ನಗರ ಕ್ಷೇತ್ರದ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿ ಗುಡ್ಸಿ ನರಸಾರೆಡ್ಡಿ

ಜನ ಸೇವೆಯೇ ನನ್ನ ಗುರಿ, ಜನರಿಗಾಗಿ ನನ್ನ ಸೇವೆ
ರಾಯಚೂರು : ಫೆ ೨೩
ನಗರ ಕ್ಷೇತ್ರದ ಬಿಜೆಪಿ ವಲಯದಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಅಂತಿಮವಾಗುತ್ತದೆ ಎನ್ನುವ ಪ್ರಶ್ನೆಗೆ ಪರ್ಯಾಯವಾಗಿ ಮತ್ತೊಂದು ಹೆಸರು ಬಲವಾಗಿ ಕೇಳಿ ಬರುತ್ತಿದೆ ಅದೇ ಬಿಜೆಪಿ ಪಕ್ಷದ ಹಿಂದುಳಿದ ವರ್ಗದ ಜಿಲ್ಲಾ ಅಧ್ಯಕ್ಷರಾಗಿರುವ ಗುಡ್ಸಿ ನರಸರೆಡ್ಡಿ ಯವರ ಹೆಸರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಪಟ್ಟಿಯಲ್ಲಿ ಬಲವಾಗಿ ಹೆಸರು ಕೇಳಿಬರುತ್ತಿದೆ.
ಹಿಂದುಳಿದ ವರ್ಗದ ಪ್ರಭಾವಿ ನಾಯಕ, ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಪ್ರಥಮ ದರ್ಜೆ ಗುತ್ತೇದಾರರಾಗಿರುವ ಇವರು ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತಮನ್ನು ತಾವು ತೊಡಗಿಸಿಕೊಂಡಿದ್ದಾರೆ, ಮೊದಲಿನಿಂದ ಇವರು ನಾಯಕತ್ವ ಗುಣ ಹೊಂದಿದವರಾಗಿದ್ದು, ಎಲ್ಲಾ ಸಮುದಾಯದ ಮುಖಂಡರ ಜೊತೆಗೆ ಅನನ್ಯ ಸಂಬಂಧ ಬೆಳೆಸಿಕೊಂಡಿದ್ದಾರೆ.
ನರಸರೆಡ್ಡಿಯವರು ಕಳೆದ ೨೫ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಂತೆ ಪಕ್ಷಕ್ಕಾಗಿ ಸೇವೆ ಮಾಡುತ್ತಿದ್ದಾರೆ, ಯಾವುದೇ ಹುದ್ದೆಗೆ ಹತೋರಿಯದೇ ಜನ ಸೇವೆಯೇ ನನ್ನ ಗುರಿ, ಜನರಿಗಾಗಿ ನನ್ನ ಸೇವೆಯೆಂದು ತಮ್ಮ ಜೀವನ ಮುಡಿಪಾಗಿಟ್ಟಿರುವ ಇವರು ತಮ್ಮ ಪಾಲಿಗೆ ಬಂದಿದ್ದು ಪಂಚಮೃತವೆಂದು ತಿಳಿದು ಅಧಿಕಾರ ಇದ್ದರು ಇಲ್ಲದಿದ್ದರೂ ಸದಾ ಸಕ್ರಿಯವಾಗಿ ಎಲ್ಲಾ ಸಮುದಾಯದವರನ್ನ ಒಟ್ಟಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಕ್ಕಾಗಿ ಸೇವೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಪ್ರ ಪ್ರಥಮ ಭಾರಿಗೆ ೨೦೦೪ರಲ್ಲಿ ಬಿಜೆಪಿಯಿಂದ ಜಯಗಳಿಸಿದವರು ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡರಾದ ಎ. ಪಾಪರೆಡ್ಡಿಯವರು ಅಂದು ಅವರ ಸಮುದಾಯ ಬಲವಾಗಿ ಅವರ ಕೈ ಹಿಡಿದಿದ್ದರಿಂದ ಅವರು ಜಯಗಳಿಸಿ ವಿಧಾನಸೌಧ ಪ್ರವೇಶ ಮಾಡಿದರು.ನರಸಾರೆಡ್ಡಿಯವರು ಕೂಡ ಅವರ ಗರಡಿಯಲ್ಲಿಯೇ ಪಳಗಿದ್ದು ಸದಾ ಸಕ್ರಿಯವಾಗಿ ಬಿಜೆಪಿ ಪಕ್ಷದಲ್ಲಿ ತೊಡಗಿಕೊಂಡಿರುವ ನರಸಾರೆಡ್ಡಿಯವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಹಿಂದುಳಿದ ನಾಯಕರು ಸಭೆ ಮಾಡಿ ರಾಜ್ಯದ ಹಿರಿಯ ಮುಖಂಡ ರಿಗೆ ಒತ್ತಾಯಿಸಿದ್ದಾರೆ ಎಂದು ಮುನೂರುಕಾಪು ಸಮಾಜದ ಮುಖಂಡ ತಿಳಿಸಿದರು.
೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ದಿಸಲು ಮುಂಚೂಣಿಯಲ್ಲಿದ್ದರು,ಆಗ ಕೊನೆ ಕ್ಷಣದ ಬದಲಾದ ಸನ್ನಿವೇಶದಲ್ಲಿ ಹಿರಿಯರ ಮಾತಿಗೆ ತಲೆಬಾಗಿ ಪಕ್ಷದ ಅಭ್ಯರ್ಥಿ ಪರ ನಿಂತು ಕೆಲಸ ಮಾಡಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು, ಈಗ ಮತ್ತೆ ನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಗಾಗಿ ಹಲವಾರ ಬಳಿ ಚರ್ಚೆ ಮಾಡಿದ್ದೂ ಅನೇಕ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ನಾಯಕರು ಟಿಕೆಟ್ ನೀಡುವ ಭರವಸೆ ಕೊಟ್ಟಿದ್ದಾರೆಂದು ಬಿಜೆಪಿ ಮುಖಂಡ ತಿಳಿಸಿದರು.

ಬಾಕ್ಸ್
ಗುಡ್ಸಿ ನರಸರೆಡ್ಡಿಯವರು ಪ್ರಬಲ ಮುನ್ನೂರು ಕಾಪು ಸಮಾಜವನ್ನು ಪ್ರತಿನಿಧಿಸುವ ಕಾರಣ ಇವರಿಗೆ ಹಲವಾರು ಸಮುದಾಯದ ಸಹಕಾರವಿದೆ,ಅನೇಕ ಹಿರಿಯರು ಇವರಿಗೆ ಬೆನ್ನೆಲುಬಾಗಿದ್ದಾರೆ.
ಪಕ್ಷದ ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷರಾಗಿ ಬಡವರ ಪಾಲಿನ ಸೇವಕನಂತೆ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ಒಂದು ವೇಳೆ ಪಕ್ಷದ ಟಿಕೆಟ್ ದೊರೆತರೆ ಕ್ಷೇತ್ರದ ಜನತೆಯ ಜೊತೆಗೆ ಬೆಳೆದಿರುವ ಇವರಿಗೆ ಜನ ಆಶೀರ್ವಾದ ಮಾಡುತ್ತಾರೆ ಎನ್ನುವ ಮಾತುಗಳು ಕ್ಷೇತ್ರದ ಹಲವೆಡೆ ಕೇಳಿಬರುತ್ತಿದೆ.

ಬಾಕ್ಸ್
ಗುರಿ ಇಟ್ಟುಕೊಂಡು ಪರಿಶ್ರಮವಹಿಸಿ ಕೆಲಸ ಮಾಡುವ ಇವರು ಗುರಿಇಟ್ಟ ಕಾರ್ಯವನ್ನು ಮುಗಿಸದೆ ನಿದ್ದೆ ಮಾಡದ ಇವರು, ಹಲವಾರು ನಿರುದ್ಯೋಗ ಯುವಕರಿಗೆ ನೌಕರಿ ಕೊಡಿಸಿರುವ ಇವರು ಹಲವಾರು ಹೋರಾಟಗಳ ಮುಖಾಂತರ ಮನೆಯಿಲ್ಲದವರಿಗೆ ಮನೆ ಮಾಡಿಸಿಕೊಟ್ಟಿದ್ದಾರೆ, ಹೀಗೆ ಹಲವಾರು ಜನಸೇವೆಗಳ ಮುಖಾಂತರ ಕಾರ್ಯ ಮಾಡುತ್ತಿರುವ ಇವರು ನೂರಾರು ಬಡ ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ. ಹಾಗಾಗಿ ಈ ಬಾರಿ ನಗರ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಗಾಗಿ ಪ್ರಬಲ ಆಕಾಂಕ್ಷಿಯೆಂದು ಗುಡ್ಸಿ ನರಸಾರೆಡ್ಡಿ ಯವರ ಹೆಸರು ಬಲವಾಗಿ ಕೇಳಿ ಬರುತ್ತಿದೆ.