡಲಾಯ್ತು.
ಸ್ವತಃ ಅಭ್ಯರ್ಥಿಯಾಗಿರುವ ಸೋಮಶೇಖರ ರೆಡ್ಡಿ, ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳ್ ಮುರಹರಗೌಡ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೋಮಶೇಖರ ರೆಡ್ಡಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳು
ಹಾಗು ಬಳ್ಳಾರಿ ನಗರ ಕ್ಷೇತ್ರದಲ್ಲಿ ಕಳೆದ ಐದು ವರ್ಷದಲ್ಲಿ ಕೈಗೊಂಡ ಅಭಿವೃದ್ಧಿ ಬಗ್ಗೆ ಜನರಿಗೆ ತಿಳಿಸಲು ಈ ವಾಹನದ ಮೂಲಕ ಪ್ರಚಾರ ಕಾರ್ಯ ನಡೆಯಲಿದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುತ್ರ ಶ್ರವಣಕುಮಾರ್ ರೆಡ್ಡಿ, ಮುಖಂಡರುಗಳಾದ ವೀರಶೇಖರರೆಡ್ಡಿ, ಶ್ರೀನಿವಾಸ್ ಮೋತ್ಕರ್, ಕೃಷ್ಣಾರೆಡ್ಡಿ, ರಾಜೀವ್ ತೊಗರಿ ಮೊದಲಾದವರು ಇದ್ದರು.