ನಗರ ಕ್ಷೇತ್ರಕ್ಕೆ ಬೋಸರಾಜುಗೆ ಕಾಂಗ್ರೆಸ್ ಟಿಕೆಟ್ ನೀಡಲಿ

ರಾಯಚೂರು,ಮಾ.೫ – ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರದಿಂದ ಎನ್.ಎಸ್. ಬೋಸರಾಜು ಅವರಿಗೆ ಕಾಂಗ್ರೆಸ್ ಟಿಕೇಟ್ ನೀಡಬೇಕು ಎಂದು ಮಾಜಿ ನಗರಸಭೆ ಸದಸ್ಯ ಪಿ.ನರಸಪ್ಪ ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಎನ್.ಎಸ್. ಬೋಸರಾಜು ಅವರು ಸರಳ,ಸಜ್ಜನಿಕೆಯ ಹಿರಿಯ ರಾಜಕಾರಣಿಯಾಗಿದ್ದು,ಇವರು ಶಾಸಕರಾಗಿದ್ದ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಇವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಒಬಿಸಿ ಅಭಿವೃದ್ದಿ ನಿಯಮಗಳಿಗೆ ಅನುದಾನ ಕಡಿತಗೊಳಿಸಿದ್ದಾರೆ.ಹಾಗೂ ಈ ಹಿಂದೆ ಸಿಗುತ್ತಿದ್ದ ಸಬ್ಸಿಡಿ ೪ ಲಕ್ಷದಿಂದ ೧ ಲಕ್ಷ ಮಾಡಿದ್ದಾರೆ.ಎಲ್ಲಾ ಉದ್ದಿಮೆಗಳು ಖಾಸಗೀಕರಣ ಮಾಡುವುದರಿಂದ ಮೀಸಲಾತಿಯು ಅಭದ್ರವಾಗುತ್ತಿದೆ.ಎಲ್ಲಾ ಜಾತಿಯ ಸಮೂಹಗಳು ಆತಂಕಕ್ಕೆ ಒಳಗಾಗಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹನುಮಂತು ನಾಯಕ, ಮನ್ನಥ ಏಗನೂರು,ಮಾರೂಫ್ ಖಾನ್ ಇದ್ದರು.