ನಗರೋತ್ಥಾನ ಯೋಜನೆ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲಿ: ಶಾಸಕ ಪಾಟೀಲ

ಹುಮನಾಬಾದ್: ಜ.11:ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ಪಟ್ಟಣದಲ್ಲಿ ನಡೆಯಬೇಕಾದ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು, ಎಂದು ಮಾಜಿ ಸಚಿವರು, ಹಾಲಿ ಶಾಸಕ ರಾಜಶೇಖರ್ ಪಾಟೀಲ ಸೂಚಿಸಿದರು.
ಪಟ್ಟಣದ ಪುರಸಭೆಯ ಮುಂಭಾಗದ ತೇರು ಮೈದಾನದಲ್ಲಿ ಜಿಲ್ಲಾ ನಗಾರಾಭಿವೃದ್ದಿ ಕೋಶದಿಂದ ಮಂಗಳವಾರ ನಡೆದ ನಗರೋತ್ಥಾನ ನಾಲ್ಕನೇ ಹಂತದ ವಿವಿಧ ಅಭಿವೃದ್ದಿ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅಮೃತ ನಗರೋತ್ಥಾನ ನಾಲ್ಕನೇ ಹಂತದ ಯೋಜನೆ ಅಡಿಯಲ್ಲಿ 5 ಕೋಟಿ 70 ಲಕ್ಷದ ಅನುದಾನದಲ್ಲಿ 50.70 ಲಕ್ಷದಲ್ಲಿ ಪಟ್ಟಣದ ವಿವಿಧ ಬಡಾವಣೆಯಲ್ಲಿ ಸಿಸಿ ರಸ್ತೆ, ಆರ್‍ಸಿಸಿ ಚರಂಡಿ, ನಿರ್ಮಾಣ, 157 ಲಕ್ಷದಲ್ಲಿ ಕಚೇರಿ ಕಟ್ಟಡ ಮತ್ತು ಕಂಪೌಡ ವಾಲ್ ಮತ್ತು ವಾಣಿಜ್ಯ ಮಳಿಗೆಗಳ ನಿರ್ಮಾಣ, ಹಾಗೂ 186 ಲಕ್ಷದಲ್ಲಿ ವಯಕ್ತಿಕ ಉಪಸಂಬಧಿಸಿದ ಕಾಮಗಾರಿ ಹಾಗೂ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲಾಗುತ್ತಿದೆ. ಎಂದರು.
ಅಭಿವೃದ್ದಿಗೆ ಎಲ್ಲರ ಸಹಾಯ, ಸಹಕಾರ ಬಹಳ ಅವಶ್ಯವಾಗಿದ್ದು, ಪಟ್ಟಣ ಸೇರಿದಂತೆ ಕ್ಷೇತ್ರದ ಅಭಿವೃದ್ದಿಗಾಗಿ ಈಗಾಗಲೇ ಸಾಕಷ್ಟು ಅನುದಾನ ನೀಡಿ ಅಭಿವೃದ್ದಿ ಪಡಿಸಲಾಗಿದೆ. ಇನ್ನು ಹಂತ, ಹಂತವಾಗಿ ಸಮಗೃ ಅಭಿವೃದ್ದಿಗಾಗಿ ನಾನು ಬದ್ದನಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಟಿಎಪಿಸಿಎಮ್‍ಎಸ್ ಅಧ್ಯಕ್ಷ ಅಭಿಷೇಕ್ ಆರ್ ಪಾಟೀಲ, ಪುರಸಭೆ ಅಧ್ಯಕ್ಷೆ ನೀತು ಮಲ್ಲಿಕಾರ್ಜುನ ಶರ್ಮಾ, ಉಪಾಧ್ಯಕ್ಷೆ ಸತ್ಯವತಿ ಮಠಪತಿ, ಮುಖ್ಯಾಧಿಕಾರಿ ಶಿವರಾಜ ರಾಠೋಡ, ಸದಸ್ಯರಾದ ಅಫ್ಸರ್ ಮಿಯ್ಯ, ಸುನೀಲ್ ಪಾಟೀಲ, ಬಾಸೀದ, ಗೋರೆಮಿಯ್ಯ, ಕಸ್ತೂರಬಾಯಿ ಪರಸನೋರ್, ಸವಿತಾ ಅಶೋಕ, ವೀರೇಶ ಸಿಗಿ, ರಮೇಶ ಕಲ್ಲೂರು, ವಿಜಯಕುಮಾರ ಭಾಸಪಳ್ಳಿ,, ವಿಜಯಕುಮಾರ ದುರ್ಗದ, ಹಳ್ಳಿಖೇಡ(ಬಿ) ಪುರಸಭೆ ಅಧ್ಯಕ್ಷ ನಾಗರಾಜ ಹಿಬಾರೆ, ಉಪಾಧ್ಯಕ್ಷೆ ಹುರುಮತ್ ಬೇಗಂ, ಸದಸ್ಯ ಮಹಾಂತಯ್ಯ ತೀರ್ಥ, ಪ್ರಮುಖರಾದ ರಮೇಶ ಡಾಕುಳಗಿ, ಮಲ್ಲಿಕಾರ್ಜುನ ಶರ್ಮಾ, ನರಸಪ್ಪಾ ಪರಸನೋರ್, ಸುರೇಶ ಘಾಂಗ್ರೆ, ಶಿವರಾಜ ಗಂಗೆಶೆಟ್ಟಿ, ಮಲ್ಲಿಕಾರ್ಜುನ ಮಾಶೆಟ್ಟಿ, ದತ್ತಕುಮಾರ ಚಿದ್ರಿ, ಇದ್ದರು.