ನಗರ ಕ್ಷೇತ್ರ: ಶಿವರಾಜ ಪಾಟೀಲ್ ನಾಮಪತ್ರ ಸಲ್ಲಿಕೆ

ರಾಯಚೂರು, ಏ.೧೫- ಶಾಸಕ ಡಾ. ಶಿವರಾಜ ಪಾಟೀಲ್ ಅವರು ಇಂದು ಸಾಂಕೇತಿಕವಾಗಿ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಅವರಿಂದು ನಗರದ ಚುನಾವಣೆ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಕುಟುಂಬ ಸಮೇತ ಮನೆಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ರಜಿನಿಕಾಂತ್ ಚವಾಣ್ ಗೆ ನಾಮಪತ್ರ ಸಲ್ಲಿಸಿದರು. ಡಾ. ಶಿವರಾಜ ಪಾಟೀಲ್ ಪತ್ನಿ, ಎ ಪಾಪರೆಡ್ಡಿ ಸೇರಿದಂತೆ ಬೆಂಬಲಿಗರು ಸಾಥ್ ನೀಡಿದರು.