ನಗರ ಮತದಾರರು ಫುಟ್ಬಾಲ್ ಗೆ ಮತ ನೀಡಲು ಮನವಿ

ರಾಯಚೂರು,ಏ.೨೮- ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು,ತಮ್ಮ ಅಮೂಲ್ಯವಾದ ಮತವನ್ನು ಫುಟ್ಬಾಲ್ ಗೆ ಹಾಕುವ ಮೂಲಕ ನನ್ನನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಶಾಸಕ ಡಾ.ಶಿವರಾಜ ಪಾಟೀಲ್ ಅವರು,ನಗರ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದು ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡದೇ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ನಗರ ಕ್ಷೇತ್ರದಲ್ಲಿ ನಾನು ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಜನರಿಗೆ ಚಿರಪರಿಚಿತನಾಗಿದ್ದೇನೆ.ಕುಡಿಯುವ ನೀರು ಸಮಸ್ಯೆ ಅತ್ಯಂತ ಗಂಭೀರವಾಗಿದೆ.ಸರ್ಕಾರ ಕೊಡುವಂಥ ನೀರು ಅತ್ಯಂತ ಕಳಪೆ ಯಾಗಿದ್ದು,ವಿಷಪೂರಿತ ನೀರಿನಿಂದ ೭ ರಿಂದ ೮ ಜನರು ಸಾವನ್ನಾಪ್ಪಿದ್ದರೆ.ಇದಕ್ಕೆ ಕಾರಣ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹಾಗೂ ನಗರಸಭೆ ನೇರ ಕಾರಣ ಎಂದು ಆರೋಪಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಸರಿಯಾಗಿ ಚಿಕಿಸ್ತೆ ಸಿಗದೇ ಪರದಾಡುತ್ತಿದ್ದಾರೆ.ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ.ನಗರದಲ್ಲಿ ಇಂದು ಕಲುಷಿತ ವಾತಾವರಣ ನಿರ್ಮಾಣವಾಗಿದೆ.ಜಗತ್ತಿನಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆ ಯಾವುದಾದರೂ ಇದ್ದರೆ ಅದು ರಾಯಚೂರು ಜಿಲ್ಲೆಯಾಗಿದೆ.
ಶಕ್ತಿನಗರ ರಸ್ತೆ ಸೇರಿದಂತೆ ನಗರದ ಎಲ್ಲಾ ರಸ್ತೆಗಳು ತದೆಗೆಟ್ಟಿವೆ ಇದರಿಂದ ಸಾಕಷ್ಟು ಅಪಘಾತಗಳು ಜರುಗುತ್ತಿವೆ.ಇಂತ ಶಾಸಕರು ನಮಗೆ ಬೇಕಾಗಿಲ್ಲ ಆದ್ದರಿಂದ ರಾಯಚೂರು ನಗರ ಅಭಿವೃದ್ದಿಗಾಗಿ ಚುನಾವಣೆಗೆ ನಿಲ್ಲಿದ್ದೇನೆ ನನಗೆ ಒಂದು ಅವಕಾಶ ನೀಡಿದರೆ ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬೈ ಪಾಲ್ ರೆಡ್ಡಿಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.