ನಗರ ವಿಧಾನಸಭೆ ಕ್ಷೇತ್ರದಲ್ಲಿ ಮಂದಗತಿಯ ಅಭಿವೃದ್ಧಿ-ಆರೋಪ

ಎರಡು ಸಲ ಶಾಸಕನಾಗಿ ಕೆಲಸ ಮಾಡಿದ್ದೇನೆ-ಮತ್ತೆ ಇಲ್ಲಿಂದಲೆ ಸ್ಪರ್ಧೆ
ರಾಯಚೂರು ನ ೧೧:- ರಾಜ್ಯದಲ್ಲಿ ತಮ್ಮದೆ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದು, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆಗೊಳಿಸುವ ಸಾಮರ್ಥ್ಯ ಪ್ರದರ್ಶಿಸದೆ, ರಾಯಚೂರು ತೆಲಂಗಾಣಕ್ಕೆ ಸೇರಿಸುವಂತೆ ಶಾಸಕ ಡಾ. ಶಿವರಾಜ ಪಾಟೀಲ್ ಅವರು ಹೇಳಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಸೈಯದ್ ಯಾಸೀನ್ ಅವರು ಹೇಳಿದರು.
ಅವರಿಂದ ಸುದ್ದಿಗಾರರೊಂದಿಗೆ ಮಾತನಾಡುತ್ತ, ನಗರ ವಿಧಾನಸಭೆ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ಮಂದಗತಿಯಲ್ಲಿ ನಡೆದಿವೆ. ನಗರದಲ್ಲಿ ಈ ಹಿಂದೆ ಯಾವುದೆ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ಹೇಳುವ ಶಾಸಕರು ಒಮ್ಮೆ ಗೂಗಲ್‌ನಲ್ಲಿ ಪರಿಶೀಲಿಸಿದರೆ ಯಾರ ಅವಧಿಯಲ್ಲಿ ಎಷ್ಟು ಅಭಿವೃದ್ಧಿಯಾಗಿದೆ ಎಂದು ಸ್ಪಷ್ಟಗೊಳ್ಳುತ್ತದೆ. ಡಾ. ಸಂಗಮೇಶ್ವರ ಸರ್ದಾರ ಅವಧಿಯಿಂದ ಎಂ.ನಾಗಪ್ಪ,ಉಮಾರ್‌ಸಾಬ್, ಎಂ.ಎಸ್ ಪಾಟೀಲ್, ಎ.ಪಾಪಾರೆಡ್ಡಿ ಮತ್ತು ನನ್ನ ಅವಧಿಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳು ಕ್ಷೇತ್ರದಲ್ಲಿ ಮಾಡಲಾಗಿದೆ. ಶಾಸಕರು ಈ ಹಿಂದೆ ಯಾವುದೆ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ಹೇಳುತ್ತಿರುವುದು ಸತ್ಯಕ್ಕೆ ದೂರುವಾಗಿದೆ.
ನಾನು ಶಾಸಕನಾದ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿ ಇತ್ತು. ಈ ಸಂದರ್ಭದಲ್ಲಿ ನಾನು ಸರಕಾರದೊಂದಿಗೆ ಸಂಘರ್ಷ ನಡೆಸಿ ಯೋಜನೆಗಳನ್ನು ತಂದಿದ್ದೇನೆ. ಶಾಸಕರು ತಮ್ಮದೆ ಸರಕಾರ ಅಧಿಕಾರದಲ್ಲಿ ಇರುವುದರಿಂದ ಧ್ವನಿ ಎತ್ತು ಯೋಜನೆಗಳನ್ನು ತರಬೇಕು. ಆದರೆ ಶಾಸಕರು ಅಭಿವೃದ್ಧಿಯನ್ನು ಮಂದಗತಿಯಲ್ಲಿ ನಡೆಸಿದ್ದಾರೆ. ಪವರ್ ಗ್ರಿಡ್, ಒಪೆಕ್ ಆಸ್ಪತ್ರೆ ,ರಿಮ್ಸ್ ಆಸ್ಪತ್ರೆ ಸೇರಿದಂತೆ ರಾಜ್ಯ ಹೆದ್ದಾರೆ ಹಾಗೂ ೩೩ ಕೋಟಿ ವೆಚ್ಚದಲ್ಲಿ ನಗರ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ.
ಕ್ಷೇತ್ರ ಅಭಿವೃದ್ಧಿ ಮಾಡುವ ಉದ್ದೇಶದಿಂದ ಜನರು ಶಾಸಕರನ್ನು ಆಯ್ಕೆ ಮಾಡುತ್ತಾರೆ. ಇಲ್ಲಿ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆದು ಯೋಜನೆಗಳ ರೂಪಿಸಿ ಸರಕಾರದಿಂದ ಅನುದಾನ ಬಿಡುಗಡೆಗೆ ಯತ್ನಿಸಬೇಕು. ಆದರೆ ಇಲ್ಲಿ ಅಭಿವೃದ್ಧಿ ಮಂದಗತಿಯಲ್ಲಿ ಸಾಗಿದೆ ಎಂದು ದೂರಿದರು.
ಮುಂಬರುವ ಚುನಾವಣೆಯಲ್ಲಿ ನಾನು ನಗರ ಕ್ಷೇತ್ರದಿಂದ ಸ್ಪರ್ಧಿಸುವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಕ್ಷೇತದಿಂದ ಟಿಕೇಟ್ ಆಕಾಂಕ್ಷಿ ಯಾರಾದರು ಹೊಂದಿರಬಹುದು. ಆದರೆ ಅರ್ಹತೆಯನ್ನು ಆಧರಿಸಿ ಟಿಕೇಟ್ ನೀಡಲಾಗುತ್ತದೆ. ನಾನು ಎರಡು ಅವಧಿಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದೇನೆ. ಇಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ಇಲ್ಲಿಂದಲೆ ಸ್ಪರ್ಧಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಿರೆಡ್ಡಿ, ಸುಧೀಂದ್ರ ಜಾಗಿರದಾರ, ಫಾರೂಕ್, ರಾಣಿ ರಿಚರ್ಡ್