
ವಿಜಯಪುರ.ಏ೧೮:ಇಂದು ವಿಜಯಪುರ ಪಟ್ಟಣ ಏನಾದರು ಬೆಳೆದು ದೇವಾಲಯಗಳ ನಗರ ವಾಣಿಜ್ಯ ಕೇಂದ್ರವೆಂದು ಹೆಸರು ಮಾಡಿದ್ದರೆ, ಅದಕ್ಕೆ ದೈವೋಪಾಸನೆ ಹಾಗೂ ವ್ಯಾಪಾರದಲ್ಲಿ ಮೊದಲಿಗರಾಗಿದ್ದ ಹಿರಿಯ ನಗರ್ತ ಜನಾಂಗ ದ ಮುಖಂಡರುಗಳೇ ಕಾರಣವೆಂದು ಯೋಗ ದೀವಿಗೆಯ ಯೋಗ ಗುರು ವಿ ರವೀಂದ್ರ ತಿಳಿಸಿದರು.
ಅವರು ಇಲ್ಲಿನ ಶ್ರೀ ನಗರೇಶ್ವರ ಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಅಯೋಧ್ಯ ನಗರ ಶಿವಾಚಾರ ವೈಶ್ಯ ನಗರ್ತ ಯುವಕ ಸಂಘದ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಹಾಗೂ ಜನಾಂಗದ ಹಿರಿಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ದೇವನಹಳ್ಳಿ ಮುಖ್ಯ ರಸ್ತೆಯಲ್ಲಿನ ಸರ್ಕಾರಿ ಕಿರಿಯ ಕಾಲೇಜಿನ ಆಟದ ಮೈದಾನ, ಹೆರಿಗೆ ಆಸ್ಪತ್ರೆ, ಪಶುವೈದ್ಯ ಶಾಲೆ, ಮುಂತಾಗಿ ಹತ್ತು ಹಲವರು ಸಾರ್ವಜನಿಕ ಸೇವಾ ಕಾರ್ಯಕ್ರಮಗಳಿಗೆ ಜಾಗ ಹಾಗೂ ಕಟ್ಟಡ ನಿರ್ಮಿಸಲು ದಾನ ನೀಡಿದ ಅಂಕಪಟ್ಟಿ ನಂಜುಂಡಪ್ಪ, ಸಾಹುಕಾರ್ ಚಿಕ್ಕವೀರಣ್ಣ, ಕೋರ ಮಂಗಲ ರುದ್ರಪ್ಪ ಮುಂತಾದ ಹತ್ತು ಹಲವಾರು ಹಿರಿಯರು ನೀಡಿದ ಕೊಡುಗೆಯೆ ಇಂದಿನ ವಿಜಯಪುರದ ಏಳಿಗೆಗೆ ಕಾರಣವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪುರಸಭಾ ಮಾಜಿ ಅಧ್ಯಕ್ಷ ಎಂ ಸತೀಶ್ ಕುಮಾರ್ ರವರು ಮಾತನಾಡಿ ಹೆಚ್ಚಿನ ಸೇವಾ ಕಾರ್ಯಗಳನ್ನು ಮಾಡಿಕೊಂಡು ಹೋಗಲೆಂದು ಆಶಿಸಿದರು.
ಕಾರ್ಯದರ್ಶಿ ಬಿ ಅವಿನಾಶ್ ರವರು ಮಾತನಾಡಿ ಜನ ಮೆಚ್ಚುವ ಸಾರ್ವಜನಿಕ ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಯಿತು ಎಂದು ತಿಳಿಸಿದರು.
ಬೆಂಗಳೂರಿನ ಮಾತೃ ಸಂಸ್ಥೆಯ ಅಧ್ಯಕ್ಷರಾದ ಎಸ್ ಪ್ರಕಾಶ್ ರವರು ಮಾತನಾಡಿ ವಿಜಯಪುರ ಪಟ್ಟಣವು ಜನಾಂಗದ ಹೃದಯ ಸ್ಥಾನವಾಗಿದ್ದು ಇಲ್ಲಿ ಕೈಗೊಳ್ಳುವ ಎಲ್ಲಾ ಸೇವಾಕಾರ್ಯಗಳಿಗೂ ಮಾತೃ ಸಂಸ್ಥೆಯಿಂದ ಹೆಚ್ಚಿನ ಸಹಕಾರ ಸಹಾಯ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ಸಿ ಸಿದ್ದರಾಜುರವರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಮಾತೃ ಸಂಸ್ಥೆಯ ಕಾರ್ಯದರ್ಶಿ ಎಂ ಎಸ್ ಕೃಷ್ಣಮೂರ್ತಿ, ಖಜಾಂಚಿ ಎಂ ಶಂಕರ್, ನಿರ್ದೇಶಕರುಗಳಾದ ಸಿ ವಿಜಯರಾಜು, ಸುವರ್ಣ ಶಿವಕುಮಾರ್, ಯುವಕ ಸಂಘದ ಗೌರವಾಧ್ಯಕ್ಷರಾದ ಸಿ ಭಾಸ್ಕರ್ ಭಾಗವಹಿಸಿದ್ದರು.
ಸಂಘದ ನೂತನ ಅಧ್ಯಕ್ಷರಾಗಿ ಬೇಕರಿ ಎ ಮಂಜುನಾಥ್, ಗೌರವಾಧ್ಯಕ್ಷರಾಗಿ ಜೆ ಆರ್ ಪಿ ಮುರಳಿಧರ್, ಕಾರ್ಯದರ್ಶಿಗಳಾಗಿ ಎಂ ಅಮರ್, ಖಜಾಂಚಿಯಾಗಿ ಪಿ ಸುನಿಲ್, ಸಹಕಾರ್ಯದರ್ಶಿಯಾಗಿ ಸಿ ಮನೋಹರ್‌ರವರುಗಳು ಪದಾಧಿಕಾರ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಜನಾಂಗದ ಹಿರಿಯರಾದ ಟಿ ಸಿದ್ದಬಸಪ್ಪ, ಅಕ್ಕಾಯಮ್ಮ, ಮಾಳಿಗೆಪ್ಪ, ಚಿಕ್ಕವೀರಮ್ಮ, ಸರೋಜಮ್ಮ ರವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.