ನಗರ ಠಾಣೆಗೆ ಕೊರೊನಾ ಉದ್ಘಾಟನೆ ವಿಳಂಬ

ಸಿಂಧನೂರು.ನ.14-ರಾಜಕಾರಣಿಗಳು ಸಾರ್ವಜನಿಕರಿಗೆ ಕೊರೊನಾ ಬಂದಿದೆ ಆದರೆ ನಗರ ಠಾಣಾ ಕಟ್ಟಡ ಸಂಪೂರ್ಣ ಗೊಂಡು ಉದ್ಘಾಟನೆ ಆಗದೆ ವಿಳಂಬವಾಗುವದು ನೊಡಿದರೆ ಪೊಲೀಸ್ ಠಾಣೆಗೆ ಕೊರೊನಾ ಬಂದಿದೆಯಾ ಅದಕ್ಕೆ ಠಾಣೆ ಉದ್ಘಾಟನೆಯಾಗದೆ ಮುಂದಕ್ಕೆ ಹೋಗುತ್ತಿದೆಯದೆಂದು ಜನ ಮಾತನಾಡಿಕೊಳ್ಳತ್ತಿದ್ದಾರೆ.
ನಗರದ ಪೊಲೀಸ್ ಠಾಣೆ ನೂತನ ಕಟ್ಟಡ ಸಂಪೂರ್ಣ ಗೊಂಡು 2 ತಿಂಗಳು ಆದರು ಸಹ ಠಾಣೆಯ ಕಟ್ಟಡಕ್ಕೆ ಉದ್ಘಾಟಿನೆ ಭಾಗ್ಯ ಬಂದಿಲ್ಲ ಯಾಕೆ ಎನ್ನುವ ಪ್ರಶ್ನೆ ಕಾಡತೊಡಗಿದೆ ರಾಜಕಾರಣಿಗಳು ಹಾಗು ಸಾರ್ವಜನಿಕರಿಗೆ ಬಂದ ಕೊರೊನಾ ನೂತನ ಪೊಲೀಸ್ ಠಾಣೆ ಕಟ್ಟಡಕ್ಕೆ ಕೊರೊನಾ ಪಾಸಿಟಿವ್ ಬಂದಿದ್ದು ನೆಗೆಟಿವ್ ಬರುವ ತನಕ ಉದ್ಘಾಟನೆ ಮಾಡುವುದಿಲ್ಲ ಎಂದು ಹೆಸರನ್ನು ಹೇಳಲು ಇಚ್ಚಿಸದ ಪೊಲೀಸರು ಪತ್ರಿಕೆ ಮುಂದೆ ತಮ್ಮ ಅನಿಸಿಕೆ ಹಂಚಿಕೊಂಡರು
ನೂತನ ಪೊಲೀಸ್ ಠಾಣೆ ಕಟ್ಟಡ ಉದ್ಘಾಟನೆ ಮಾಡದೆ ಇರುವದರಿಂದ ಠಾಣೆ ಉದ್ಘಾಟನೆ ಯಾಗುವ ತನಕ ಠಾಣೆ ಗೇಟಿನ ಮುಂದೆ ವ್ಯಕ್ತಿಯೊಬ್ಬ ದಾರಿಯಲ್ಲಿ ಹೋಗುವ-ಬರುವ ಜನರನ್ನು ಕರೆದು ಗಿಳಿ ಪಂಚಾಂಗ ಹೇಳುತ್ತಿದ್ದು ಪೊಲೀಸಠಾಣೆ ಉದ್ಘಾಟನೆಯಾವಾಗ ಎಂದು ಕೇಳಿದರೆ ನಾನು ಸರಿಯಾಗಿ ಹೇಳುವೆ ಆದರೆ ಅವರು ನನ್ನ ಹತ್ತಿರ ಬರುತ್ತಿಲ ಎಂದು ಗಿಳಿ ಪಂಚಾಂಗ ಹೇಳುವ ರಾಮ ಪತ್ರಿಕೆ ಜೊತೆ ಮಾತನಾಡಿದನು.
ಈಗ ಎ.ಪಿ.ಎಂ.ಸಿ ಯಲ್ಲಿ ನಗರ ಠಾಣೆ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದು ಸಾರ್ವಜನಿಕರು ಠಾಣೆಗೆ ಹೋಗಿ ಬರಲು ತುಂಬ ತೊಂದರೆ ಅನುಭವಿಸುತ್ತಿದ್ದಾರೆ ಹೊಸ ಕಟ್ಟಡ ಉದ್ಘಾಟನೆ ಮಾಡಿ ಠಾಣೆ ಆರಂಭಿಸಿ ಎಂದು ಶಾಸಕ ವೆಂಕಟ ರಾವ್ ನಾಡಗೌಡರನ್ನು ಪತ್ರಿಕೆ ಮಾತನಾಡಿಸಿದ್ದಾಗ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಪೊಲೀಸ್ ಠಾಣೆ ನೂತನ ಕಟ್ಟಡ ಉದ್ಘಾಟನೆ ವಿಳಂಬ ವಾಗಿದೆ ಅವರ ಸಮಯ ತಗೆದು ಕೊಂಡು ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು.
ಗೃಹ ಸಚಿವರು ಹಾಗು ಶಾಸಕ ವೆಂಕರಾವ್ ನಾಡಗೌಡರಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ನಗರ ಠಾಣೆ ನೂತನ ಕಟ್ಟಡ ಉದ್ಘಾಟನೆ ತಡವಾಗಿದ್ದು ಶ್ರೀಘದಲ್ಲೆ ಉದ್ಘಾಟಿನೆ ಮಾಡಲಾಗುವುದೆಂದು ಶಾಸಕರು ತಮಗೆ ತಿಳಿಸಿದ್ದಾರೆ ಎಂದು ಡಿ.ವೈ.ಎಸ್.ಪಿ ವಿಶ್ವನಾಥ್ ರಾವ್ ಕುಲಕರ್ಣಿ ಪತ್ರಿಕೆಗೆ ತಿಳಿಸಿದರು.
ಜಿಲ್ಲೆಯಲ್ಲಿಯೆ ಅತೀ ಹೆಚ್ಚು ಗಾಂಜಾ ಪ್ರಕರಣಗಳು ತಾಲ್ಲೂಕಿನಲ್ಲಿ ದಾಖಲಾಗಿದ್ದು ತುರ್ವಿಹಾಳ ಠಾಣೆ ವ್ಯಾಪ್ತಿಯಲ್ಲಿ -3,ಬಳಗನೂರ ಠಾಣೆ ವ್ಯಾಪ್ತಿಯಲ್ಲಿ -1,ಗ್ರಾಮೀಣ ಠಾಣೆ-5 ,ನಗರ ಠಾಣೆ -1 ಒಟ್ಟು 10 ಗಾಂಜಾ ಪ್ರಕರಣಗಳು ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂದಿಸಿಲಾಗಿದ್ದು ಮಟ್ಕಾ,ಇಸ್ಪೀಟ್ ಸೇರಿದಂತೆ ಆಕ್ರಮ ಚಟುವಟಿಕೆಗಳು ಎಲ್ಲಿಯಾದರು ನಡೆದ ಬಗ್ಗೆ ನಮಗೆ ತಿಳಿಸಿದರೆ ಅವುಗಳನ್ನು ತಡೆಗಟ್ಟಲು ಸಾದ್ಯ ಅದಕ್ಕೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಡಿ.ವೈ.ಎಸ್.ಪಿ ವಿಶ್ವನಾಥ್ ರಾವ್ ಕುಲಕರ್ಣಿ ಪತ್ರಿಕೆ ಗೆ ತಿಳಿಸಿದರು.