ನಗರ ಶಾಸಕರಿಂದ ನಗರದಾದ್ಯಂತ ಕೋವಿಡ್ ಲಸಿಕೆ ಹಾಕಿಸುವ ಅಭಿಯಾನ

ವಿಜಯಪುರ, ಎ.25-ನಗರ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳರವರು ನಗರಾದ್ಯಂತ ಉಚಿತವಾಗಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಮನೆ ಮನೆಗೆ ಲಸಿಕೆ ಹಾಕುವ ಕಾರ್ಯಕ್ರಮದಡಿ, ಉಚಿತ ಲಸಿಕೆ ಆಭಿಯಾನವನ್ನು ಸೋಮವಾರದಿಂದ ನಗರಾದ್ಯಂತ ಉಚಿತವಾಗಿ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ.
ವಿಜಯಪುರ ನಗರಾದ್ಯಂತ ವಿವಿಧ ಬಡಾವಣೆ, ಕಾಲನಿಗಳಲ್ಲಿ ಹಮ್ಮಿಕೊಂಡಿದ್ದು, ಇದರಲ್ಲಿ ಆರೋಗ್ಯ ಅಧಿಕಾರಿಗಳು, ಮತ್ತು ಸಿಬ್ಬಂಧಿಗಳು ಭಾಗವಹಿಸುತ್ತಾರೆ.
ವಿಜಯಪುರ ನಗರವು ಈಗಾಗಲೇ ಶೇ 42% ರಷ್ಟು ಗುರಿಯನ್ನು ಸಾಧಿಸಿದ್ದು, ಜಿಲ್ಲೆಯ ಒಟ್ಟಾರೆ ಪ್ರತಿಶತ ಶೇಕಡಾದಲ್ಲಿ ನಗರವು ಮುಂದಿದೆ. ನಗರದಾದ್ಯಂತ ವ್ಯಾಕ್ಷಿನೇಶನ್ ನಡೆಯುತ್ತಿದ್ದು ಈಗಾಗಲೇ ತಮ್ಮ ಸಿದ್ಧೇಶ್ವರ ಸಂಸ್ಥೆಯ ಹಾಗು ಸಿದ್ದಸಿರಿ ಸೌಹಾರ್ಧ ಸಹಕಾರಿ ನಿ. ಸಹಭಾಗಿತ್ವದಡಿಯಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಯ ನಗರದ ಮನಗೂಳಿ ರಸ್ತೆಯಲ್ಲಿ ಬರುವ ಬಸವ ಭವನ ಮಂಗಲ ಕಾರ್ಯಾಲವನ್ನು ಕೋವಿಡ್ ಕೇರ್ ಸೆಂಟರ್‍ಗಾಗಿ ಮಾನ್ಯ ಶಾಸಕರು ನೀಡಿದ್ದು, ಇಲ್ಲಿ ಕೋವಿಡ್‍ಕೇರ್ ಸೆಂಟರ್ ಪ್ರಾರಂಬಿಸಲಾಗುತ್ತಿದ್ದು, ಇಲಿ ್ಲಆರೋಗ್ಯ ಸಿಬ್ಬಂದಿಗಳು ಇರುತ್ತಾರೆ, ಅಲ್ಲದೆ ತಮ್ಮ ಸಿದ್ದೇಶ್ವರ ಸಂಸ್ಥೆ ಹಾಗು ಸಿದ್ದಸಿರಿ ಸೌಹಾರ್ಧದಿಂದ ರೋಗಿಗಳಿಗಾಗಿ ಉಚಿತವಾಗಿ ಬೆಳಿಗ್ಗೆ ಉಪಹಾರ ಹಾಗು ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆಯನ್ನು ಹಾಗು ಬೆಡ್ ವ್ಯವಸ್ಥೆಯನ್ನು ಬಸವ ಭವನದ ಲ್ಲಿಕಲ್ಪಿಸಿರುತ್ತಾರೆ. ಸಂಸ್ಥೆಯ ವತಿಯಿಂದ ಶಾಲಾ ಬಸ್ಸಗಳನ್ನು ನಗರ ನಾಗರಿಕರಿಗಾಗಿ ನಡೆಯುವ ಲಸಿಕಾ ಕೇಂದ್ರಗಳಿಗಾಗಿ ಕರೆತರಲು ನೀಡಿರುತ್ತಾರೆ. ಸದರಿ ದಿನಾಂಕಗಳಂದು ಉಚಿತ ಲಸಿಕಾ ಕೇಂದ್ರದ ಬಗ್ಗೆ ಮಾಹಿತಿ ನೀಡಲು ಅಟೋ ಪ್ರಚಾರದ ವ್ಯವಸ್ಥೆ ಸಹ ಮಾಡಿರುತ್ತಾರೆ. ಸಂಸ್ಥೆಯ ಹಾಗು ಸೌಹಾರ್ದದ ಸಿಬ್ಬಂದಿಗಳು ಮನೆ-ಮನೆಗೆ ಹೋಗಿ ಲಸಿಕಾ ಕೇಂದ್ರದಲ್ಲಿ ನಾಗರಿಕರು ಬಂದು ಲಸಿಕೆ ಪಡೆಯುವ ಸಂಬಂದ ಪ್ರೇರೇಪಿಸಲಿದ್ದಾರೆ.
ವಿಜಯಪುರ ನಗರ ಮತಕ್ಷೇತ್ರವು ನೂರಕ್ಕೆ ನೂರರಷ್ಟು (100%) ಲಸಿಕಾ ಗುರಿ ಸಾಧಿಸುವನಿಟ್ಟಿನಲ್ಲಿ ನಗರ ಶಾಸಕರು ತಮ್ಮ ಪರಿಕಲ್ಪನೆಯೊಂದಿಗೆ, ಸತತವಾಗಿ ಉಚಿತ ಲಸಿಕಾ ಅಭಿಯಾನವನ್ನು ಈ ಕೆಳಕಂಡ ದಿನಾಂಕಗಳಂದು ವಿವಿಧ ಬಡಾವಣೆ / ಕಾಲನಿಗಳಲ್ಲಿ ಹಮ್ಮಿಕೊಂಡಿದ್ದು, ಸುತ್ತಮುತ್ತಲಿನ ನಾಗರಿಕರುಇದರ ಸದುಪಯೋಗ ಪಡಿಸಿಕೊಳ್ಳಲು ವಿನಂತಿಸಿರುತ್ತಾರೆ.
ಈ ಕೆಳಕಂಡಂತೆ ಉಚಿತ ಲಸಿಕಾ ಅಭಿಯಾನದ ಕಾರ್ಯಕ್ರಮ ವಿವಿಧ ಬಡಾವಣೆಗಳಲ್ಲಿ ಜರುಗಲಿದೆ.
ದಿ.26 ಸೋಮವಾರ ಬೆಳಿಗ್ಗೆ 10:30 ಕ್ಕೆ ವಾರ್ಡ ನಂ-05, ಆದರ್ಶನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣ, ದಿ. 27 ಮಂಗಳವಾರ ಬೆಳಿಗ್ಗೆ 10:30 ಕ್ಕೆ ವಾರ್ಡ ನಂ-04, ಸೋಲಾಪುರರಸ್ತೆ ಯಕೆ.ಎಚ್.ಬಿ. ಕಾಲೊನಿ ಶ್ರೀ ಹನುಮಾನಗುಡಿ ಆವರಣ, ದಿ. 28 ಬುಧವಾರ ಬೆಳಿಗ್ಗೆ 10:30 ಕ್ಕೆ ವಾರ್ಡನಂ-01 ರ ಸಂಗಮೇಶ್ವರಕಾಲೊನಿಯ ಶ್ರೀ ಸಂಗಮೇಶ್ವರಗುಡಿ ಆವರಣ, ದಿ. 29 ಗುರುವಾರ ಬೆಳಿಗ್ಗೆ 10:30 ಕ್ಕೆ ವಾರ್ಡನಂ-22,ರಜಲನಗರದ ಶ್ರೀ ಶಿವಶರಣೆ ನಿಂಬೆಕ್ಕ ಸಭಾಭವನ ಸಿದ್ದೇಶ್ವರ ಬ್ಯಾಂಕ್ ಹತ್ತಿರ ಹಾಗೂ ದಿ.30 ಶುಕ್ರವಾರ ಬೆಳಿಗ್ಗೆ 10:30 ಕ್ಕೆ ವಾರ್ಡನಂ-03 ರ ಗ್ಯಾಂಗಬಾವಡಿಯ ಕುಂಬಾರಗಲ್ಲಿಯ ಸರಕಾರಿ ಶಾಲೆ ನಂ-10 ರಲ್ಲಿ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.