ನಗರ ನೂತನ ಡಿಸಿಪಿ ಅಡ್ಡೂರು ಶ್ರೀನಿವಾಸಲು ಅಧಿಕಾರ ಸ್ವೀಕಾರ

ಕಲಬುರಗಿ,ಜೂ.10: ನಗರ ಪೋಲಿಸ್ ಉಪ ಆಯುಕ್ತರಾಗಿ ಗುರುವಾರ ಅಡ್ಡೂರು ಶ್ರೀನಿವಾಸಲು ಅವರು ಅಧಿಕಾರ ಸ್ವೀಕರಿಸಿದರು. ಈ ಮೊದಲು ಬೆಂಗಳೂರು ವೈರ್‍ಲೆಸ್ ಪೋಲಿಸ್ ವರಿಷ್ಠಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು.
ನಗರ ಪೋಲಿಸ್ ಉಪ ಆಯುಕ್ತ ಡಿ. ಕಿಶೋರಬಾಬು ಅವರನ್ನು ಕೋಲಾರ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳನ್ನಾಗಿ ರಾಜ್ಯ ಸರ್ಕಾರವು ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ಅಡ್ಡೂರು ಶ್ರೀನಿವಾಸಲು ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿತ್ತು.