ನಗರ ವಿಧಾನಸಭಾ ಕ್ಷೇತ್ರ : ನರಸಪ್ಪ ಯಾಕ್ಲಾಸಪುರಗೆ ಟಿಕೆಟ್ ಭರವಸೆ

ರಾಯಚೂರು.ಏ.೦೩-
ಚುನಾವಣೆ ಹತ್ತಿರ ಬರುತ್ತಿದಂತೆ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಾಗಿ ಬಾರಿ ಪೈಪೋಟಿ ಏರ್ಪಟಿದ್ದೆ, ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿರುವ ಹಿಂದುಳಿದ ವರ್ಗದ ನಾಯಕ ಮಾಜಿ ನಗರ ಸಭೆ ಸದಸ್ಯರಾದ ನರಸಪ್ಪ ಯಾಕ್ಲಾಸಪುರಗೆ ಟಿಕೆಟ್ ನೀಡುವಂತೆ ಕೇಂದ್ರ ಹಾಗೂ ರಾಜ್ಯ ನಾಯಕರ ಮೇಲೆ ಒತ್ತಡ ಹಾಕಲಾಗಿದೆ ಎಂದು ಬಿಜೆಪಿ ಕಾರ್ಯಕರ್ತ ವಾರ್ಡ್ ನಂಬರ್ ೨ ರ ಬಸವರಾಜ್ ಅವರು ತಿಳಿಸಿದರು.
ಈಗಾಗಲೇ ರಾಯಚೂರು ನಗರದಲ್ಲಿ ಬಿಜೆಪಿಯ ಡಾ. ಶಿವರಾಜ್ ಪಾಟೀಲ್ ಹಾಲಿ ಶಾಸಕರಾಗಿದ್ದಾರೆ ಮೊನ್ನೆ ಅವರು ಮಾತನಾಡಿದ ಆಡಿಯೋ ವೈರಲ್ ಆಗಿರುವಂತೆ ಬಿಜೆಪಿಯಲ್ಲಿನ ನಾಯಕರು ಈ ಸಂಧರ್ಭವನ್ನು ಉಪಯೋಗಿಸಿಕೊಂಡು ನಗರದ ಬಿಜೆಪಿ ಟಿಕೆಟ್ ಗಾಗಿ ನರಸಪ್ಪ ಯಾಕ್ಲಾಸಪುರ ಹಾಗೂ ಗುಡ್ಸಿ ನರಸರೆಡ್ಡಿ ಹಾಲಿ ಶಾಸಕರ ಜೊತೆಗೆ ಇವರು ಕೂಡ ಪ್ರಬಲವಾಗಿ ಟಿಕೆಟ್ ಸಿಗಬೇಕೆಂದು ಪೈಪೋಟಿ ನಡೆಸಿದ್ದಾರೆ.
ನರಸಪ್ಪ ಅವರು ಈ ಹಿಂದೆ ನಗರಸಭೆ ಸದಸ್ಯರಾಗಿದ್ದಾಗ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜನಸಾಮಾನ್ಯರಿಗೆ ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ,ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಹಲವಾರು ಸೇವೆಗಳನ್ನ ಮಾಡಿದ್ದಾರೆ, ಹಾಗಾಗಿ ನರಸಪ್ಪ ಅವರ ಮೇಲೆ ಹಿರಿಯ ರಾಜಕಾರಣಿಗಳ ಕೃಪಾ ಕಟಾಕ್ಷ ಇದೆ ಹಾಗಾಗಿ ಟಿಕೆಟ್ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ.
ಮೊನ್ನೆ ನಡೆದ ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಶಿವರಾಜ್ ಎಸ್ ಪಾಟೀಲ್, ನರಸಪ್ಪ ಯಾಕ್ಲಾಸಪುರ, ಗುಡ್ಸಿ ನರಸರೆಡ್ಡಿ,ಡಾ.ಬಸನಗೌಡ ಹೆಸರು ರಾಜ್ಯ ಹಾಗೂ ಕೇಂದ್ರ ಮುಖಂಡರಿಗೆ ಪಟ್ಟಿ ಕಳಿಸಲಾಗಿದೆ ಲ್ ಎಂದು ಬಿಜೆಪಿ ಪಕ್ಷದ ಜಿಲ್ಲಾ ಮುಖಂಡರು ತಿಳಿಸಿದರು.
ಮಾಜಿ ನಗರ ಸಭೆ ಸದಸ್ಯರಾದ ಬಿಜೆಪಿಯ ಮುಖಂಡ ನರಸಪ್ಪ ಅವರು ಈಗಾಗಲೇ ಬೆಂಗಳೂರಲ್ಲಿ ಬಿಡಾರ ಹೂಡಿದ್ದು ಪಕ್ಷದಿಂದ ಟಿಕೆಟ್ ತರಲು ಶತ ಪ್ರಯತ್ನ ಮಾಡುತ್ತಿದ್ದಾರೆ,
ಇವರಿಗೆ ಆತ್ಮೀಯರಾದ ಅನೇಕ ಮುಖಂಡರು ನರಸಪ್ಪ ಗೆ ಟಿಕೆಟ್ ಕೊಡಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿಸಿದರು.
ಈಗಾಗಲೇ ನರಸಪ್ಪ ಅವರು ಅಮಿತ್ ಶಾ ಮತ್ತು ನಿತಿನ್ ಗಡ್ಕರಿ ಕೇಂದ್ರದಲ್ಲಿರುವ ಪ್ರಮುಖರನ್ನು ನರಸಪ್ಪ ಅವರು ಭೇಟಿಯಾಗಿದ್ದಾರೆ ರಾಜ್ಯ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ, ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ತಮಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಪಕ್ಷದಿಂದ ಪ್ರಬಲರು ಪೈಪೋಟಿಯಲ್ಲಿದ್ದಾರೆ ನಗರದಲ್ಲಿ ಹಿಂದುಳಿದ ಮಡಿವಾಳ ಸಮಾಜಕ್ಕೆ ಸೇರಿದ ನರಸಪ್ಪ ಎಕ್ಲಾಸಪುರ ಅವರು ಟಿಕೆಟ್ ಗಾಗಿ ಪ್ರಯತ್ನಿಸುತ್ತಿರುವುದು, ಹಾಗೂ ನಾವು ಕೂಡ ಅವರಿಗೆ ಸಪೋರ್ಟ್ ಇರ್ತೇವೆ ಎಂದು ಪಕ್ಷದ ಕಾರ್ಯಕರ್ತರಾದ ವೀರೇಶ್ ತಿಳಿಸಿದರು.
ಬಿಜೆಪಿ ಪಕ್ಷ ನಗರದಲ್ಲಿ ಈ ಬಾರಿ ಹಲವಾರು ಬದಲಾವಣೆ ಕಾಣುತ್ತಿದೆ, ಬಿಜೆಪಿ ಪಕ್ಷದ ಕಾರ್ಯಕರ್ತರು ಹೇಗಾದರೂ, ಮಾಡಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ನಿರ್ಧಾರ ಮಾಡಿದ್ದಾರೆ ಎನ್ನಲ್ಲಾಗಿದೆ.

ಆಕಾಂಕ್ಷಿಗಳ ಎದೆಯಲ್ಲಿ ಡವಾಡವಾ
ನಗರದಲ್ಲಿ ಬಿಜೆಪಿ ಟಿಕೆಟ್ ಹಿಂದುಳಿದ ವರ್ಗದ ನಾಯಕನಿಗೆ ನೀಡಿದರೆ ಜಾತಿ ಲೆಕ್ಕಾಚಾರದಲ್ಲಿ ೧೦೦% ಗೆಲವು ಪಡೆಯಬಹುದು ಎನ್ನುವ ಲೆಕ್ಕಾಚಾರ ಮಾಡಲಾಗುತ್ತಿದೆ.
ನರಸಪ್ಪ ಅವರು ಟಿಕೆಟ್ ಗಾಗಿ ಪ್ರಬಲವಾಗಿ ಲಾಬಿ ಮಾಡುತ್ತಿರುವುದು ನೋಡಿದ್ರೆ ಟಿಕೆಟ್ ಸಿಗುತ್ತದೆ ಎನ್ನುವ ಭರವಸೆ ಇದೆ ಎಂದು ತಿಳಿಸಿದರು.
ಎಲೆಕ್ಷನ್ ಹತ್ತಿರ ಬರುತ್ತಿದಂತೆ ಆಕಾಂಕ್ಷಿಗಳ ಎದೆಯಲ್ಲಿ ಡವಾಡವಾ ಪ್ರಾರಂಭವಾಗಿರುವುದು ಸುಳ್ಳಲ್ಲಾ…