ನಗರಾಭಿವೃದ್ಧಿಗೆ ಅನುದಾನ ಬಿಡುಗಡೆಗೆ ಸಚಿವರಿಗೆ ಮನವಿ

ಬಳ್ಳಾರಿ ಜ 13 : ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಇಂದು ರಾಯಚೂರು ಜಿಲ್ಲೆಯ ತಿಂಥಿಣಿ ಮಠದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರನ್ನು ಭೇಟಿ ಮಾಡಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಮತ್ತು ಅನುನತಿಗೆ ಕೋರಿ ಮನವಿ ಸಲ್ಲಿಸಿದರು.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ನಾಗರಿಕ ಸೌಲಭ್ಯ ನಿವೇಶನಗಳನ್ನು ಶಾಲಾ, ಕಾಲೇಜು, ಸಂಘ, ಸಂಸ್ಥೆಗಳಿಗೆ‌ ಮತ್ತು ಟ್ರಸ್ಟ್ ಗಳಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡುತಿದ್ದು, ಇದರ ಬದಲು ಕಂದಾಯ ಇಲಾಖೆಯಂತೆ
ನಗರಾಭಿವೃದ್ಧಿಪ್ರಾಧಿಕಾರಗಳು ಸಹ ನಾಗರಿಕ ಸೌಲಭ್ಯ ನಿವೇಶನಗಳನ್ನು ಮಾರಾಟ ಮಾಡಿ ನೊಂದಣಿ ಮಾಡಿಸಿಕೊಡುವ ರೀತಿ ಸುತ್ತೋಲೆ ಹೊರಡಿಸುವಂತೆ
ಬಳ್ಳಾರಿ ನಗರದ ಉತ್ತರ ಭಾಗದ ರಾಷ್ಟ್ರೀಯ ಹೆದ್ದಾರಿ-63 ರಿಂದ ಪ್ರಸ್ತಾಪಿತ ವಿಮಾನ ನಿಲ್ದಾಣಕ್ಕೆ ಸಂಪರ್ಕ ರಸ್ತೆಯನ್ನು ನಿರ್ಮಿಸುವ ಕುರಿತು 2011 ರಲ್ಲಿ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿರುತ್ತದೆ. 2011 ರಲ್ಲಿ ಯೋಜನಾ ಮೊತ್ತ 110 ಕೋಟಿ ರೂಪಾಯಿ ಆಗಿರುತ್ತದೆ. ಆದರೆ ಪರಿಷ್ಕೃತ ವಿಸ್ತೃತ ಯೋಜನಾ ವರದಿಯಲ್ಲಿ ಯೋಜನೆಗೆ 170 ಕೋಟಿ ಅವಶ್ಯಕವಾಗಿರುತ್ತದೆ ಆದುದರಿಂದ ವಿಶೇಷ ಅನುದಾನದಲ್ಲಿಡಿಯಲ್ಲಿ ಪರಿಷ್ಕೃತ ವಿಸ್ತೃತ ಯೋಜನಾ ಮೊತ್ತ 170 ಕೋಟಿ ರೂಪಾಯಿಗಳನ್ನು ಸದರಿ ರಸ್ತೆ ಯೋಜನೆಗೆ ಅನುದಾನವನ್ನು ಬಿಡುಗಡೆಗೊಳಸ ಬೇಕೆಂದು ಮನವಿ ಸಲ್ಲಿಸಿದ್ದಾರೆ.