ನಗರಾಭಿವೃದ್ಧಿ ಕೋಶದ ಅಧಿಕಾರಿ ಕೋವಿಡ್ ಗೆ ಬಲಿ

ಬಳ್ಳಾರಿ, ಮೇ.01: ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಇಂಜಿನಿಯರ್ (ಇಇ) ಕಾಳಪ್ಪ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಿಮಿತ್ತ ಬಳ್ಳಾರಿಯಿಂದ ಹಿಮಾಚಲ ಪ್ರದೇಶಕ್ಕೆ ಇವಿಎಂ ಮಷಿನ್​​ಗಳನ್ನ ತರಲು ಹೋಗುವಾಗ ಕೋವಿಡ್ ನೆಗೆಟಿವ್ ರಿಪೋರ್ಟ್ ಬಂದಿತ್ತು.
ಹಿಮಾಚಲ ಪ್ರದೇಶದಿಂದ ಬಳ್ಳಾರಿಗೆ ಏಪ್ರಿಲ್ 16ರಂದು ವಾಪಸಾದ ಮೇಲೆ ಕೋವಿಡ್​ ಸೋಂಕು ತಗುಲಿದ್ದು, ಟ್ರಾಮಾ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದರು. ಮಧುಮೇಹದಿಂದ ಬಳಲುತ್ತಿದ್ದ ಅವರು ನಿನ್ನೆ ಸಾವನ್ನಪ್ಪಿದ್ದಾರೆ.