ನಗರ ವಿಧಾನ ಸಭೆ ಕ್ಷೇತ್ರ: ಜಾ.ದಳ ದಿಂದ ಅಲ್ಪ ಸಂಖ್ಯಾತರಿಗೆ ಟಿಕೇಟ್-ಚರ್ಚೆ

ಬಿಜೆಪಿ ಶಾಸಕರ ನಿಕಟವರ್ತಿ ಜಾ.ದಳ ಮುಖಂಡರ ಗೇಟ್‌ಪಾಸ್- ಸಿದ್ದತೆ
ರಾಯಚೂರು ನ ೧೦:- ಪಕ್ಷದ ವಿವಿಧ ಘಟಕಗಳ ಪ್ರಮುಖ ಸ್ಥಾನದಲ್ಲಿದ್ದು ಬಿಜೆಪಿ ಶಾಸಕರ ಜೊತೆ ನಿಕಟ ಸಂಪರ್ಕದಲ್ಲಿರುವ ಮುಖಂಡರಿಗೆ ನೊಟೀಸ್ ಜಾರಿಗೊಳಸಿ ಪಕ್ಷದಿಂದ ಗೇಟ್‌ಪಾಸ್ ನೀಡುವ ಆದೇಶ ಜಾ.ದಳ ಪಕ್ಷದ ಹೈ ಕಮಾಂಡ್ ಜಿಲ್ಲಾ ನಾಯಕರಿಗೆ ನೀಡಿದೆ.
ಸದಸ್ಯತ್ವ ಅಭಿಯಾನ ಮತ್ತು ಜಿಲ್ಲೆಯಲ್ಲಿ ಮುಂಬರುವ ಚುನಾವಣೆಗೆ ಸಂಬಂಧಸಿ ಅಭ್ಯರ್ಥಿಗಳ ಆಯ್ಕೆ ಚರ್ಚೆ ಸಭೆಯಲ್ಲಿ ಜಿಲ್ಲೆಯ ಹಿರಿಯ ಮುಖಂಡರೊಬ್ಬರು ಪಕ್ಷ ಸಂಘಟನೆ ಮತ್ತು ಪಕ್ಷದ ನಾಯಕರು ನಗರ ಬಿಜೆಪಿ ಶಾಸಕರೊಂದಿಗೆ ಜೊತೆ ನಿಕಟವಾಗಿ ಗುರುತಿಸಿಕೊಂಡ ಪ್ರಕಣದ ಬಗ್ಗೆ ಹೈಕಮಾಂಡ್ ಗಮನ ಸೆಳೆದರು. ಪಕ್ಷದ ಪ್ರಮುಖ ಸ್ಥಾನಗಳಲ್ಲಿದ್ದು ಬಿಜೆಪಿ ಪಕ್ಷದ ಶಾಸಕ ಪರ ಕೆಲಸ ಮಾಡುವ ಮುಖಂಡರಿಗೆ ನೊಟೀಸ್ ನೀಡಿ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪಕ್ಷ ಸಂಘಟನೆ ಕಷ್ಟ ಎಂದರು.
ಜಾ.ದಳ ಪಕ್ಷದಲ್ಲಿ ಮುಖಂಡರಾಗಿ ಸ್ಥಳೀಯ ಶಾಸಕರನ್ನು ಸಮರ್ಥಿಸಿಕೊಂಡು ಬಹಿರಂಗ ಹೇಳಿಕೆ ನೀಡುವುದು ಮತ್ತು ಅವರೊಂದಿಗೆ ನಿಕಟವಾಗಿ ಗುರುತಿಸಿಕೊಳ್ಳುವ ಘಟನೆಗಳು ಪಕ್ಷ ಮುಜುಗರಕ್ಕೆ ಗುರಿಯಾಗುವಂತೆ ಮಾಡುವ ಪ್ರಸಂಗಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಈ ರೀತಿ ವರ್ತಿಸುವ ಮುಖಂಡರಿಗೆ ನೊಟೀಸ್ ಜಾರಿಗೊಳಿಸುವಂತೆ ಹೈಕಮಾಂಡ್ ಸೂಚಿಸಿದೆ ಎಂದು ತಿಳಿದು ಬಂದಿದೆ. ನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕರೊಂದಿಗೆ ನಿಕಟವಾಗಿರುವ ಮುಖಂಡರ ಬಗ್ಗೆ ಜಿಲ್ಲೆಯ ಮುಖಂಡರಿಗೆ ಸಂಪೂರ್ಣ ಮಾಹಿತಿ ಇದ್ದರು ಬೆಂಗಳೂರು ಸಭೆಯಲ್ಲಿ ಯಾರ ಹೆಸರು ಪ್ರಸ್ತಾಪಿಸದೆ ನಿಕಟವರ್ತಿಗಳು ಎನ್ನುವ ಪದ ಬಳಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ನಗರ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಟಿಕೇಟ್ ಎನ್.ಎಸ್. ಬೋಸರಾಜು ಅವರಿಗೆ ನೀಡಿದರೆ, ಕ್ಷೇತ್ರದಲ್ಲಿ ಜಾ.ದಳ ಪಕ್ಷ ಅಲ್ಪ ಸಂಖ್ಯಾತರಿಗೆ ಟಿಕೇಟ್ ನೀಡುವಂತೆ ಜಿಲ್ಲೆಯ ನಾಯಕರು ಹೈಕಮಾಂಡ್‌ಗೆ ಮನವಿ ಮಾಡಿತು. ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು ಆಧರಸಿ ಜಾ.ದಳ ಟಿಕೇಟ್ ವಿತರಣೆ ತಂತ್ರ ಬದಲಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಪಕ್ಷದಿಂದ ಟಿಕೇಟ್ ನೀಡುವವಾಗ ಹೈಕಮಾಂಡ್ ಜಿಲ್ಲಾ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಕೋರಲಾಯಿತು.
ಯಾರೆ ಪಕ್ಷದ ಟಿಕೆಟ್ ಕೇಳಿದರು ಜಿಲ್ಲಾ ಸಮಿತಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಕೇಳಿದರು. ಸ್ಥಳೀಯ ರಾಜಕೀಯ ಸ್ಥಿತಿಗತಿಯ ಬಗ್ಗೆ ಜಿಲ್ಲಾ ಸಮಿತಿಗೆ ಸಂಪೂರ್ಣ ಮಾಹಿತಿ ಇರುತ್ತದೆ. ಸ್ಥಳೀಯವಾಗಿ ಯಾರು ಸೂಕ್ತ ಅಭ್ಯರ್ಥಿ ಆಗ ಬಹುದು ಎಂದು ನಿರ್ಧರಿಸಲು ಅನುಕೂಲವಾಗುತ್ತದೆ. ಈ ಹಿನ್ನೆಲೆಯಯಲ್ಲಿ ನಗರ ವಿಧಾನ ಸಭೆ ಅಭ್ಯರ್ಥಿ ನಿರ್ಧರ ಕೈಗೊಳ್ಳುವ ಪೂರ್ವ ಜಿಲ್ಲಾ ಸಮಿತಿ ಅಭಿಪ್ರಾಯವನ್ನು ಕೇಳುವಂತೆ ಎಲ್ಲಾ ಮುಖಂಡರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕೇಳಿದರು.
ಜಿಲ್ಲಾ ಮುಖಂಡರ ಮನವಿಗೆ ಸ್ಪಂದಿಸಿದ ಕುಮಾರಸ್ವಾಮಿ ಅವರು, ಮುಂದಿನ ಚುನಾವಣೆ ಅಭ್ಯರ್ಥಿ ಅಯ್ಕೆ ವಿಷಯದಲ್ಲಿ ಜಿಲ್ಲಾ ಸಮಿತಿಗೆ ಹೆಚ್ಚಿನ ಅಧಿಕಾರಿ ಇರುತ್ತದೆ. ನೀವೆ ಸೂಕ್ತ ಅಭ್ಯರ್ಥಿಯನ್ನು ಹುಡುಕುವಂತೆ ಹೇಳಿದ ಅವರು ಜಿಲ್ಲಾ ಸಮಿತಿ ಶಿಫಾರಸು ಮಾಡುವಾಗ ಉತ್ತಮ ವ್ಯಕ್ತಿಯನ್ನು ಗುರುತಿಸ ಬೇಕು. ಪಕ್ಷದ ಬದ್ಧತೆ ಹೊಂದಿರಬೇಕು ಎಂದು ಹೇಳಿದರು ಎನ್ನಲಾಗಿದೆ