ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಂದ ಲಸಿಕೆ ಅಭಿಯಾನಕ್ಕೆ ಚಾಲನೆ

ವಿಜಯಪುರ, ಜೂ.10-ನಗರ ಶಾಸಕ ಬಸನಗೌಡ ರಾ. ಪಾಟೀಲ್ ಯತ್ನಾಳರವರು ನಗರಾದ್ಯಂತ ಉಚಿತವಾಗಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಮನೆ ಮನೆಗೆ ಲಸಿಕೆ ಹಾಕುವ ಕಾರ್ಯಕ್ರಮದಡಿ, ಉಚಿತ ಲಸಿಕೆ ಆಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಅದರಂತೆ ಇಂದು ವಾರ್ಡ ನಂ.29 ರ ಬಾರಾಕೋಟ್ರಿ ತಾಂಡಾದ ಸಂತ ಶ್ರೀ ಸೇವಾಲಾಲ ಗುಡಿ ಆವರಣ ಹಾಗೂ ವಾರ್ಡ ನಂ.2 ರ ಅಫಜಲಪೂರ ಟಕ್ಕೆಯ ಸರಕಾರಿ ಶಾಲೆ ನಂ.49 ರ ಆವರಣದಲ್ಲಿ ಹಮ್ಮಿಕೊಂಡಂತ ಉಚಿತ ಲಸಿಕಾ ಅಭಿಯಾನಕ್ಕೆ ನಗರ ಶಾಸಕರ ಅನುಪಸ್ಥಿತಿಯಲ್ಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ ಉಚಿತ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಲಕ್ಷ್ಮಣ ಜಾಧವ್, ಪಾಲಿಕೆ ಮಾಜಿ ಸದಸ್ಯರಾದ ಅಶೋಕ ಬೆಲ್ಲದ, ಆರೋಗ್ಯಾಧಿಕಾರಿಗಳಾದ ಡಾ.ಕವಿತಾ ದೊಡ್ಡಮನಿ, ಮುಖಂಡರಾದ ಚಂದ್ರು ಚೌಧರಿ, ಪಾಂಡು ನಾಯಕ, ಬಾಬು ಶಿರಶ್ಯಾಡ, ಯೋಗೇಶ ನಡುವಿನಮನಿ, ಶ್ರೀನಿವಾಸ ಬೆಟಗೇರಿ, ರಾಜಶೇಖರ ಭಜಂತ್ರಿ, ಪ್ರಕಾಶ ಚವ್ಹಾಣ, ನಾಗರಾಜ ಮುಳವಾಡ, ಈರಣ್ಣ ಪಾಟೀಲ್, ಸದಾಶಿವ ಅಂಗಡಿ, ವಿಜಯಕುಮಾರ ಚವ್ಹಾಣ ಉಪಸ್ಥಿತರಿದ್ದರು.